ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಸಣ್ಣ, ಮಧ್ಯಮ ಪತ್ರಿಕೆಗಳಿಗೆ ಪ್ರತ್ಯೇಕ ಹೆಚ್ಚುವರಿ ಜಾಹೀರಾತು ನೀಡಬೇಕು
ಈಗ ಸಣ್ಣ ಹಾಗೂ ಮಧ್ಯಮ ಪತ್ರಿಿಕೆಗಳನ್ನು ನಡೆಸುವುದು ತುಂಬಾ ಕಷ್ಟವಾಗಿದೆ. ಕೋವಿಡ್ ಬಳಿಕವಂತೂ ಹಲವು ಪತ್ರಿಿಕೆಗಳು ಮುದ್ರಣವಾಗದೆ ನಿಂತಿವೆ. ಸರ್ಕಾರ ನೀಡುವ ಜಾಹೀರಾತಿನ ಮೇಲೆ ಪತ್ರಿಿಕೆಗಳ ಉದ್ಯೋೋಗಿಗಳ ಭವಿಷ್ಯ ನಿಂತಿದೆ. ಇದನ್ನು ಸರ್ಕಾರ ಮನಗಂಡು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಜಿಲ್ಲೆಯ ಸಣ್ಣ ಹಾಗೂ ಮಧ್ಯಮ ಪತ್ರಿಿಕೆಗಳಿಗೆ ಪ್ರತ್ಯೇಕ ಹೆಚ್ಚುವರಿ ಜಾಹೀರಾತು ನೀಡಿ ಅವುಗಳನ್ನು ಉಳಿಸಬೇಕು ಎಂದು ಶಿವಕುಮಾರ್ ಇದೇ ವೇಳೆ ಮನವಿ ಮಾಡಿದರು.
ಕಲ್ಯಾಾಣ ಕರ್ನಾಟಕ ರಾಯಚೂರಿನಲ್ಲಿರುವ ಕೃಷಿ ಇಂಜಿನಿಯರಿಂಗ್ ವಿವಿಯನ್ನು ಪ್ರತ್ಯೇಕ ನಿರ್ದೆಶನಾಲಯವನ್ನಾಾಗಿ ರೂಪಿಸಿ ಮೇಲ್ದರ್ಜೆಗೇರಿಸಬೇಕು ಎಂದು ಕಾಂಗ್ರೆೆಸ್ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಕೆ. ಮನವಿ ಮಾಡಿದರು.
ವಿಧಾನ ಪರಿಷತ್ತಿಿನಲ್ಲಿ ಉತ್ತರ ಕರ್ನಾಟಕ ಅಭಿವೃದ್ದಿಯ ವಿಶೇಷ ಚರ್ಚೆಯಲ್ಲಿ ಪಾಲ್ಗೊೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಯಚೂರಿನಲ್ಲಿ ಆರಂಭಿಸಿರುವ ಕೃಷಿ ಇಂಜಿನಿಯರಿಂಗ್ ವಿವಿಯಲ್ಲಿ ಕಲಿತ ವಿದ್ಯಾಾರ್ಥಿಗಳು ಯಂತ್ರೋೋಪರಣಗಳನ್ನು ತಯಾರಿಸುವ ನೈಪುಣ್ಯತೆ ಪಡೆದಿರುತ್ತಾಾರೆ. ಇಲ್ಲಿವರೆಗೆ ಅಂದಾಜು ಮೂರು ಸಾವಿರ ವಿದ್ಯಾಾರ್ಥಿಗಳು ಶಿಕ್ಷಣ ಮುಗಿಸಿ ಹೊರಬಂದಿರಬಹುದು.
ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಇಂಜಿನಿಯರಿಂಗ್ ನಿರ್ದೇಶನಾಲಯ ಇಲ್ಲದ ಹಿನ್ನೆೆಲೆಯಲ್ಲಿ ಇವರು ಉದ್ಯೋೋಗ ಹುಡುಕಿಕೊಂಡು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ವಲಸೆ ಹೋಗುತ್ತಿಿದ್ದಾರೆ. ಇವರಿಗೆ ರಾಜ್ಯದಲ್ಲೇ ಉದ್ಯೋೋಗ ಸಿಕ್ಕರೆ ಕೃಷಿ ಯಂತ್ರೋೋಪಕರಣಗಳನ್ನು ರೂಪಿಸಿ ರೈತರಿಗೆ ಉಪಯೋಗ ಮಾಡಿಕೊಡುತ್ತಾಾರೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪ್ರತ್ಯೇಕ ನಿರ್ದೇಶನಾಲಯ ಆರಂಭಿಸಬೇಕು ಎಂದರು.
ಭಾರತದಲ್ಲಿ 1951ರಲ್ಲಿ ಶೇ.75 ರಷ್ಟು ರೈತರು ಇದ್ದರು. 2011ಕ್ಕೆೆ ಇದು ಶೇ. 52ಕ್ಕೆೆ ಇಳಿಯಿತು. ಈಗ ಇದು ಶೇ.40 ತಲುಪಿದೆ. ಮುಂದೆ ಇನ್ನು ಪರಿಸ್ಥಿಿತಿ ಕಷ್ಟವಾಗಲಿದೆ. ಹೀಗಾಗಿ ರೈತರು ಕೃಷಿ ಯಂತ್ರಗಳನ್ನು ಬಳಸಿಕೊಂಡು ವ್ಯವಸಾಯ ಮಾಡಬೇಕಿದೆ. ಇದಕ್ಕೆೆ ಸರ್ಕಾರದ ನೆರವು ಅಗತ್ಯ ಎಂದರು.
ಕೃತಕ ಬುದ್ಧಿಿಮತ್ತೆೆ ಬಳಸಿಕೊಂಡು ಯುವಕರು ಕೃಷಿ ಉಪಕರಣಗಳನ್ನು ರೂಪಿಸಲು ಸರ್ಕಾರ ನೆರವು ನೀಡಬೇಕು ಎಂದರು.
ಉತ್ತರ ಕರ್ನಾಟಕ ಮುಂದುವರೆದಿದೆ:
ಹಳೇ ಮೈಸೂರು ಪ್ರಾಾಂತ್ಯಕ್ಕೆೆ ಸೇರಿದ 13 ಜಿಲ್ಲೆಗಳು ಮೈಸೂರು ಮಹಾರಾಜರಿಂದ ಅಭಿವೃದ್ಧಿಿಗೊಂಡಿದ್ದವು. ಆಗ ಉತ್ತರ ಕರ್ನಾಟಕ ಹಿಂದುಳಿದಿದ್ದವು. ಆದರೆ ಈಗ ಪರಿಸ್ಥಿಿತಿ ಬದಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ಕೂಡ ಮುಂದುವರೆದಿವೆ. ಬೆಳಗಾವಿ ಶಿಕ್ಷಣದಲ್ಲಿ ಮುಂದುವರೆದಿದ್ದರೆ. ಕಲಬುರ್ಗಿ ಜಿಲ್ಲೆ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿ ಹಲವು ಜಿಲ್ಲೆಗಳು ಮುಂದುವರೆದಿವೆ. ಹೀಗಾಗಿ ಉತ್ತರ ಕರ್ನಾಟಕ, ಕಲ್ಯಾಾಣ ಕರ್ನಾಟಕ ಹಿಂದುಳಿದಿದೆ ಎನ್ನುವುದನ್ನು ಬಿಡಬೇಕು ಎಂದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿದರೆ ಮಾತ್ರ ಅಭಿವೃದ್ಧಿಿಯಾಗಲು ಸಾಧ್ಯ. ಇದಕ್ಕೆೆ ತಮಿಳುನಾಡು ಉದಾಹರಣೆ. ಕೇಂದ್ರ ಸರ್ಕಾರದ ಯೋಜನೆ ಎನ್ಆರ್ಜಿಯಲ್ಲಿ 13 ಕೋಟಿ ರೂ. ರಾಜ್ಯಕ್ಕೆೆ ಬರಬೇಕಿತ್ತು. ಆದನ್ನು 9 ಕೋಟಿಗೆ ಇಳಿಸಿದ್ದಾರೆ. ಅಲ್ಲದೆ 9 ಕೋಟಿ ರೂ. ಬಿಲ್ ನಲ್ಲೂ ಬಾಕಿ ಇದೆ. ಜಲಜೀವನ್ ಮಿಷನ್ನಲ್ಲಿ 2013-18ರ ಅವಧಿಯ 13 ಸಾವಿರ ಕೋಟಿ ರೂ. ಬಾಕಿ ಇದೆ.. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯದ ಪಾಲನ್ನು ನೀಡಬೇಕು ಎಂದು ಆಗ್ರಹಿಸಿದರು.

