ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.28:
ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ 2025-28 ನೇ ಸಾಲಿನ ನೂತನ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭ ನಗರದ ಮೀರಾಲಂ ಟಾಕೀಸ್ ಹಿಂಭಾಗದಲ್ಲಿರುವ ವಿ.ಎನ್.ರಾಯಲ್ ಗಾರ್ಡ ನ್ ಸಭಾಂಗಣದಲ್ಲಿ ಡಿ.29 ರಂದು ಮಧ್ಯಾಾನ್ಹ 1 ಗಂಟೆಗೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್ ಅವರು ಸಮಾರಂಭವನ್ನು ಉದ್ಘಾಾಟಿಸಲಿದ್ದಾರೆ. ಸಂಸದ ಇ.ತುಕಾರಾಂ, ಶಾಸಕ ಎಚ್. ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಮನ್ನಿಿಕೇರಿ, ಎಸ್ಪಿಿ ಜಾಹ್ನವಿ, ಜಿಪಂ ಸಿ ಇ ಒ ನೊಂಗ್ಜಾಾಯ್ ಮಹಮ್ಮದ್ ಅಕ್ರಮ ಷಾ, ನಗರ ಸಭೆ ಅಧ್ಯಕ್ಷ ರೂಪೇಶ್ ಕುಮಾರ್, ರಾಜ್ಯ ಕಾರ್ಯದರ್ಶಿ ಸೋ ಮಶೇಖರ ಕೆರಗೋಡ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಬಿ. ಧನಂಜಯಪ್ಪ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ರಾಜ್ಯಾಾಧ್ಯಕ್ಷ ಶಿವಾನಂದ ತಗಡೂರು, ಆಶಯ ನುಡಿಗಳನ್ನಾಾಡಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೊಕೇಶ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ ಪ್ರಾಾಸ್ತಾಾವಿಕವಾಗಿ ಮಾತನಾಡಲಿದ್ದಾರೆ. ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ ಬಿನ್ನವತ್ತಳೆ ಮಂಡಿಸಲಿದ್ದಾರೆ.

