ಸುದ್ದಿಮೂಲ ವಾರ್ತೆ ಸಿಂಧನೂರು, ಜ.08:
ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾಾರ, ಅಭಿನಂದನಾ ಸಮಾರಂಭವನ್ನು ನಗರದ ಟೌನ್ಹಾಲ್ನಲ್ಲಿ ಜ-10 ಶನಿವಾರ ಹಮ್ಮಿಿಕೊಳ್ಳಲಾಗುತ್ತಿಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ತಿಮ್ಮಣ್ಣ ರಾಮತ್ನಾಾಳ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು. ಶಾಸಕ ಹಂಪನಗೌಡ ಬಾದರ್ಲಿ ಕಾರ್ಯಕ್ರಮ ಉದ್ಘಾಾಟನೆ ಮಾಡಲಿದ್ದಾಾರೆ. ಮಸ್ಕಿಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ವಾಲ್ಮೀಕಿ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಲಿದ್ದಾಾರೆ. ಕಾರಟಗಿಯ ಪ್ರಾಾಧ್ಯಾಾಪಕ ಡಾ.ಹನುಮಂತಪ್ಪ ಚಂದಲಪುರ ಆಶಯ ನುಡಿ ಮಾತನಾಡಲಿದ್ದಾಾರೆ. ಪ್ರಸ್ತುತ ದಿನಮಾನಗಳಲ್ಲಿ ವಾಲ್ಮೀಕಿ ಜನಾಂಗದ ಸ್ಥಿಿತಿಗತಿ ಕುರಿತು ನಿವೃತ್ತ ಪ್ರಾಾಧ್ಯಾಾಪಕ ಡೊಣ್ಣೇಗೌಡರ ವೆಂಕಣ್ಣ ವಿಶೇಷ ಉಪನ್ಯಾಾಸ ನೀಡಿದ್ದಾಾರೆ. ಒಕ್ಕೂಟದ ಅಧ್ಯಕ್ಷ ಡಾ.ಬಸವರಾಜ ಪಿ.ನಾಯಕ ಪ್ರಾಾಸ್ತಾಾವಿಕವಾಗಿ ಮಾತನಾಡಲಿದ್ದಾಾರೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಸ್ಕಿಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಕೆ.ಕರಿಯಪ್ಪ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾಾರೆ ಎಂದು ಮಾಹಿತಿ ನೀಡಿದರು.
ಹಿಂದುಳಿದ ನಾಯಕ ಸಮಾಜದಲ್ಲಿ ಶೈಕ್ಷಣಿಕವಾಗಿ ಜಾಗೃತಿ ಮೂಡಿಸುವದು. ಮುಖ್ಯವಾಹಿನಿಗೆ ತರುವುದು ಒಕ್ಕೂಟ ಮುಖ್ಯ ಉದ್ದೇಶವಾಗಿದೆ. ಸಮಾಜದ ಪ್ರತಿಭಾವಂತ ವಿದ್ಯಾಾರ್ಥಿಗಳೊಂದಿಗೆ ಅನ್ಯ ಸಮಾಜದ ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ಪ್ರತಿಭಾ ಪುರಸ್ಕಾಾರ ಮಾಡಲಾಗುವುದು. ಶೀಘ್ರವೇ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಗಾರ, ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಡಾ.ಬಸವರಾಜ ಪಿ.ನಾಯಕ, ಪ್ರಧಾನ ಕಾರ್ಯದರ್ಶಿ ಶಂಕರ ವಾಲೇಕಾರ, ವಿಭಾಗೀಯ ಕಾರ್ಯಾದರ್ಶಿ ಬಾಯಪ್ಪ, ಕಾರ್ಯಾಧ್ಯಕ್ಷ ವೀರೇಶ ನಾಯಕ ಕನ್ನಾಾರಿ, ಖಜಾಂಚಿ ಬಸವರಾಜ ಎಲ್.ಚಿಗರಿ, ತಿಮ್ಮಣ್ಣ ಕಲ್ಮಂಗಿ, ಯಲ್ಲಾಾಲಿಂಗ ನಾಯಕ, ಅಮರೇಶ ನಾಯಕ ಸೇರಿದಂತೆ ಇತರರು ಇದ್ದರು.
ನಾಳೆ ಶ್ರೀ ಮಹರ್ಷಿ ವಾಲ್ಮೀಕಿ ಖಾಸಗಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ

