ಸುದ್ದಿಮೂಲವಾರ್ತೆ
ಕೊಪ್ಪಳ ಜು 22: ಹನುಮಸಾಗರ ಸಮೀಪದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನ ಇಟಗಿ ಶಾಲೆಯಲ್ಲಿ ಗ್ರಂಥಾಲಯ ಮತ್ತು ಪ್ರಯೋಗಾಲಯ ಕೊಠಡಿ ಉದ್ಘಾಟಿಸಲಾಯಿತು.
ಉದ್ಘಾಟನೆ ಮಾಡಿ ಮಾತನಾಡಿದ ಕೊಪ್ಪಳವಭಾರತೀಯ ಜೀವ ವಿಮಾ ನಿಗಮ ವ್ಯವಸ್ಥಾಪಕ ಅಧಿಕಾರಿ ಸುರೇಶ ಬನ್ನಿಮರದ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳು ಹೆಚ್ಚಿನ ಜ್ಞಾನವನ್ನು ಪಡೆಯಲು ಗ್ರಂಥಾಲಯ ಬಹಳ ಉಪಯುಕ್ತ ಮಾಧ್ಯಮವಾಗಿದೆ.ವಿಮಾ ಗ್ರಾಮ’ವಾದ ಪ್ರಯುಕ್ತ ಅದರಿಂದ ಹಣವನ್ನು ನಿಮ್ಮ ಶಾಲೆಗೆ ಗ್ರಂಥಾಲಯ ಮತ್ತು ಪ್ರಯೋಗಾಲಯ ನಿಮಿ೯ಸಲು ಸಾಧ್ಯವಾಗಿದೆ, ಮಕ್ಕಳು ಹೆಚ್ಚಿನ ಜ್ಞಾನವನ್ನು ಪಡೆಯುವದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ವಿಮಾಗ್ರಾಮಕ್ಕೆ ಶ್ರಮಿಸಿದ ಗುರುರಾಜ ಸಿನ್ನೂರ ಇವರಿಗೆ ಅಭಿನಂದಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಖಾಜಾಹುಸೇನ ಒಂಟೆಳಿ ಪುಸ್ತಕ ಮನುಷ್ಯನ ಮಿತ್ರ, ಜ್ಞಾನ ನೀಡುವ ಕಾಮಧೇನು, ವ್ಯಕ್ತಿತ್ವ ನಿರ್ಮಾಣದ ಹೆಬ್ಬಾಗಿಲು ಮಾಗ೯ದಶ೯ಕ.ನಾವು ಗ್ರಂಥಾಲಯದಲ್ಲಿ ಗಂಭೀರವಾಗಿ ಅಧ್ಯಯನ ಮಾಡಬೇಕು, ಮಾತನಾಡದೆ ನಿಶ್ಯಬ್ದ ಆಗಿರಬೇಕು ಬೇರೆಯವರಿಗೆ ತೊಂದರೆಯಾಗದಂತೆ ವತಿ೯ಸಬೇಕು.ಈ ಪುಸ್ತಕ ಭಂಡಾರದ ಸಂದೇಶವೆಂದರೆ “ಜ್ಞಾನವೃದ್ದಿಗಾಗಿ ಒಳಗೆ ಬಾ- ಮಾನವ ಸೇವಗೆ ಹೊರಗೆ ಹೋಗು ಎಂಬ ಸಂದೇಶದೊಂದಿಗೆ ಗ್ರಂಥಾಲಯ ಮತ್ತು ಪ್ರಯೋಗಾಲಯದ ಪ್ರಯೋಜನ ಪಡೆದು ಉತ್ತಮ ಪ್ರಜೆಗಳಾಗಿ ಎಂದು ಹೇಳಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಭರಮಗೌಡ ಗೌಡರ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಇಕ್ಬಾಲ್ ಸಾಗರ ವಿಮಾಧಿಕಾರಿ (ಎಡಿಎಂ) ಕೊಪ್ಪಳ, ಶಂಕ್ರಪ್ಪ ವಿಮಾ ವ್ಯವಸ್ಥಾಪಕರು ಕುಷ್ಟಗಿ, ಪ್ರಾಣೇಶ ಪಪ್ಪುವಿಮಾ ಪ್ರತಿನಿಧಿ ,ಗುರುರಾಜ ಸಿನ್ನೂರ ವಿಮಾ ಪ್ರತಿನಿಧಿ, ಹನುಮಂತ ಮಾಟರಂಗಿ, ಪರಶುರಾಮ ವಾಲಿಕಾರ, ವೆಂಕಟೇಶ್ ಕರೇಕಲ್ಲ,ಗಂಗಮಾಳವ್ವ ಕರೇಕಲ್ಲ , ಕಸ್ತೂರಬಾಯಿ ಪವಾರ, ಹನುಮಂತಪ್ಪ ದಂಡಿನ ಮಾನಪ್ಪ ಚವ್ಹಾಣ ಮಂಜುನಾಥ ಕರೇಕಲ್ಲ ಹನುಮಂತ ವಾಲಿಕಾರ ಭರಮೇಶ ಚವ್ಹಾಣ, ಶಂಕ್ರಪ್ಪ ಪೂಜಾರಿ, ಶಿಕ್ಷಕರಾದ ಸುಶಿಲೇಂದ್ರ ಕುಲಕರ್ಣಿ, ಗುರುಪಾದಪ್ಪ ಮಚಗಾರ,ನಾರಾಯಣ ಪಂಚಾಳ, ಗೌರಮ್ಮ ತಳವಾರ, ಅಮರೇಶ ಹಿರೇಮಠ, ಜ್ಯೋತಿ ಪಟಗಾರ ದುರಗೇಶ ಗೊಲ್ಲರ ಮತ್ತು ಗ್ರಾಮಸ್ಥರು,ಮಕ್ಕಳು ಉಪಸ್ಥಿತರಿದ್ದರು.
ಅಮರೇಶ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.