ಸುದ್ದಿಮೂಲ ವಾರ್ತೆ ರಾಯಚೂರು, ಅ.24:
ಇನ್ನೇನು ಗಿಡಕ್ಕೆೆ ಜೋತು ಬಿದ್ದ ಹತ್ತಿಿ ಬಿಡಿಸಬೇಕು ಎನ್ನುವಷ್ಟರಲ್ಲಿಯೇ ಧರೆಗೆ ಇಳಿದ ರಣ ಮಳೆ ಹತ್ತಿಿಘಿ, ಮೆಣಸಿನಕಾಯಿ ಬೆಳೆದ ರೈತರಿಗೆ ಬಾರೀ ನಷ್ಟದ ಮರುಕ ಹುಟ್ಟಿಿಸಿದೆ.
ಜಿಲ್ಲೆೆಯಾದ್ಯಂತ ಎರಡು ದಿನಗಳಿಂದ ಅಲ್ಲಲ್ಲಿ ಸುರಿಯುತ್ತಿಿರುವ ಮಳೆಯಿಂದಾಗಿ ರೈತರಲ್ಲಿ ಆತಂಕ ತಂದೊಡ್ಡಿಿದೆ. ಅಲ್ಲದೆ, ಬೆಳಗಿನಿಂದ ಸಂಜೆಯವರೆಗೂ ತಿಳಿ ಮೋಡ ನೋಡಿದ ರೈತರು ತುಸು ಮಂದಹಾಸದಲ್ಲಿದ್ದರು ಆದರೆ, ಸಂಜೆ ಹೊತ್ತಿಿಗೆ ಧರೆಗೆ ದಿಢೀರನೇ ಇಳಿದ ಮಳೆಯಿಂದಾಗಿ ಸಂಕಟ ಅನುಭವಿಸುವಂತಾಗಿದೆ.
ಗಿಡಕ್ಕೆೆ ಕಾಯಿ ಹತ್ತಿಿಯಾಗಿ ಟಿಸಿಲೊಡೆದು ಇಡೀ ಹೊಲ ಬೆಳ್ಳಗೆ ಕಾಣುತ್ತಿಿದೆ. ಇಂದು ನಾಳೆಯೊಳಗೆ ಹತ್ತಿಿ ಬಿಡಿಸಿ ಮನೆಗೆ ತಂದು ಸಂಗ್ರಹಿಸಿ ಮಾರುಕಟ್ಟೆೆಗೆ ತೆಗೆದುಕೊಂಡು ಹೋಗಬೇಕೆಂಬ ಕನಸಿದ್ದರೂ ಸುರಿದ ಮಳೆ ಆ ಹತ್ತಿಿ ನೆಲಕ್ಕೆೆ ಉದುರಿ ಬೀಳುವಂತೆ ಮಾಡಿದ್ದಲ್ಲದೆ, ಕಳೆಯನ್ನೇ ಕಸಿದು ಕೆಂಪಾಗಿಸಿದೆ ಎಂಬ ಚಿಂತೆ ಕಾಡುತ್ತಿಿದೆ.
ತುಟ್ಟಿಿಯಾದರೂ ಚಿಂತೆ ಇಲ್ಲ ಬರುವ ಕೂಲಿಕಾರರ ಮೂಲಕ ಪ್ರತಿ ಕೆಜಿಗೆ 15ರಿಂದ 16 ರೂ ನೀಡಿ ಹತ್ತಿಿ ಬಿಡಿಸಲು ಸಜ್ಜಾದರೂ ಮಳೆರಾಯ ಮಾತ್ರ ಅವಕಾಶ ಕೊಡದೆ ಕಂಗಾಲಾಗಿಸಿರುವುದು ನಷ್ಟದ ಭೀತಿ ಎದುರಾಗಿಸಿದೆ.
ಅತ್ತ ಮೆಣಸಿನಕಾಯಿ ಬೆಳೆಗೂ ತಂಪು ಹೆಚ್ಚಾಾಗುತ್ತಿಿರುವುದರಿಂದ ಬೂದು, ನುಸಿ ಪೀಡೆಯ ರೋಗ ಸಸಿಗೆ ಹರಡುವ ಭೀತಿ ಜೊತೆಗೆ ಮಳೆ ಮುಂದುವರಿದರೆ ಕೊಳೆಯುವ ದುಗುಢವೂ ಹೆಚ್ಚಿಿಸಿದೆ.
ಒಟ್ಟಾಾರೆ, ಹವಾಮಾನ ವೈಪರಿತ್ಯದಿಂದಾಗಿ ಮುಂದಿನ ಆರು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ರೈತರ ಬೆಳೆ ಹಾನಿ ತರುವ ಆತಂಕ ಮನೆ ಮಾಡಿದೆ.
ಮಳೆಯ ಪ್ರಮಾಣ :
ರಾಯಚೂರು ಜಿಲ್ಲೆೆಯಲ್ಲಿ ವಾಡಿಕೆಯಂತೆ ಕಳೆದ 24 ಗಂಟೆಗಳಲ್ಲಿ 2. 7 ಮಿಮೀ ಮಳೆಯಾಗಬೇಕಿತ್ತುಘಿ. ಆದರೆ, 20. 8 ಮಿಮೀ ಮಳೆ ಪ್ರಮಾಣ ದಾಖಲಾಗಿದೆ. ಜಿಲ್ಲೆೆಯ ದೇವದುರ್ಗ ತಾಲೂಕಿನಲ್ಲಿ 6.3 ಮಿಮೀ., ಲಿಂಗಸೂಗೂರಲ್ಲಿ 20.9 ಮಿಮೀ.,ಮಾನ್ವಿಿ 19.8 , ರಾಯಚೂರು 6.8, ಸಿಂಧನೂರು 39.6 , ಮಸ್ಕಿಿಯಲ್ಲಿ 45.1 ಹಾಗೂ ಸಿರವಾರ ತಾಲೂಕಿನಲ್ಲಿ 10 ಮಿಮೀ ಮಳೆ ಪ್ರಮಾಣ ದಾಖಲಾಗಿದೆ.

