ಬೆನಘಟ್ಟ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಉದ್ಘಾಟನೆ
ಸುದ್ದಿಮೂಲ ವಾರ್ತೆ
ಮಾಲೂರು, ಜೂನ್ 2 : ಗುಣಮಟ್ಟ ಹಾಲು ಪೂರೈಕೆ ಮಾಡುವ ಮೂಲಕ ಬೆನಘಟ್ಟ ಹಾಲು ಉತ್ಪಾದಕರ ಸಂಘ ಜಿಲ್ಲೆಯಲ್ಲೇ ಮಾದರಿ ಸಂಘ ಎಂದು ಶಾಸಕ ಕೆ.ವೈ. ನoಜೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಡಿ.ಎನ್. ದೊಡ್ಡಿ ಗ್ರಾಮ ಪಂಚಾಯತಿಯ ಬೆನಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಎರಡನೇ ಅಂತಸ್ತಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ಬಾರಿಗೆ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕನಾದ ಸಂದರ್ಭದಲ್ಲಿ ತಾಲೂಕಿನಲ್ಲಿ ಸಣ್ಣ ಮನೆಯೊಂದರಲ್ಲಿ ಶಿಬಿರ ಕಚೇರಿ ನಡೆಯುತ್ತಿತ್ತು. ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಹಕಾರದಿಂದ ಇದೀಗ ರಾಜ್ಯದಲ್ಲೇ ಮಾದರಿ ಶಿಬಿರ ಕಚೇರಿಯನ್ನು ಮಾಲೂರು ಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಸ್ವಂತ ಕಟ್ಟಡ ಇಲ್ಲದ ಸಂಘಗಳಿಗೆ ಒಕ್ಕೂಟ ದಿಂದ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ, ಹಾಲು ಉತ್ಪಾದನೆ ರೈತರ ಮಕ್ಕಳ ವ್ಯಾಸಂಗಕ್ಕೆ ಪ್ರೋತ್ಸಾಹ ಧನ, ವಿದ್ಯಾರ್ಥಿನಿಲಯ, ಹಸುಗಳಿಗೆ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಒಕ್ಕೂಟ ನೀಡುತ್ತಿದೆ. ಗುಣಮಟ್ಟದ ಹಾಲು ಪೂರೈಕೆಯಲ್ಲಿ ಬೆನಘಟ್ಟ ಎರಡನೇ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. .
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಒಕ್ಕೂಟದ ವ್ಯವಸ್ಥಾಪಕರಾದ ಡಾ.ಶ್ರೀನಿವಾಸ ಗೌಡ, ತಾಲ್ಲೂಕು ಶಿಬಿರ ಕಚೇರಿಯ ವ್ಯವಸ್ಥಾಪಕ ಡಾ.ಚೇತನ್, ವಿಸ್ತರಣಾಧಿಕಾರಿಗಳಾದ ನಾರಾಯಣಸ್ವಾಮಿ, ಹುಲ್ಲೂರಪ್ಪ , ಶಿವಕುಮಾರ್, ಮನೋಹರ್ ರೆಡ್ಡಿ, ವೆಂಕಟೇಶ್,ಕರಿಯಪ್ಪ, ಗ್ರಾಪಂ ಸದಸ್ಯರಾದ ಪಾಲೇಶ್ ರೆಡ್ಡಿ,ಮಮತಾ ಮಂಜುನಾಥ್. ಸಂಘದ ಅಧ್ಯಕ್ಷ ಮುನಿರಾಜು, ಕಾರ್ಯದರ್ಶಿ ಸರ್ವೇಶ್, ನಿರ್ದೇಶಕರಾದ ಪ್ರವೀಣ್ ಕುಮಾರ್, ಲಕ್ಷ್ಮಮ್ಮ ,ರಾಜಾರೆಡ್ಡಿ, ಆಂಜಿನಪ್ಪ,ಸರ್ವೆಶ್ , ಕೃಷ್ಣಪ್ಪ,ಜಯಪ್ಪ, ಗುರಪ್ಪ, ನಾಗರತ್ನಮ್ಮ, ನಾಗರಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.