ಸುದ್ದಿಮೂಲ ವಾರ್ತೆ ಬೆಂಗಳೂರು, ಅ.20:
ಕಾಳೇನಾ ಅಗ್ರಹಾರ ಮತ್ತು ನಾಗವಾರವನ್ನು ಸಂಪರ್ಕಿಸುವ ಬಹುನಿರೀಕ್ಷಿತ 21 ಕಿಮೀ ಉದ್ದದ ಮೆಟ್ರೋೋ ಪಿಂಕ್ ಮಾರ್ಗವ್ನನು ಮೇ 2026ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಈಗಾಗಲೇ ನಡೆಯುತ್ತಿಿರುವ ನಿರ್ಮಾಣ ಕಾರ್ಯ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಂಕ್ ಲೈನ್ ಕಾಳೇನಾ ಅಗ್ರಹಾರ ಮತ್ತು ತಾವರೆಕೆರೆ (ಸ್ವಾಾಗತ್ ಕ್ರಾಾಸ್ ರೋಡ್) ನಡುವಿನ 2.5 ಕಿಮೀ ಎತ್ತರದ ಮಾರ್ಗ ಮತ್ತು 13.76 ಕಿಮೀ ಭೂಗತ ಮಾರ್ಗವನ್ನು ಒಳಗೊಂಡಿದೆ. ಇದು ನಗರದ ಅತ್ಯಂತ ಸಂಕೀರ್ಣ ಮೆಟ್ರೋೋ ಯೋಜನೆಗಳಲ್ಲಿ ಒಂದಾಗಿದೆ.