ಸುದ್ದಿಮೂಲ ವಾರ್ತೆ ಕೊಪ್ಪಳ, ನ.07:
ಸುಕ್ಷೇತ್ರ ತಾಲೂಕಿನ ಹುಲಿಗಿ ಗ್ರಾಾಮದ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾಾನಕ್ಕೆೆ ಬಂದಿದ್ದ ಭಕ್ತ ಅಪಘಾತದಲ್ಲಿ ಮೃತ ಪಟ್ಟಿಿದ್ದಾಾನೆ.
ತಾಲೂಕಿನ ಬೂದಗುಂಪಾ ಗ್ರಾಾಮದ ದನಕನದೊಡ್ಡಿಿ ಕ್ರಾಾಸ್ ಹತ್ತಿಿರದ ಎನ್.ಹೆಚ್50 ರಾಷ್ಟ್ರೀಯ ಹೆದ್ದಾಾರಿಯಲ್ಲಿ ಭೀಕರ ರಸ್ತೆೆ ಅಪಘಾತ ಸಂಭವಿಸಿದೆ.
ಗುರುವಾರ ಶಹಪುರದಿಂದ ಇಲಕಲ್ ಕಡೆಗೆ ತೆರಳುತ್ತಿಿದ್ದ ಮೋಟಾರ್ ಸೈಕಲ್ಗೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಅತಿವೇಗ ಮತ್ತು ಆಲಕ್ಷತನದಿಂದ ಡಿಕ್ಕಿಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರನಾದ ಬಾಗಲಕೋಟೆ ಜಿಲ್ಲೆೆಯ ಇಲಕಲ್ ತಾಲೂಕಿನ ಗೊರೆಬಾಳ ಗ್ರಾಾಮದ ಬಸವರಾಜ ಕತ್ತಿಿ, ಹಿಂಬದಿ ಪ್ರಯಾಣಿಕರಾದ ಲಕ್ಷ್ಮವ್ವ ಮತ್ತು ಬಸವರಾಜರರಸ್ತೆೆಯ ಮೇಲೆ ಬಿದ್ದರು.
ಈ ವೇಳೆ ಟಿಪ್ಪರ್ನ ಎಡಗಡೆಯ ಚಕ್ರ ಬಸವರಾಜ( 35) ತಲೆಯ ಮೇಲೆ ಹಾದುಹೋಗಿ ಸ್ಥಳದಲ್ಲೇ ಮೃತಪಟ್ಟಿಿದ್ದಾಾನೆ. ಈ ವ್ಯಕ್ತಿಿ ಹುಲಿಗೆಮ್ಮನ ದರುಶನಕ್ಕೆೆಂದು ಬಂದು ದರುಶನ ಪಡೆದ ಬಳಿಕ ವಾಪಸ್ ಮರಳಿ ತಮ್ಮೂರಿನತ್ತ ತೆರಳುತ್ತಿಿದ್ದರು.
ಇನ್ನೂಳಿದಂತೆ ಲಕ್ಷ್ಮವ್ವ ಹಾಗೂ ಅವರ ಮಗ ಕೃಷ್ಣ ಗಾಯಗೊಂಡಿದ್ದಾಾರೆ. ಮೃತದೇಹವನ್ನು ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆೆ ಕಳುಹಿಸಲಾಗಿದೆ.
ಅಪಘಾತಕ್ಕೆೆ ಕಾರಣನಾದ ಟಿಪ್ಪರ್ ಚಾಲಕ, ಯಲಬುರ್ಗಾ ತಾಲೂಕಿನ ವೀರಾಪೂರ ಗ್ರಾಾಮದ ಹನುಮಂತಪ್ಪ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

