ಸುದ್ದಿಮೂಲ ವಾರ್ತೆ ರಾಯಚೂರು , ಡಿ.16:
ಅಕ್ರಮ ಕಲ್ಲಿದ್ದಲು ನಿಯಂತ್ರಣಕ್ಕೆೆ ಜನಪ್ರತಿನಿಧಿಗಳು ಕ್ರಮ ವಹಿಸಿ ಇದರಲ್ಲಿ ಭಾಗಿಯಾದ ಅಧಿಕಾರಿ-ಗುತ್ತಿಿಗೆದಾರರ ವಿರುದ್ಧ ಕ್ರಿಿಮಿನಲ್ ಪ್ರಕರಣ ದಾಖಲಿಸಲು ಆಗ್ರಹಿಸಿ ಡಿ.22 ರಂದು ವೈಟಿಪಿಎಸ್ ಆಡಳಿತ ಮಂಡಳಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಪ್ರತಿ ದಿನ 300 ಟನ್ ಅಕ್ರಮ ಕಲ್ಲಿದ್ದಲು ಸಾಗಣೆಯಾಗುತ್ತಿಿದೆ ಎಂಬ ವರದಿಗಳಿದ್ದು ಈ ಬಗ್ಗೆೆ ತನಿಖೆ ನಡೆಸಬೇಕು. ಈ ಅಕ್ರಮದ ಹಿಂದೆ ಇರುವ ಪವರ್ ಮೇಕ್ ಪ್ರಾಾಜೆಕ್ಟ್ ಲಿಮಿಟೆಡ್ ವ್ಯವಸ್ಥಾಾಪಕ ನಿರ್ದೇಶಕ ಕಿಶೋರಬಾಬು, ವ್ಯವಸ್ಥಾಾಪಕ ಕೆ. ಸುರೆಂದ್ರನಾಥ, ಮೇಲ್ವಿಿಚಾರಕ ಹರಿಕೃಷ್ಣ ವಿರುದ್ಧ ತಕ್ಷಣ ಕ್ರಿಿಮಿನಲ್ ಪ್ರಕರಣ ದಾಖಲಿಸಬೇಕು. ಪ್ರಭಾವಿ ಜನಪ್ರತಿನಿಧಿಗಳ ಹೆಸರು ಹೇಳಿ ಈ ವ್ಯವಹಾರ ಮಾಡುತ್ತಿಿದ್ದಾಾರೆ ಈ ಬಗ್ಗೆೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಟೆಂಡರ್ ನಿಯಮ ಉಲ್ಲಂಘಿಸಿದ್ದರಿಂದ ಟೆಂಡರ್ ರದ್ದುಪಡಿಸಿ ಕಲ್ಲಿದ್ದಲನ್ನು ಅಕ್ರಮವಾಗಿ ಹೊರಕ್ಕೆೆ, ಸಾಗಿಸುತ್ತಿಿರುವ ವೈ ಟಿ ಪಿ ಎಸ್ ಆಡಳಿತ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಾಗೂ ಅಧೀಕ್ಷಕ, ಸಹಾಯಕ ಇಂಜಿನಿಯರ್ಗಳ ಸೇವೆಯಿಂದ ಅಮಾನತ್ ಮಾಡಿದರೆ ಹುಳುಕು ಹೊರ ಬರಲಿದೆ. ಹೀಗಾಗಿ, ಇವರೆಲ್ಲರ ವಿರುದ್ಧ ಜಿಲ್ಲೆೆಯ ಜನಪ್ರತಿನಿಧಿಗಳು ಬದ್ದತೆ ತೋರಿ ಕ್ರಮ ಜರುಗಿಸಲು ಒತ್ತಾಾಯ ಮಾಡಲು ಆಗ್ರಹಿಸಿ ಧರಣಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ರಾಜ್ಯ ಸಂಚಾಲಕ ಎಲ್.ವಿ.ಸುರೇಶ, ಹನುಮೇಶ ಅರೋಲಿ,ಕ್ರುದ್ದೀನ್ ಅಲಿಅಹ್ಮದ್, ನಾಗೇಂದ್ರ,ರಾಜು, ದೇವಪುತ್ರ, ಹನುಮೇಶ, ಭೀಮಣ್ಣ ಇತರರಿದ್ದರು.
ಕಲ್ಲಿದ್ದಲು ಅಕ್ರಮ ಸಾಗಣೆ ಪ್ರಕರಣ ಡಿ.22ರಂದು ಅಧಿಕಾರಿಗಳ ಅಮಾನತ್ತು, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ – ನರಸಿಂಹಲು

