ಸುದ್ದಿಮೂಲ ವಾರ್ತೆ ಸಿಂಧನೂರು, ಜ.04:
ಪತ್ರಕರ್ತರು ವೃತ್ತಿಿ ಪರತೆ ಬೆಳೆಸಿಕೊಳ್ಳಬೇಕು. ವ್ಯಕ್ತಿಿ ಓಲೈಕೆ ಮಾಡುವದನ್ನು ಬಿಟ್ಟು, ವಸ್ತುನಿಷ್ಠ ವರದಿಗಳು ಮೂಡಿದರೆ ಸಮಾಜದ ಸ್ವಾಾಸ್ಥ್ಯ ಸುಧಾರಿಸಲಿದೆ ಎಂದು ಹಿರಿಯ ಪತ್ರಕರ್ತ, ಕಲಬುರಗಿ ಪೀಠದ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್ ಸಲಹೆ ನೀಡಿದರು.
ನಗರ ಗಂಗಾವತಿ ರಸ್ತೆೆಯ ರಾಜಮಹಲ್ ಂಕ್ಷನ್ ಹಾಲ್ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದಿಂದ ಭಾನುವಾರ ಹಮ್ಮಿಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು. ಪತ್ರಿಿಕೋದ್ಯಮ ಪವಿತ್ರ ಮತ್ತು ಗೌರವದ ವೃತ್ತಿಿಯಾಗಿದೆ. ಪತ್ರಿಿಕೆಗಳಲ್ಲಿನ ವರದಿಗಳು ಸಮಾಜದ ಕನ್ನಡಿಯಂತಿರಬೇಕು. ಯಾವುದೇ ಆಮಿಷ ಅಥವಾ ಒತ್ತಡಕ್ಕೆೆ ಒಳಗಾಗದೆ ನಿಷ್ಠುರ ಮತ್ತು ನಿಖರವಾಗಿ ಬರಹಗಳು ಬರಬೇಕು ಎಂದು ಅಭಿಪ್ರಾಾಯಪಟ್ಟರು.
ಪತ್ರಕರ್ತರು ಕಾರ್ಮಿಕ ಇಲಾಖೆ ವ್ಯಾಾಪ್ತಿಿಯಲ್ಲಿ ಬರುವದರಿಂದ ಕಾರ್ಮಿಕ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳು ಸಿಗಬೇಕಿದೆ. ನಿವೃತ್ತಿಿ ಹೊಂದಿದ ಪತ್ರಕರ್ತರಿಗೆ ರೂ.3 ಸಾವಿರ ಇದ್ದ ಮಾಸಾಶನವನ್ನು ಮುಖ್ಯಮಂತ್ರಿಿ ಸಿದ್ಧರಾಮಯ್ಯ ಅವರು 2014 ರಲ್ಲಿ ರೂ.6 ಸಾವಿರ, 2018 ರಲ್ಲಿ ರೂ.10 ಸಾವಿರ, ಪ್ರಸ್ತುತ ರೂ.13 ಸಾವಿರಕ್ಕೆೆ ಹೆಚ್ಚಿಿಸಿದ್ದಾಾರೆ. ಗ್ರಾಾಮೀಣ ಪತ್ರಕರ್ತರಿಗೆ ಬಸ್ ಸೌಲಭ್ಯ ಒದಗಿಸಲು ಸರಕಾರ ಮುಂದಾಗಿದೆ. ಆದರೆ ಕಠಿಣ ನಿಯಮಗಳಿಂದಾಗಿ ಬಸ್ಗಳು ಮುಟ್ಟುತ್ತಿಿಲ್ಲ. ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನೆ ಅನಿವಾರ್ಯ ಎಂದರು.
ಸರ್ಕಾರದ ಕಾಮಗಾರಿಗಳ ಕುರಿತು ಮಾಹಿತಿ ಕೇಳುವ ಹಕ್ಕು ಮತ್ತು ಅಸವೇ ಮಾಹಿತಿ ಹಕ್ಕು ಕಾಯ್ದೆೆಯಾಗಿದೆ. ವಿನಾಃಕಾರಣ ಕಿರುಕುಳ, ಬ್ಲಾಾಕ್ಮೇಲ್ ಮಾಡುವ ಅರ್ಜಿದಾರರ ಅರ್ಜಿಗಳನ್ನು ನಿರ್ಬಂಧಿಸುವ ಹಕ್ಕು ಆಯುಕ್ತರಿಗೆ ಇರುತ್ತದೆ ಎಂದು ಆಯೋಗ ಕಾರ್ಯ-ವಿಧಾನಗಳ ಮಾಹಿತಿ ನೀಡಿದರು.
ಹಿರಿಯ ಪತ್ರಕರ್ತರ ಡಿ.ಎಚ್.ಕಂಬಳಿ ಮಾತನಾಡಿ, ರಾಜಕಾರಣಿಗಳಿಂದ ಪಾಠ ಹೇಳಿಸಿಕೊಳ್ಳುವ ಮಟ್ಟಿಿಗೆ ಇಳಿಯದೆ, ಪತ್ರಕರ್ತರು ವೃತ್ತಿಿನಿಷ್ಠೆೆ, ಬದ್ಧತೆಯಿಂದ ತಮ್ಮ ಮಿತಿಯಲ್ಲಿ ಕೆಲಸ ಮಾಡಬೇಕು. ವೃತ್ತಿಿ ಗೌರವ ಮತ್ತು ಸ್ವಾಾಭಿಮಾನಕ್ಕೆೆ ಧಕ್ಕೆೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಪತ್ರಕರ್ತರು ತನಿಖಾ ವರದಿಗಳನ್ನು ಮಾಡುವ ಮೂಲಕ ಸತ್ಯಾಾಂಶ ಹೊರತರುವ ಕೆಲಸದಲ್ಲಿ ನಿರತರಾಗಬೇಕು ಎಂದು ಹೇಳಿದರು.
ಆರ್ಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಪತ್ರಕರ್ತರ ಸಮಸ್ಯೆೆ ಇದ್ದರೆ ತಿಳಿಸಿ ವಿಧಾನ ಪರಿಷತ್ ಸದಸ್ಯರ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಾಮಿ ಕುಕನೂರು ಮಾತನಾಡಿ, ಬಸ್ಪಾಸ್ ನಿಯಮ ಸಡಿಲಗೊಳಿಸಬೇಕು. ಆರೋಗ್ಯ ಸಂಜೀವಿನ ಯೋಜನೆ ಎಲ್ಲ ಪತ್ರಕರ್ತರಿಗೆ ಅನ್ವಯ ಆಗುವಂತೆ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿಿಗಳ ಮೇಲೆ ಒತ್ತಡ ಹಾಕಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಾಮಿ ಕುಕನೂರು ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಗೋನಾಳ ಸೇರಿ ಎಲ್ಲ ಪದಾಧಿಕಾರಿಗಳಿಗೆ ಪ್ರತಿಜ್ಞಾಾವಿಧಿ ಭೋಧಿಸುವ ಮೂಲಕ ಪದಗ್ರಹಣ ನೆರವೇರಿಸಿದರು. ಜಿಲ್ಲಾಾ ಘಟಕದ ಉಪಾಧ್ಯಕ್ಷ ಅಶೋಕ ಬೆನ್ನೂರು ಸಂವಿಧಾನ ಪೀಠಿಕೆ ಬೋಧಿಸಿದರು. ನಂತರ ಕಲಬುರಗಿ ಪೀಠದ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್, ವಾಣಿಜ್ಯೊೊದ್ಯಮಿ ರಾಜೇಶ ಹಿರೇಮಠ, ಗೊಡಿತಿ ನಾಗೇಶ್ವರನಾಥ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿ.ಕೆ.ವಿಶ್ವನಾಥ ಚೌದರಿ ಅವರನ್ನು ಸನ್ಮಾಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕೆ.ಗೋನಾಳ, ಕಾಂಗ್ರೆೆಸ್ ಯುವ ಮುಖಂಡ ಬಸನಗೌಡ ಬಾದರ್ಲಿ ವಕೀಲ ಮಾತನಾಡಿದರು. ಜಿಲ್ಲಾಾ ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಶೇಖರ ಯರದಿಹಾಳ, ಮಹ್ಮದ್ ಮುಸ್ತಾ ಉಪಸ್ಥಿಿತರಿದ್ದರು. ಪತ್ರಕರ್ತ ವೀರೇಶ ಗಡ್ಡಿಿಮಾಳ ಪ್ರಾಾರ್ಥಿಸಿದರು. ಸುಷ್ಮಾಾ ಹಿರೇಮಠ ಭಾವಗೀತೆ ಹಾಡಿದರು. ಹಿರಿಯ ಪತ್ರಕರ್ತ ಪ್ರಹ್ಲಾಾದ ಗುಡಿ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಖಜಾಂಚಿ ಚಂದ್ರಶೇಖರ ಬೆನ್ನೂರು ಸ್ವಾಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮರೇಶ ಅಲಬನೂರು ನಿರೂಪಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘ; ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಓಲೈಕೆ ಬಿಟ್ಟು ವಸ್ತುನಿಷ್ಟ ವರದಿಗೆ ಆದ್ಯತೆ ನೀಡಿ : ವೆಂಕಟಸಿಂಗ್

