ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.09:
ಮೈಸೂರು ನಗರದ ಜನರ ಕನಸಿನ ನಿವೇಶನ ಖರೀದಿಗೆ ಗರ ಬಡಿಯುವಂತೆ ಮಾಡಿದ್ದ ಮುಖ್ಯಮಂತ್ರಿಿ ಸಿದ್ದರಾಮಯ್ಯ ವಿರುದ್ಧವೇ ಮಾಡಲಾಗಿದ್ದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಿಂದ ಸಿಎಂ ಮುಕ್ತರಾಗಿರುವಂತೆಯೇ ಮುಡಾ ಮತ್ತೆೆ ಸೈಟ್ ಹಂಚಿಕೆಗೆ ಮುಂದಾಗಿದೆ. ಮೈಸೂರಿನಲ್ಲಿ ಮುಡಾದಿಂದ ಹೊಸ ಬಡಾವಣೆ ನಿರ್ಮಾಣ ಮಾಡುವುದಾಗಿ ವಿಧಾನಪರಿಷತ್ನಲ್ಲಿ ನಗರಾಭಿವೃದ್ಧಿಿ ಸಚಿವ ಬೈರತಿ ಘೋಷಣೆ ಮಾಡಿದ್ದಾರೆ.
ಅರಮನೆ ನಗರಿ ಮೈಸೂರಿನಲ್ಲಿ 300 ಎಕರೆ ಪ್ರದೇಶದಲ್ಲಿ ನೂತನ ಬಡಾವಣೆ ನಿರ್ಮಾಣ ಮಾಡಲು ಯೋಜಿಸಲಾಗಿದ್ದು ಸಮಗ್ರ ಅಭಿವೃದ್ಧಿಿಗೆ ಮುಖ್ಯಮಂತ್ರಿಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು ಬಡಾವಣೆ ನಿರ್ಮಾಣಕ್ಕೆೆ ಮತ್ತು ಸೌಂದರ್ಯೀಕರಣಕ್ಕೆೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿಿನಲ್ಲಿ ಸದಸ್ಯ ಕೆ.ಶಿವಕುಮಾರ್ ಅವರ ಪ್ರಶ್ನೆೆಗೆ ಉತ್ತರ ನೀಡಿದ ಸಚಿವರು, ಸಮಗ್ರ ಮೈಸೂರು ಅಭಿವೃದ್ಧಿಿಗೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತಿಿದ್ದು, ಸುಸಜ್ಜಿಿತವಾಗಿ ನಿರ್ಮಾಣಕ್ಕೆೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿಿದೆ ಎಂದು ತಿಳಿಸಿದರು.ಮೈಸೂರಿನ ರಾಯನಕೆರೆ, ವರುಣಕೆರೆ ಸೇರಿದಂತೆ ಮತ್ತಿಿತರ ಕೆರೆಗಳ ಅಭಿವೃದ್ಧಿಿಯನ್ನು ಮಾಡಲಾಗುತ್ತಿಿದೆ. ಸ್ವಚ್ಛ ಭಾರತ್ ಅಭಿಯಾನದಡಿ ವಿವಿಧ ಅಭಿವೃದ್ಧಿಿ ಕಾಮಗಾರಿಗಳನ್ನು ನಡೆಸಲಾಗುತ್ತಿಿದೆ ಎಂದೂ ಅವರು ಹೇಳಿದರು.
ನಗರಾಭಿವೃದ್ಧಿಿ ಪ್ರಾಾಧಿಕಾರಗಳಿಂದ ಬಳ್ಳಾಾರಿಯ 100 ಎಕರೆ, ಬೀದರ್ ನಲ್ಲಿ 132 ಎಕರೆ, ಬೆಳಗಾವಿಯಲ್ಲಿ 130 ಎಕರೆ, ಚಾಮರಾಜನಗರದಲ್ಲಿ 14 ಎಕರೆ, ಚಿಕ್ಕಮಗಳೂರಿನಲ್ಲಿ 208 ಎಕರೆ, ಗದಗ-ಬೆಟಗೇರಿಯಲ್ಲಿ 18 ಎಕರೆ ಹಾಗೂ ಹಾಸನದಲ್ಲಿ 1142 ಎಕರೆ ಪ್ರದೇಶಗಳಲ್ಲಿ ಸುಸಜ್ಜಿಿತವಾದ ನೂತನ ಬಡಾವಣೆಗಳನ್ನು ನಿರ್ಮಾಣ ಮಾಡಲಾಗುತ್ತಿಿದೆ ಎಂದು ಅವರು ಸದನಕ್ಕೆೆ ಮಾಹಿತಿ ನೀಡಿದರು.
ಪಾರದರ್ಶಕವಾಗಿ ನಿವೇಶನ ಹಂಚಿಕೆ
ವಿವಿಧ ನಗರಗಳಲ್ಲಿ ನಾಗರಿಕರಿಗೆ ನಿವೇಶನ ಹಂಚಿಕೆಯಲ್ಲಿ ನಿಗದಿತ ಮೀಸಲಾತಿಯನ್ನು ಪಾಲಿಸಲಾಗುತ್ತಿಿದ್ದು, ಸಂಪೂರ್ಣವಾಗಿ ಪಾರದರ್ಶಕತೆಯನ್ನು ಕಾಪಾಡಲಾಗುತ್ತಿಿದೆ. ನದಿ ಮೂಲ ರಕ್ಷಿಸಿ ಬಡಾವಣೆಗಳ ಅಭಿವೃದ್ಧಿಿ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಅಗತ್ಯ ಬರ್ ಅನ್ನು ಕಾಯ್ದಿಿರಿಸಿ ಬಡಾವಣೆಗಳನ್ನು ಅಭಿವೃದ್ಧಿಿಪಡಿಸಲಾಗುತ್ತಿಿದೆ ಎಂದು ವಿವರಿಸಿದರು.
10 ಎಕರೆಗೂ ಮೇಲ್ಪಟ್ಟ ಬಡಾವಣೆಗಳನ್ನು ಅಭಿವೃದ್ಧಿಿಪಡಿಸುವಾಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಸ್.ಟಿ.ಪಿ ಯನ್ನು ಕಡ್ಡಾಾಯವಾಗಿ ಅಳವಡಿಸುವ ನಿಬಂಧನೆಯಿದ್ದು, ಅದರಂತೆ 10 ಎಕರೆಗಿಂತ ಮೇಲ್ಪಟ್ಟ ಎಲ್ಲಾ ಬಡಾವಣೆಗಳಲ್ಲಿ ಎಸ್.ಟಿ.ಪಿ ಸ್ಥಳಗಳನ್ನು ಗುರುತಿಸಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಭಿವೃದ್ಧಿಿಪಡಿಸಲಾಗುತ್ತಿಿದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ನಿವೇಶನ ವಿನ್ಯಾಾಸಕ್ಕೆೆ ವಿಶೇಷ ಸೇವೆ
ಸದಸ್ಯ ಮಂಜುನಾಥ್ ಭಂಡಾರಿ ಅವರು ಕೇಳಿದ ಮತ್ತೊೊಂದು ಪ್ರಶ್ನೆೆಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್ ಅವರು, ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕರಾವಳಿ ಜಿಲ್ಲೆಗಳು ಭೌಗೋಳಿಕವಾಗಿ ಭಿನ್ನವಾಗಿರುವುದರಿಂದ ಈ ಜಿಲ್ಲೆಗಳಿಗೆ ಅನ್ವಯವಾಗುವಂತೆ ಏಕ/ಬಹು ನಿವೇಶನ ವಿನ್ಯಾಾಸ ಅನುಮೋದನೆ ನೀಡುವ ಕುರಿತು ವಿಶೇಷ ಸೇವೆಗಳನ್ನು ಕಲ್ಪಿಿಸಲಾಗಿದೆ ಎಂದು ತಿಳಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಾಪ್ತಿಿಗೆ ಒಳಪಡದೇ ಇರುವ ಗ್ರಾಾಮ ಪಂಚಾಯತಿಯಲ್ಲಿನ ಒಂದು ಎಕರೆ ಒಳಗಿನ ಜಮೀನುಗಳಿಗೆ ಅನುಮೋದನೆ ನೀಡುವ ಪ್ರಕರಣಗಳಿಗೆ ತಾಂತ್ರಿಿಕ ಅನುಮೋದನೆ ನೀಡಲು ಸಹಾಯಕ ನಿರ್ದೇಶಕರ ಕಛೇರಿ ಹಾಗೂ ಹತ್ತಿಿರದ ಯೋಜನಾ ಪ್ರಾಾಧಿಕಾರಗಳ ನಗರ ಮತ್ತು ಗ್ರಾಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಾಯೋಜಿಸಿ, ತಾಲ್ಲೂಕು ಪಂಚಾಯತಿ ಕಛೇರಿಯಲ್ಲಿಯೇ ನಗರ ಮತ್ತು ಗ್ರಾಾಮಾಂತರ ಯೋಜನಾ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಕರಾವಳಿ ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯಕ್ಕೆೆ ಅನ್ವಯವಾಗುವಂತೆ ಏಕ/ಬಹು ನಿವೇಶನ ವಿನ್ಯಾಾಸ ಅನುಮೋದನೆ ನೀಡುವ ಕುರಿತ ನಿಯಮ ಗಳನ್ನು ಸಮನ್ವಯಗೊಳಿಸಲು ಮತ್ತು ವಿನ್ಯಾಾಸ ಅನುಮೋದನೆ ಯನ್ನು ಪಾರದರ್ಶಕತೆ ಹಾಗೂ ಜನ ಸ್ನೇಹಿಯಾಗಿಸಲು ಅನುಕೂಲವಾಗುವಂತೆ ಸೆಂಟರ್ ಾರ್ ಇ ಗವರ್ನೆನ್ಸ್ ವತಿಯಿಂದ ಯೂನಿೈಡ್ ಲ್ಯಾಾಂಡ್ ಮ್ಯಾಾನೇಜ್ಮೆೆಂಟ್ ಸಿಸ್ಟಮ್ ತಂತ್ರಾಾಂಶ ವನ್ನು ಅಭಿವೃದ್ಧಿಿಪಡಿಸಲಾಗುತ್ತಿಿದೆ ಎಂದರು.

