ಸುದ್ದಿಮೂಲ ವಾರ್ತೆ ಸಿಂಧನೂರು, ಜ.03:
ದೇಶದ ಎರಡನೇ ಶಕ್ತಿಿಪೀಠವಾದ ತಾಲೂಕಿನ ಸಿದ್ದಪರ್ವತ ಅಂಬಾಮಠಕ್ಕೆೆ 400 ವರ್ಷಗಳ ಸುಧೀರ್ಘ ಇತಿಹಾಸವಿದ್ದು, ಅಪಾರ ಸಂಖ್ಯೆೆಯ ಭಕ್ತರು ಇಲ್ಲಿಗೆ ಬರುತ್ತಿಿರುವದರಿಂದ ಅಂಬಾಮಠವನ್ನು ಯಾತ್ರಾಾ ಸ್ಥಳವಾಗಿ ಘೋಷಣೆ ಮಾಡಿ ಅಭಿವೃದ್ದಿ ಪಡಿಸಬೇಕಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಸಿಎಂ ಸಿದ್ದರಾಮಯ್ಯ, ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಿ ಅವರ ಗಮನ ಸೆಳೆದರು.
ತಾಲೂಕಿನ ಅಂಬಾಮಠದಲ್ಲಿ ಶನಿವಾರ ಸಂಜೆ ಅಂಬಾದೇವಿ ಜಾತ್ರಾಾ ಮಹೋತ್ಸವ, ಜಂಬೂ ಸವಾರಿಗೆ ಚಾಲನೆ ಹಾಗೂ ಸಾಲಗುಂದಾ ಏತ ನೀರಾವರಿ ಯೋಜನೆ ಸೇರಿ ವಿವಿಧ ಇಲಾಖೆಗಳ ಸುಮಾರು 3 ನೂರು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಾಪನೆ, ಉದ್ಘಾಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹರಿವಾಣದ ಚಿದಾನಂದ ಅವಧೂತರು ಸುಮಾರು 400 ವರ್ಷಗಳ ಹಿಂದೆ ಇಲ್ಲಿಗೆ ಬಂದು ತಪಸ್ಸು ಮಾಡಿ ದೇವಿಯನ್ನು ಪತ್ಯಕ್ಷವಾಗಿಸಿಕೊಂಡು ವರ ಪಡೆದಿದ್ದಾಾರೆ ಎನ್ನುವ ನಂಬಿಕೆ ಶ್ರೀ ಕ್ಷೇತ್ರದ್ದಾಾಗಿದೆ. ದೇಶದ 18 ಶಕ್ತಿಿಪೀಠಗಳಲ್ಲಿ ಅಂಬಾಮಠವೂ ಒಂದು. ರಾಜ್ಯದ ನಾನಾ ಭಾಗಗಳಿಂದ ಸೇರಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದ ಲಕ್ಷಾಂತರ ಭಕ್ತರು ಬರುತ್ತಾಾರೆ. ಈ ಪವಿತ್ರ ಸ್ಥಳದ ಅಭಿವೃದ್ದಿಗೆ ಹೆಚ್ಚಿಿನ ಅನುದಾನ ಬೇಕಿದೆ. ಸರಕಾರ ಯಾತ್ರಾಾ ಸ್ಥಳವಾಗಿ ಘೋಷಣೆ ಮಾಡಿ, ಅಭಿವೃದ್ದಿ ಕೆಲಸಗಳಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಸಿಂಧನೂರು ತಾಲೂಕಿನಲ್ಲಿ ನಿತ್ಯವೂ 25 ಸಾವಿರಕ್ಕೂ ಅಧಿಕ ವಿದ್ಯಾಾರ್ಥಿಗಳು ಅಭ್ಯಾಾಸ ಮಾಡಲು ಸಿಂಧನೂರು ನಗರಕ್ಕೆೆ ಬರುತ್ತಾಾರೆ. ಅವರಿಗಾಗಿಯೇ 5 ಕೋಟಿ ವೆಚ್ಚದಲ್ಲಿ 15 ವಿಶೇಷ ಬಸ್ಗಳ ವ್ಯವಸ್ಥೆೆ ಮಾಡಿ ಇಂದು ಉದ್ಘಾಾಟನೆ ಮಾಡಲಾಗಿದೆ. ಇದು ರಾಜ್ಯದಲ್ಲಿಯೇ ಮೊಟ್ಟಮೊದಲ ವಿನೂತನ ಯೋಜನೆಯಾಗಿದೆ ಎಂದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ 15 ಬಸ್ಗಳ ಉದ್ಘಾಾಟನೆ ಅಂಬಾಮಠ ಯಾತ್ರಾ ಸ್ಥಳವಾಗಿ ಅಭಿವೃದ್ದಿ – ಬಾದರ್ಲಿ

