ಸುದ್ದಿಮೂಲ ವಾರ್ತೆ
ಆನೇಕಲ್, ಮೇ 18: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ಸಿಟಿ ಸಮೀಪದ ಇನ್ಫೊಸಿಸ್ ಬಳಿ ಡಿಜಿಟಲ್ ಮಾದರಿಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ವತಿಯಿಂದ (ಎಲ್ಸಿಯಾ )ಅತ್ಯಾಧುನಿಕವಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಪ್ರಯಾಣಿಕರಿಗಾಗಿ ತಿಂಡಿ ತಿನಿಸು ತಂಪು ಪಾನೀಯಗಳ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
ಇದೇ ವೇಳೆ ಎಲೆಕ್ಟ್ರಾನಿಕ್ ಸಿಟಿ ಟೌನ್ಶಿಪ್ ಆಫೀಸರ್ ಅನಿರುದ್ಧ ಗುಡಿ ಮಾತನಾಡಿ, ಈಗಾಗಲೇ ಡಿಜಿಟಲ್ ಬಸ್ ನಿಲ್ದಾಣನ್ನು ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅಲ್ಲಿನ ಸೌಲಭ್ಯಗಳ ಕುರಿತು ವಿವರಿಸಿದರು.
ಇನ್ನು ಮೂರು ಕಡೆಗಳಲ್ಲಿ ಈ ರೀತಿಯ ಡಿಜಿಟಲ್ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳ ಸುರಕ್ಷತೆ, ಮಳೆ ಬಂದಾಗ ಮಳೆ ನೀರು ಸಂಗ್ರಹ, ಅತ್ಯಧಿಕ ತಂತ್ರಜ್ಞಾನದ ಸಿಸಿಟಿವಿ ಅಳವಡಿಕೆ ಹಾಗೂ ಬಸ್ಗಳು ಬರುವ ಬಗ್ಗೆ ಮಾಹಿತಿ ಈ ಬಸ್ ನಿಲ್ದಾಣದಲ್ಲಿ ಸಿಗುತ್ತದೆ ಎಂದು ಅನಿರುಧ್ ಗುಡಿ ಮಾಹಿತಿ ನೀಡಿದರು
ಬಿಎಂಟಿಸಿ ವ್ಯವಸ್ಥಾಪಕರು ಮತ್ತು ಟ್ರಾಫಿಕ್ ಡಿಸಿಪಿ ಸಲಿಂ ನೂತನ ಡಿಜಿಟಲ್ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದರು.