ಸುದ್ದಿಮೂಲ ವಾರ್ತೆ ರಾಯಚೂರು, ಅ.04:
ಜಿಲ್ಲಾಾ ಕಾಂಗ್ರೆೆಸ್ ಸಮಿತಿ ರಚನೆಯಲ್ಲಿ ಕೇವಲ ಮೂರು ಜಾತಿಯವರಿಗೆ ಹೆಚ್ಚು ಪ್ರಾಾತಿನಿಧ್ಯ ನೀಡುವ ಮೂಲಕ ಬಹುತೇಕ ಸಣ್ಣ ಸಮಾಜ ಮತ್ತು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಆಕ್ರೋೋಶ ಉಂಟಾಗಿದೆ.
ಬಸವರಾಜ ಪಾಟೀಲ್ ಇಟಗಿ ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷರಾಗಿ ಒಂದು ವರ್ಷದ ಬಳಿಕ ಜಿಲ್ಲಾಾ ಸಮಿತಿ ರಚನೆ ಮಾಡಲಾಗಿದ್ದರೂ ಜನಸಂಖ್ಯೆೆ ಹೆಚ್ಚಿಿರುವ ಮತ್ತು ರಾಜಕೀಯ ಅಧಿಕಾರದಲ್ಲಿರುವ ಸಮುದಾಯದವರಿಗೆ ಮಣೆ ಹಾಕಿ ಹಿಂದುಳಿದ ವರ್ಗದ ಬಹುತೇಕ ಸಣ್ಣ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆೆಯಲ್ಲಿ ಪರಿಶಿಷ್ಟ ಪಂಗಡಕ್ಕೆೆ ಸೇರಿದ ಸಂಸದರು ಮತ್ತು ಮೂರು ಜನ ಕಾಂಗ್ರೆೆಸ್ ಶಾಸಕರು ಇದ್ದು ಆ ಸಮುದಾಯಕ್ಕೆೆ ಸೇರಿದವರಿಗೆ ಜಿಲ್ಲಾಾ ಕಾಂಗ್ರೆೆಸ್ನಲ್ಲಿ ಹೆಚ್ಚಿಿನ ಪ್ರಾಾತಿನಿಧ್ಯ ನೀಡುವ ಮೂಲಕ ಉಳಿದ ಸಣ್ಣ ಸಮುದಾಯಗಳಿಗೆ ಪ್ರಾಾತಿನಿಧ್ಯ ನೀಡಿಲ್ಲ ಎಂಬ ಕೂಗು ಎದ್ದಿದೆ.
ಇದರ ಜೊತೆಗೆ ಕಾಂಗ್ರೆೆಸ್ ಪಕ್ಷದಿಂದ ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷರು ಸೇರಿದಂತೆ ಓರ್ವ ಶಾಸಕ, ಇಬ್ಬರು ವಿಧಾನಪರಿಷತ್ ಸದಸ್ಯರು ಲಿಂಗಾಯತ ಸಮುದಾಯಕ್ಕೆೆ ಸೇರಿದವರಾಗಿದ್ದರು ಅದೇ ಸಮುದಾಯಕ್ಕೆೆ ಪ್ರಾಾತಿನಿಧ್ಯ ನೀಡಿ ಹಿಂದುಳಿದವರನ್ನು ಕಡೆಗಣಿಸಲಾಗಿದೆ ಎಂಬ ಟೀಕೆಗೆ ಜಿಲ್ಲಾಾ ಕಾಂಗ್ರೆೆಸ್ ಗುರಿಯಾಗಿದೆ.
ಹಿಂದುಳಿದ ವರ್ಗಕ್ಕೆೆ ಸೇರಿದ ಗಂಗಾಮತಸ್ಥ, ಯಾದವ, ಮಡಿವಾಳ, ಉಪ್ಪಾಾರ ಸಮುದಾಯಗಳಿಗೆ ಅವರ ಜನಸಂಖ್ಯೆೆಗೆ ಅನುಗುಣವಾಗಿ ಪ್ರಾಾತಿನಿಧ್ಯ ನೀಡಿಲ್ಲ ಅದರ ಜೊತೆಗೆ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆೆ ಸೇರಿದ ಯಾವ ಒಬ್ಬ ಮುಖಂಡನಿಗೆ ಪ್ರಾಾತಿನಿಧ್ಯ ನೀಡದೆ ಇರುವುದು ವ್ಯಾಾಪಕ ಟೀಕೆಗೆ ಗುರಿಯಾಗಿದೆ.
ಜಿಲ್ಲಾಾ ಉಪಾಧ್ಯಕ್ಷರು ಸೇರಿದಂತೆ ಕುರುಬ ಸಮುದಾಯಕ್ಕೆೆ-9, ಜಿಲ್ಲಾಾ ಉಪಾಧ್ಯಕ್ಷ ಸೇರಿದಂತೆ ಮುಸ್ಲಿಿಂ ಸಮುದಾಯಕ್ಕೆೆ-8, ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷ ಸೇರಿದಂತೆ ಲಿಂಗಾಯತ ಸಮಾಜಕ್ಕೆೆ-11, ಮುನ್ನೂರುಕಾಪು ಸಮಾಜಕ್ಕೆೆ-4, ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆೆ-6, ಲಂಬಾಣಿ ಸಮುದಾಯಕ್ಕೆೆ-3 ಜನರಿಗೆ ಪ್ರಾಾತಿನಿಧ್ಯ ನೀಡಲಾಗಿದೆ.
ಆದರೆ, ಪರಿಶಿಷ್ಟ ಜಾತಿಯ ಬಲಗೈ ಬಣದವರಿಗೆ ಒಂದೇ ಒಂದು ಸ್ಥಾಾನ ನೀಡಿಲ್ಲವಾದ್ದರಿಂದ ಬಲಗೈ ಜಾತಿಯ ಒಕ್ಕೂಟದ ವತಿಯಿಂದ ಜಿಲ್ಲಾಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಪ್ರದೇಶ ಕಾಂಗ್ರೆೆಸ್ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್, ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಹಾಗೂ ಗ್ರಾಾಮೀಣ ಶಾಸಕ ಬಸನಗೌಡ ದದ್ದಲ್ ಅವರಿಗೆ ಮನವಿ ನೀಡಿ ಕಾಂಗ್ರೆೆಸ್ ಪಕ್ಷದ ನಿಷ್ಟಾಾಂವತರಾಗಿರುವ ತಮ್ಮ ಸಮುದಾಯಕ್ಕೆೆ ಜಿಲ್ಲಾಾ ಕಾಂಗ್ರೆೆಸ್ನಲ್ಲಿ ಪ್ರಾಾತಿನಿಧ್ಯ ನೀಡುವಲ್ಲಿ ಅನ್ಯಾಾಯ ಮಾಡಲಾಗಿದೆ. ಅದನ್ನು ಸರಿಪಡಿಸದಿದ್ದರೆ ಮುಂದೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಾಮಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆೆ ಸೇರಿದವರಾಗಿದ್ದಾಾರೆ ಎಂಬ ನೆಪ ಹೇಳುವುದಾದರೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಕುರುಬ ಸಮುದಾಯದವರಾಗಿದ್ದು ಆ ಸಮುದಾಯಕ್ಕೆೆ ಸೇರಿದವರಿಗೆ ಏಕೆ ಪ್ರಾಾತಿನಿಧ್ಯ ನೀಡಲಾಗಿದೆ. ಅದಲ್ಲದೆ ಜಿಲ್ಲಾಾ ಉಸ್ತುವಾರಿ ಸಚಿವರು ಸೇರಿದಂತೆ ಒಬ್ಬ ವಿಧಾನಸಭಾ ಸದಸ್ಯರು ಇಬ್ಬರು ವಿಧಾನಪರಿಷತ್ ಸದಸ್ಯರು ಲಿಂಗಾಯತರು ಇದ್ದು ಅವರಿಗೆ ಏಕೆ ಜಿಲ್ಲಾಾ ಕಾಂಗ್ರೆೆಸ್ನಲ್ಲಿ ಪ್ರಾಾತಿನಿಧ್ಯ ನೀಡಲಾಗುತ್ತದೆ ಎಂದು ಪ್ರಶ್ನಿಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ಪ್ರಾಾತಿನಿಧ್ಯ ವಂಚಿತ ಸಮುದಾಯಗಳು ಕೇಳುತ್ತಿಿದ್ದಾಾರೆ.
ಕ್ರಿಿಶ್ಚಿಿಯನ್, ಬಾವಸಾರ ಸಮುದಾಯದವರಿಗೆ ಕೇವಲ ಒಬ್ಬಬ್ಬರಿಗೆ ಮಾತ್ರ ಪ್ರಾಾತಿನಿಧ್ಯ ನೀಡಿದ್ದು ಜಿಲ್ಲೆೆಯಲ್ಲಿ ಅತಿ ಹೆಚ್ಚು ಶಾಸಕರು ಮತ್ತು ಸಂಸದರನ್ನು ಹೊಂದಿದ ಎಸ್ಟಿ ಸಮುದಾಯಕ್ಕೆೆ ಅತಿ ಹೆಚ್ಚು 11 ಜನರಿಗೆ ಪ್ರಾಾತಿನಿಧ್ಯ ನೀಡಿರುವುದು ಯಾವ ಸಾಮಾಜಿಕ ನ್ಯಾಾಯ ಎಂದು ಪ್ರಶ್ನೆೆ ಮಾಡಿದ್ದಾಾರೆ.
ಉಳಿದಂತೆ ಅತಿ ಸೂಕ್ಷ್ಮ ಸಮುದಾಯಗಳಾದ ನೇಕಾರ, ಕುಂಬಾರ, ಹೂಗಾರ, ಸವಿತಾ, ಮಡಿವಾಳ ಸಮುದಾಯಗಳಿಗೆ ಪ್ರಾಾತಿನಿಧ್ಯ ನೀಡುವಲ್ಲಿ ಸಂಪೂರ್ಣ ತಾರತಮ್ಯವಾಗಿದೆ.
ಶೀಘ್ರವೇ ಈ ತಾರತಮ್ಯ ಸರಿಪಡಿಸದಿದ್ದರೆ ಮುಂಬರುವ ಸ್ಥಳೀಯ ಸಂಸ್ಥೆೆಗಳ ಚುನಾವಣೆಗಳಲ್ಲಿ ಬಹುಸಂಖ್ಯಾಾತ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರು ಸೇರಿದಂತೆ ಹಿಂದುಳಿದ ವರ್ಗಕ್ಕೆೆ ಸೇರಿದ ಸಣ್ಣ ಸಣ್ಣ ಸಮುದಾಯದವರು ಕಾಂಗ್ರೆೆಸ್ ಪಕ್ಷದ ವಿರುದ್ದ ತಿರುಗಿ ಬೀಳುವ ಸಾಧ್ಯತೆ ಇದ್ದು ಎಚ್ಚೆೆತ್ತುಕೊಳ್ಳದಿದ್ದರೆ ಪಕ್ಷಕ್ಕೆೆ ಗಂಡಾಂತರ ಖಚಿತ ಎಂಬ ಮಾತುಗಳು ವ್ಯಾಾಪಕವಾಗಿ ಕೇಳಿ ಬಂದಿವೆ.