ಸುದ್ದಿಮೂಲ ವಾರ್ತೆ
ತುಮಕೂರು, ಏ.17: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಹಿತ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ 35 ನಾಮಪತ್ರಗಳು ಸ್ವೀಕೃತಗೊಂಡಿರುತ್ತವೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ, ಹಾಲಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಬಹುಜನ ಸಮಾಜ ಪಾರ್ಟಿಯಿಂದ ಸತೀಶ ಕೆ.ಎಂ. ಅವರು ನಾಮಪತ್ರ ಸಲ್ಲಿಸಿರುತ್ತಾರೆ.
ತಿಪಟೂರು ಕ್ಷೇತ್ರದಿಂದ ಬಿಜೆಪಿ ಹಾಲಿ ಸಚಿವ ಬಿ.ಸಿ. ನಾಗೇಶ್, ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಾಕ್ಷರಿ, ಪಕ್ಷೇತರ ಅಭ್ಯರ್ಥಿಗಳಾದ ಎಂ.ರವಿ ಮತ್ತು ಹರೀಶ್ ಟಿ.ಎನ್. ಅವರುಗಳು ನಾಮಪತ್ರ ಸಲ್ಲಿಸಿದರು.
ತುರುವೇಕೆರೆ ಕ್ಷೇತ್ರದಿಂದ ಬಿಜೆಇಪ ಅಭ್ಯರ್ಥಿ ಎ.ಎಸ್.ಜಯರಾಮ್, ಜೆಡಿಎಸ್ನಿಂದ ಎಂ.ಟಿ.ಕೃಷ್ಣಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಬಿಎಂ. ಕಾಂತರಾಜ್ ಉಮೇದುವಾರಿಕೆ ಸಲ್ಲಿಸಿದರು.
ಕುಣಿಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ರಂಗನಾಥ್, ಭಾರತೀಯ ಜನತಾ ಪಕ್ಷದಿಂದ
ಡಿ.ಕೃಷ್ಣಕುಮಾರ್, ಸ್ವತಂತ್ರ ಅಭ್ಯರ್ಥಿಗಳಾಗಿ ಸುಮಾ ರಂಗನಾಥ್ ಮತ್ತು ಬಿ.ಬಿ. ರಾಮಸ್ವಾಮಿ ಗೌಡ ಕಣಕ್ಕಿಳಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜೆಡಿಎಸ್ನಿಂದ ಎನ್.ಗೋವಿಂದರಾಜು ಅವರು ಉಮೇದುವಾರಿಕೆ ಸಲ್ಲಿಸಿದರು.
ಕೊರಟಗೆರೆ ಕ್ಷೇತ್ರಕ್ಕೆ ಬಿಜೆಪಿಯಿಂದ ಬಿ.ಹೆಚ್. ಅನಿಲ್ ಕುಮಾರ್, ಸ್ವತಂತ್ರ ಅಭ್ಯರ್ಥಿ ಆರ್. ನಾರಾಯಣಪ್ಪ ನಾಮಪತ್ರ ಸಲ್ಲಿಸಿರುತ್ತಾರೆ. ಗುಬ್ಬಿ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಬಿ.ಎಸ್. ಪ್ರಭುಸ್ವಾಮಿ, ಜೆಡಿಎಸ್ನಿಂದ ಬಿ.ಎಸ್. ನಾಗರಾಜು, ಬಿಜೆಪಿಯಿಂದ ಎಸ್.ಡಿ. ದಿಲೀಪ್ ಕುಮಾರ್ ನಾಮಪತ್ರ ಸಲ್ಲಿಸಿದರು.
ಶಿರಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಆರ್. ಶಶಿಕುಮಾರ್, ಸ್ವಯಂ ಕೃಷಿ ಪಾರ್ಟಿಯಿಂದ ಕೆ.ಟಿ. ಗುಂಡರಾಜ್, ಉತ್ತಮ ಪ್ರಜಾಕೀಯ ಪಕ್ಷದಿಂದ ಅಶೋಕ, ಭಾರತೀಯ ಜನತಾ ಪಕ್ಷದಿಂದ ಸಿ.ಎಂ. ರಾಜೇಶ್ ಗೌಡ, ಜೆಡಿಎಸ್ನಿಂದ ಆರ್. ಉಗ್ರೇಶ್, ಕಾಂಗ್ರೆಸ್ನಿಂದ ಟಿ.ಬಿ. ಜಯಚಂದ್ರ ನಾಮಪತ್ರ ಸಲ್ಲಿಸಿರುತ್ತಾರೆ.
ಪಾವಗಡ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಎನ್.ರಾಮಾಂಜಿನಪ್ಪ, ಮಧುಗಿರಿ ಕ್ಷೇತ್ರಕ್ಕೆ ಜೆಡಿಎಸ್ನಿಂದ ಎಂ.ವಿ.ವೀರಭದ್ರಯ್ಯ, ಕಾಂಗ್ರೆಸ್ನಿಂದ ಕೆ.ಎನ್.ರಾಜಣ್ಣ, ಉತ್ತಮ ಪ್ರಜಾಕೀಯ ಪಕ್ಷದಿಂದ ಮುದ್ದುರಾಜು ಜಿ. ಅವರು ನಾಮಪತ್ರ ಸಲ್ಲಿಸಿರುತ್ತಾರೆ.