Congress wins in Mysore district, V. Somanna is upset
Siddaramaiah for the 9th time, GT Deve Gowda for the 5th time
ಸುದ್ದಿಮೂಲ ವಾರ್ತೆ,
ಮೈಸೂರು, ಮೇ 14: ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಆರ್ಭಟಿಸಿದೆ. ಈ ಪಕ್ಷ ನಿರೀಕ್ಷೆಗಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಧೂಳಿಪಟ ಮಾಡಿ, ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಅಡಳಿತ ವಿರೋಧಿ ಆಲೆಗೆ ಬಿಜೆಪಿ ತತ್ತರಿಸಿ ಹೋಗಿದೆ. ಹಲವಾರು ಬಾರಿ ಬಂದು ಪ್ರಧಾನಿ ಮೋದಿ ಅವರು ನಡೆಸಿದ ಮೋದಿ ಶೋ ಪ್ರಯೋಜನವಾಗಿಲ್ಲ. ಜೆಡಿಎಸ್ ಕೂಡ ಕಳೆದ ಬಾರಿಗಿಂತ ಈಗ 3 ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ ಭಾರಿ ಹಿನ್ನೆಡೆ ಸಾಧಿಸಿದೆ. ಬೆಂಗಳೂರಿನ ಗೋವಿಂದರಾಜ ನಗರದಿಂದ ಬಂದು ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾಜಿ ಸಿದ್ದರಾಮಯ್ಯನವರ ವಿರುದ್ದ ತೊಡೆ ತಟ್ಟಿದ್ದ ಮಾಜಿ ಸಚಿವ ವಿ.ಸೋಮಣ್ಣ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.
ಇದಲ್ಲದೆ ಚಾಮರಾಜನಗರದಲ್ಲೂ ಸೋಲನ್ನಪ್ಪಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ಥಾನಗಳನ್ನು ಗೆದ್ದಿದ್ದ
ಕಾಂಗ್ರೆಸ್ ಈಗ 8 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. 5 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ 2 ಕಡೆ ಗೆದ್ದು ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ಹಾಗೆಯೇ, 3 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಏಕಮಾತ್ರ ಸ್ಥಾನ ಪಡೆದು, 2 ಸ್ಥಾನಗಳನ್ನು ಕಳೆದುಕೊಂಡಿದೆ.
ಚುನಾವಣೆ ಆರಂಭದಲ್ಲಿ ಪ್ರಚಾರದಲ್ಲಿ ಹಿಂದಿದ್ದ ಸಿದ್ದರಾಮಯ್ಯನವರು 1 ವಾರ ಕ್ದೇತ್ರದಲ್ಲಿ ಮೊಕ್ಕಾಂ ಮಾಡಿ, ಗೆಲುವು ಮೂಲಕ 9 ನೇ ಬಾರಿಗೆ ಮತ್ತು ಹುಣಸೂರು ಕ್ಷೇತ್ರದಿಂದ ಜೆಡಿಎಸ್ನಿಂದ ಗೆಲ್ಲುವ ಮೂಲಕ ಜಿ.ಟಿ.ದೇವೇಗೌದರು 5ನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ.
ಹುಣಸೂರಿನಲ್ಲಿ ಜಿ.ಟಿ.ದೇವೇಗೌಡರ ಪುತ್ರ ಹರೀಶ್ ಗೌಡ, ಸಜ್ಜನ ರಾಜಕಾರಣಿಯಾಗಿದ್ದ ದಿವಂಗತ ಧ್ರುವ ನಾರಾಯಣ ಅವರ ಪುತ್ರ, ನಂಜನಗೂಡಿನಿಂದ, ಚಾಮರಾಜಕ್ಷೇತ್ರದಿಂದ ಕಾಂಗ್ರೆಸ್ ಕೆ. ಹರೀಶ್, ಕೃಷ್ಣರಾಜ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದ ಶ್ರೀವತ್ಸ ಮತ್ತು ಕೆ.ಆರ್.ನಗರದಿಂದ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಪ್ರಥಮ ಬಾರಿಗೆ ವಿಧಾನಸಭೆಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ಬಾರಿ ಜಿಲ್ಲೆಯಿಂದ ಆರು ಮಂದಿ ಹಳಬರು, ಐದು ಮಂದಿ ಹೊಸಬರು ಚುನಾಯಿತರಾಗಿದ್ದಾರೆ.
ಹಳಬರಿಗೆ ಸೋಲು
ಜೆಡಿಎಸ್ನಿಂದ ಪುನಾರಾಯ್ಕೆ ಬಯಸಿದ್ದ ಸಾ.ರಾ.ಮಹೇಶ್, ಪಿರಿಯಾಪಟ್ಟಣದಿಂದ ಕೆ.ಮಹಾದೇವ್. ಟಿ.ನರಸೀಪುರದಿಂದ ಆಶ್ವಿನ್ ಸೋತಿದ್ದರೆ, ಬಿಜೆಪಿಯ ನಾಗೇಂದ್ರ, ಕಾಂಗ್ರೆಸ್ನ ಸೋಮಶೇಖರ್, ಮಂಜುನಾಥ್ ಸೋಲು ಅನುಭವಿಸಿದ್ದಾರೆ.
——————————
ಕ್ಷೇತ್ರವಾರು ವಿವರ:
ವರುಣ ಕ್ಷೇತ್ರ
ಸಿದ್ದರಾಮಯ್ಯ ( ಕಾಂಗ್ರೆಸ್)- 1,19.816 ಮತಗಳು
ವಿ. ಸೋಮಣ್ಣ (ಬಿಜೆಪಿ)- 76,653.
ಡಾ. ಎನ್.ಎಲ್. ಭಾರತಿಶಂಕರ್-1037
ಗೆಲುವಿನ ಅಂತರ 46,163.
ಕೃಷ್ಣರಾಜನಗರ ಕ್ಷೇತ್ರ
ಡಿ.ರವಿಶಂಕರ್ (ಕಾಂಗ್ರೆಸ್)- 1.04502,.
ಸಾ.ರಾ.ಮಹೇಶ್ (ಜೆಡಿಎಸ್)- 78863.
ಹೊಸಹಳ್ಳಿ ವೆಂಕಟೇಶ್ (ಬಿಜೆಪಿ) 2350
ಗೆಲುವಿನ ಅಂತರ-25639
ಎಚ್.ಡಿ.ಕೋಟೆ ಕ್ಷೇತ್ರ
ಅನಿಲ್ ಚಿಕ್ಕಮಾದು (ಕಾಂಗ್ರೆಸ್)-84359
ಕೃಷ್ಣ ನಾಯಕ (ಬಿಜೆಪಿ) 49420
ಜಯಪ್ರಕಾಶ್ ಚಿಕ್ಕಣ್ಣ-43519
ಗೆಲುವಿನ ಅಂತರ-34939
ನರಸಿಂಹರಾಜ ಕ್ಷೇತ್ರ
ತನ್ವೀರ್ ಸೇಠ್( ನರಸಿಂಹ ರಾಜ)- 83480
ಎಸ್. ಸತೀಶ್ ಸಂದೇಶ್ ಸ್ವಾಮಿ-(ಬಿಜೆಪಿ)-52360
ಅಬ್ದುಲ್ ಮಜೀದ್ (ಎಸ್ಡಿಪಿಐ)- 41037
ಗೆಲುವಿನ ಅಂತರ-31120.
ಟಿ.ನರಸೀಪುರ ಕ್ಷೇತ್ರ
ಡಾ.ಎಚ್.ಸಿ.ಮಹದೇವಪ್ಪ( ಕಾಂಗ್ರೆಸ್)-77494.
ಅಶ್ವಿನ್ ಕುಮಾರ್ (ಜೆಡಿಎಸ್)-58960
ಡಾ.ಎಂ. ರೇವಣ್ಣ (ಬಿಜೆಪಿ)-20252
ಗೆಲುವಿನ ಅಂತರ-18534.
ಚಾಮರಾಜ ಕ್ಷೇತ್ರ
ಕೆ. ಹರೀಶ್ ಗೌಡ( ಕಾಂಗ್ರೆಸ್)-72519.
ಎಲ್.ನಾಗೇಂದ್ರ (ಬಿಜೆಪಿ)-68418.
ಎಚ್.ಕೆ.ರಮೇಶ್ (ಜೆಡಿಎಸ್)-4488
ಗೆಲುವಿನ ಅಂತರ-4104.
ನಂಜನಗೂಡು ಕ್ಷೇತ್ರ
ದರ್ಶನ್ ದ್ರುವನಾರಾಯಣ್ ( ಕಾಂಗ್ರೆಸ್ )-109125
ಬಿ.ಹರ್ಷವರ್ಧನ (ಬಿಜೆಪಿ)-61518.
ಗೆಲುವಿನ ಅಂತರ-47607.
ಚಾಮುಂಡೇಶ್ವರಿ ಕ್ಷೇತ್ರ
ಜಿ.ಟಿ.ದೇವೇಗೌಡ ( ಜೆಡಿಎಸ್)-104873.
ಎಸ್.ಸಿದ್ದೇಗೌಡ (ಕಾಂಗ್ರೆಸ್)-79373
ವಿ.ಕವೀಶ್ ಗೌಡ (ಬಿಜೆಪಿ)-51318.
ಗೆಲುವಿನ ಅಂತರ-25500.
ಹುಣಸೂರು ಕ್ಷೇತ್ರ
ಜಿ.ಡಿ.ಹರೀಶ್ ಗೌಡ(ಜೆಡಿಎಸ್)-94185.
ಎಚ್.ಪಿ.ಮಂಜುನಾಥ್ (ಕಾಂಗ್ರೆಸ್)-91782.
ದೇವರಹಳ್ಳಿ ಸೋಮಶೇಖರ (ಬಿಜೆಪಿ)-6215.
ಗೆಲುವಿನ ಅಂತರ-2403.
ಕೃಷ್ಣರಾಜ ಕ್ಷೇತ್ರ
ಟಿ.ಎಸ್. ಶ್ರೀವತ್ಸ (ಬಿಜೆಪಿ)-73670
ಎಂ.ಕೆ.ಸೋಮಶೇಖರ್ (ಕಾಂಗ್ರೆಸ್)-66457.
ಕೆ.ವಿ.ಮಲ್ಲೇಶ್ (ಜೆಡಿಎಸ್)-5027.
ಗೆಲುವಿನ ಅಂತರ-7213
ಪಿರಿಯಾಪಟ್ಟಣ ಕ್ಷೇತ್ರ
ಕೆ.ವೆಂಕಟೇಶ್ (ಕಾಂಗ್ರೆಸ್)-85289.
ಕೆ.ಮಹದೇವ (ಜೆಡಿಎಸ್ )-65740)
ಸಿ.ಎಚ್.ವಿಯಶಂಕರ್ (ಬಿಜೆಪಿ)-7297.
ಗೆಲುವಿನ ಅಂತರ-19549.