ಸುದ್ದಿಮೂಲ ವಾರ್ತೆ ಸಿಂಧನೂರು, ನ.07:
ಎಡದಂಡೆ ನಾಲೆಗೆೆ ಎರಡನೇ ಬೆಳೆಗೆ ನೀರು ಹರಿಸುವಂತೆ ಒತ್ತಾಾಯಿಸಿ ಜಿಲ್ಲೆೆಯ ವಿವಿಧ ಪಕ್ಷಗಳ ಮುಖಂಡರ ನಿಯೋಗ ಉಪಮುಖ್ಯಮಂತ್ರಿಿ, ಸಚಿವರನ್ನು ಭೇಟಿ ಮಾಡಿರುವ ಕುರಿತು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ನಿಯೋಗವು ಶಾಸಕರನ್ನಾಾಗಲಿ, ಸಂಸದರನ್ನಾಾಗಲಿ ಕರೆದಿಲ್ಲ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶುಕ್ರವಾರ ಶಾಸಕರ ನೂತನ ಕಾರ್ಯಾಲಯಕ್ಕೆೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಡದಂಡೆ ನಾಲೆಗೆ ಬೇಸಿಗೆ ಬೆಳೆಗೆ ನೀರು ಬಿಡುವ ಸಂಬಂಧ ಸಿಂಧನೂರಿನಲ್ಲಿ ಸರ್ವಪಕ್ಷ ಮುಖಂಡರ ಸಭೆ ಮಾಡಿದ್ದರು. ಬೆಂಗಳೂರಿಗೆ ನಿಯೋಗ ಹೋಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಒತ್ತಡ ಹಾಕುವ ಸಂಬಂಧ ಮೊದಲು ನನ್ನನ್ನು ಸಂಪರ್ಕ ಮಾಡಿದ್ದರು. ನಾನು ಕೂಡ ಬರುವುದಾಗಿ ಹೇಳಿದ್ದೆೆ. ಆದರೆ ನಿಯೋಗ ಹೋಗುವಾಗ ನಮ್ಮನ್ನು ಯಾರು ಸಂಪರ್ಕ ಮಾಡಿಲ್ಲ. ನಾಲೆಗೆ ನೀರು ಬಿಡಲು ನಾವೇನು ವಿರೋಧಿಗಳೂ ಅಲ್ಲ. ಶೀಘ್ರವೇ ಐಸಿಸಿ ಸಭೆ ನಡೆಯಲಿದ್ದು, ತಜ್ಞರ ವರದಿ ಹಾಗೂ ನೀರಿನ ಲಭ್ಯತೆ ಆಧರಿಸಿ ಸಮಗ್ರವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಅಭಿವೃದ್ದಿ ಪರ್ವ:
ಸಿಂಧನೂರು ವಿಧಾನಸಭಾ ಕ್ಷೇತ್ರ ವ್ಯಾಾಪ್ತಿಿಯಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳು ನಡೆದಿವೆ. ಜಿಲ್ಲಾಾಸ್ಪತ್ರೆೆ, ಕೌಶಲ್ಯ ತರಬೇತಿ ಕೇಂದ್ರ, ಸರಕಾರಿ ಮಹಾವಿದ್ಯಾಾಲಯ ಕಟ್ಟಡ ಕಾಮಗಾರಿ ನಡೆದಿವೆ. 50 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆರೆ, ರಸ್ತೆೆಗಳ ಅಭಿವೃದ್ದಿಗೆ 50 ಕೋಟಿ ಬಿಡುಗಡೆಯಾಗಿದೆ. ಸಂಬಂಧಪಟ್ಟ ಇಲಾಖೆ ಮೂಲಕ ಪ್ರಸ್ತಾಾವನೆ ಸಲ್ಲಿಸಲಾಗಿದೆ. ಎಲ್ಲಾಾ ಕಾಲೇಜುಗಳಿಗೆ ಸ್ಮಾಾರ್ಟ್ಕ್ಲಾಾಸ್ ಒದಗಿಸಲಾಗುತ್ತಿಿದೆ. ನಗರಸಭೆಯ ಎಸ್ಎ್ಸಿ ಅನುದಾನದಲ್ಲಿ 10 ಕೋಟಿ ಮಂಜೂರಾಗಿದೆ. 24್ಡ7 ಕುಡಿಯುವ ನೀರಿನ ಕಾಮಗಾರಿಯ ಉಳಿದ ಕೆಲಸ ಮುಗಿಸಲು ಟೆಂಡರ್ ಕರೆಯಲಾಗಿದೆ. 20 ಕೋಟಿ ವೆಚ್ಚದಲ್ಲಿ ಒಳಚರಂಡಿ ಉಳಿದ ಕಾಮಗಾರಿ ಕೈಗೆತ್ತಿಿಕೊಳ್ಳಲಾಗಿದೆ. 13 ಸಾವಿರ ಮನೆಗಳಿಗೆ ಸಂಪರ್ಕ ನೀಡಲಾಗುತ್ತಿಿದೆ. ಈಗಾಗಲೇ ಅಧಿಕಾರಿಗಳ, ತಜ್ಞರ ಸಭೆ ನಡೆಸಿ ಚರ್ಚಿಸಿದ್ದೇನೆ.
ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಅನುಕೂಲಕ್ಕಾಾಗಿ ಅಧಿಕೃತವಾಗಿ ಶಾಸಕ ಕಾರ್ಯಾಲಯ ಆರಂಭಿಸಲಾಗಿದೆ. ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕ ಸಂಜಯ್ ಪಾಟೀಲ್, ತಹಶೀಲ್ದಾಾರ ಅರುಣ ಹೆಚ್.ದೇಸಾಯಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಮುಖಂಡರಾದ ಎಂ.ಕಾಳಿಂಗಪ್ಪ, ರಾಜುಗೌಡ ಬಾದರ್ಲಿ, ಪ್ರಭುರಾಜ, ಅಶೋಕ ಉಮಲೂಟಿ, ರಾಮನಗೌಡ ಮಲ್ಕಾಾಪುರ, ಛತ್ರಪ್ಪ ಕುರಕುಂದಿ, ರಾಜು ಬಂಡಿ, ಶ್ರೀದೇವಿ ಶ್ರೀನಿವಾಸ, ಖಾಜಿ ಮಲಿಕ್, ಅರುಣಕುಮಾರ ವೈ, ಅಮರಯ್ಯ ಸ್ವಾಾಮಿ, ರಾಮಣ್ಣ ಸೇರಿದಂತೆ ಅನೇಕರು ಇದ್ದರು.
ಕಾನೂನು ಬಾಹೀರ ಚಟುವಟಿಕೆಗಳಿಗೆ ಕಡಿವಾಣ:
ತಾಲೂಕಿನಲ್ಲಿ ಗಾಂಜಾ ಸೇರಿದಂತೆ ಕಾನೂನು ಬಾಹೀರ ಚಟುವಟಿಕೆಗಳು ನಡೆಯುತ್ತಿಿರುವ ಬಗ್ಗೆೆ ಸಾಕಷ್ಟ ದೂರುಗಳು ಬರುತ್ತಿಿರುವ ಹಿನ್ನೆೆಲೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕಠಿಣ ಕ್ರಮ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿಿನ ಸೂಚನೆ ನೀಡಿದ್ದೇನೆ.
ನಗರದಲ್ಲಿ ಮೂರು ಪ್ರಮುಖ ಹೆದ್ದಾಾರಿಗಳು ಹಾದು ಹೋಗುತ್ತಿಿದೆ. ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿಿವೆ. ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಾಗಿ ಅಧಿಕಾರಿಗಳ ಸಭೆ ಮಾಡಿದ್ದೇನೆ. ದ್ವಿಿಚಕ್ರ ಹಾಗೂ ಕಾರುಗಳ ನಿಲುಗಡೆಗೆ ಸ್ಥಳ ಗುರುತಿಸಲಾಗುತ್ತಿಿದೆ. ಅಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕು. ಜೊತೆಗೆ ನಗರದ ಪ್ರಮುಖ ರಸ್ತೆೆಗಳಲ್ಲಿ, ಎಲ್ಲಾಾ ವಾರ್ಡುಗಳಲ್ಲಿ ಸಿಸಿ ಕ್ಯಾಾಮೆರಾ ಅಳವಡಿಸಿ, ಪೊಲೀಸ್ ಠಾಣೆಯಲ್ಲಿಯೇ ನಿಯಂತ್ರಣ ಕೊಠಡಿ ಸ್ಥಾಾಪಿಸಲಾಗಿದೆ. ಇನ್ನೂ ಎರಡು ಮೂರು ತಿಂಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೈಕ್ಗಳನ್ನು ಅಳವಡಿಸಿ, ಸಿಸಿ ಕ್ಯಾಾಮೆರಾ ಮೂಲಕ ವೀಕ್ಷಣೆ ಮಾಡಿ ಪೊಲೀಸ್ ಠಾಣೆಯಿಂದಲೇ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

