ಸುದ್ದಿಮೂಲ ವಾರ್ತೆ ರಾಯಚೂರು , ಡಿ.15:
ಮಕ್ಕಳಿಗೆ ಮೊಬೈಲ್ ಗೀಳಿನಿಂದ ಹೊರ ತರಲು ಸಂಗೀತದ ಅಭಿರುಚಿ ಹಚ್ಚಿಿಸಬೇಕು ಎಂದು ವರ್ತಕರಾದ ಇಲ್ಲೂರು ಅನಂತ ಗೋಪಾಲಯ್ಯ ಶೆಟ್ಟಿಿ ಹೇಳಿದರು.
ನಗರದ ಸೋಮವಾರಪೇಟೆ ಮಠದಲ್ಲಿ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ವರ್ಷದ ಪುಣ್ಯಸ್ಮರಣೆಯ ನಿಮಿತ್ಯ ಎರಡು ದಿನಗಳ ಸಂಗೀತ ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಮಾತನಾಡಿದರು. ಶರಣ ಸಂತರ, ಗವಾಯಿಗಳವರ ಕಾರ್ಯಕ್ರಮಗಳನ್ನು ಹೆಚ್ಚೆೆಚ್ಚು ಆಯೋಜಿಸಿ ಚಿಕ್ಕ ಮಕ್ಕಳು ಹಾಗೂ ಯುವ ಪೀಳಿಗೆ ಮೊಬೈಲ್ ವ್ಯಸನಿಗಳಾಗುವುದನ್ನು ತಪ್ಪಿಿಸಬೇಕು ಎಂದರು.
ಪಂ. ಸೂಗೂರೇಶ ಅಸ್ಕಿಿಹಾಳ ಮಾತನಾಡಿ, ಒಬ್ಬ ಕಲಾವಿದ ಶ್ರೇಷ್ಠ ಸಂಗೀತಗಾರನಾಗಿ ಬೆಳೆಯಬೇಕಾದರೆ ಉತ್ತಮ ಗುರುವಿನ ಹತ್ತಿಿರ ಕಠಿಣ ಅಭ್ಯಾಾಸ ಮಾಡಿರಬೇಕು. ಇತ್ತೀಚೆಗೆ ಮಾಧ್ಯಮಗಳಲ್ಲಿ ಮತ್ತು ಯು ಟ್ಯೂಬ್ ಗಳಲ್ಲಿ ಪುಟ್ಟ ಮಕ್ಕಳು ಉತ್ತಮವಾಗಿ ಹಾಡುತ್ತಾಾರೆ ಅವರಿಗೆ ಒಳ್ಳೇ ಗುರುಗಳ ಅವಶ್ಯಕತೆ ಇದೆ ಎಂದರು.
ಹಾಡುಗಾರರೆಲ್ಲರೂ ಶ್ರೇಷ್ಠ ಗಾಯಕರಾಗಲು ಸಾಧ್ಯವಿಲ್ಲ, ಒಬ್ಬ ಕಲಾವಿದನನ್ನು ಬೆಳೆಸುವ ಗುಣ ಗುರುವಿನಲ್ಲಿರುತ್ತದೆ. ತಮ್ಮ ಮಕ್ಕಳಿಗೆ ಸಂಗೀತ ಅಭ್ಯಾಾಸ ಮಾಡಿಸುವುದಾದರೆ ಒಬ್ಬ ಗುರುವಿನ ಹತ್ತಿಿರ ಸಂಗೀತ ಕಲಿಸಿ ಆಗ ಆತನ ಬದುಕು ಬಂಗಾರವಾಗುತ್ತದೆ ಎಂದು ಪಾಲಕರಿಗೆ ಹೇಳಿದರು.
ನಂತರ ಪಂ.ಡಾ.ನರಸಿಂಹಲು ವಡವಾಟಿ, ಪಂ.ಸೂಗೂರೇಶ ಅಸ್ಕಿಿಹಾಳ, ರೇವಣಸಿದ್ಧ ಪುಂಡಲೀಕ ಪುಲಾರಿ, ವಿರುಪಾಕ್ಷಯ್ಯ ಸ್ವಾಾಮಿ ವಂದಲಿ, ಸಮೀರಣ ಜೋಶಿ, ಕುಮಾರಿ ಪೂರ್ವಿ ಅರಳಿಕಟ್ಟಿಿ ಸೇರಿ ಹಲವರು ಎರಡನೇ ದಿನದ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಡಾ.ಪಂ. ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟಿಿನ ಅಧ್ಯಕ್ಷ ಈರಣ್ಣ ಹೂಗಾರ ಜಾಲಿಬೆಂಚಿ, ಪಿ. ಚಿನ್ನಯ್ಯ ಸ್ವಾಾಮಿ, ಎ.ಎಸ್.ರಘುಕುಮಾರ, ಚೇತನಕುಮಾರ, ಕಲಾವಿದರು, ಕಲಾಭಿಮಾನಿಗಳು, ಸ್ಥಳಿಯ ಕಲಾವಿದರು, ಸಾರ್ವಜನಿಕರು ಮಹಿಳೆಯರು ಉಪಸ್ಥಿಿತರಿದ್ದರು.
ಸಂಗೀತ ಸಮ್ಮೇಳನ ಸಮಾರೋಪ ಮೊಬೈಲ್ಗೀಳು ತಪ್ಪಿಸಲು ಸಂಗೀತ ಕಲಿಸಿ – ಇಲ್ಲೂರು ಗೋಪಾಲಯ್ಯ

