ಸುದ್ದಿಮೂಲ ವಾರ್ತೆ
ಆನೇಕಲ್, ಆ.27 ತಾಲೂಕಿನ ಮರಸೂರು ಸಮೀಪವಿರುವ ಪಂಚವಟಿ ಕೇಂದ್ರದಲ್ಲಿ ಇಂದು ಮನೋನಂದನ ಸಂಸ್ಥೆಯ ವತಿಯಿಂದ ಬುದ್ಧಿಮಾಂದ್ಯ (ವಿಶೇಷ ಅಗತ್ಯವುಳ್ಳ) ಮಕ್ಕಳ ಶಾಲೆಯ ಕಟ್ಟಡ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅನಿಲ್ ಕುಮಾರ್ ಆಟೋಮೊಬೈಲ್ಸ್ ಕಂಪನಿಯ ಮಾಲಿಕ ಮತ್ತು ಸುನಿಲ್ ಕುಮಾರ್ ಏವಿನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕರು ಹಿಂದೂ ಸೇವಾ ಕೇಂದ್ರ ಸುರೇಶ್ ಟಿವಿ ರಾಜು ಮನೋನಂದನ ಟ್ರಸ್ಟ್ ನ ಮಿಲಿಂದ ಗೋಕುಲೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಇದೇ ವೇಳೆ ಮನೋನಂದನ ಟ್ರಸ್ಟ್ ನ ಮಿಲಿಂದ ಗೋಖಲೆ ಮಾತನಾಡಿ, ಈಗಾಗಲೇ ಈ ಕಟ್ಟಡದಲ್ಲಿ ಮಹಿಳೆಯರು ಹೋಲಿಗೆ ಯಂತ್ರ ತರಬೇತಿಗೆ ಜಾಗವನ್ನು ಬಳಸಿಕೊಂಡಿದ್ದಾರೆ. ಈ ಕಟ್ಟಡವನ್ನು ನಿರ್ಮಾಣ ಮಾಡಲು ಅನಿಲ್ ಮತ್ತು ಸುನಿಲ್ ಪ್ರೈವೇಟ್ ಕಂಪನಿಯ ಮಾಲೀಕರು ಸಾಕಷ್ಟು ಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಈ ಕಟ್ಟಡವನ್ನು ಸದ್ಬಳಕೆಯನ್ನು ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟಿವಿ ರಾಜು ಹಿಂದೂ ಸೇವಾ ಕೇಂದ್ರ ಟ್ರಸ್ಟ್ ನ ಅಧ್ಯಕ್ಷ ಸುರೇಶ್ ಅನಿಲ್ ಕುಮಾರ್ ಆಟೋಮೊಬೈಲ್ಸ್ ಮಾಲಿಕ ಸುನೀಲ್ ಕುಮಾರ್ ಏವಿನ್ ಪ್ರವೇಟ್ ಲಿಮಿಟೆಡ್ ಕಂಪನಿಯ ಮಾಲೀಕ ಮನೋನಂದನ ಟ್ರಸ್ಟ್ ನ ಮಿಲಿಂದ ಗೋಕುಲೆ ಸ್ಥಳೀಯರು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.