ಸುದ್ದಿಮೂಲ ವಾರ್ತೆ ಭಾಲ್ಕಿ, ಜ.22:
ವಿದ್ಯಾಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀೆಡೆಗಳು ಅತ್ಯಂತ ಸಹಕಾರಿಯಾಗಿವೆ ಎಂದು ಜೆಎಂಎಫ್ಸಿಿ ಸಿವಿಲ್ ನ್ಯಾಾಯಾಧೀಶ ದೇಶಭೂಷಣ ಕೌಜಲಗಿ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ಹಿರೇಮಠ ಸಂಸ್ಥಾಾನ ವಿದ್ಯಾಾಪೀಠ ಟ್ರಸ್ಟ್ನ್ ವಿವಿಧ ಅಂಗಸಂಸ್ಥೆೆಗಳ ಅಂತರ ಶಾಲಾ-ಕಾಲೇಜು ವಿದ್ಯಾಾರ್ಥಿಗಳ ಕ್ರೀೆಡಾಕೂಟ ಉದ್ಘಾಾಟಿಸಿ ಅವರು ಮಾತನಾಡಿದರು.
ಮಾನಸಿಕ ಮತ್ತು ದೈಹಿಕ ದೃಢತೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಒಂದಕ್ಕೊೊಂದು ಬಿಟ್ಟಿಿಲ್ಲ. ಹಾಗಾಗಿ ಈ ಎರಡು ಪ್ರಬುದ್ಧತೆ ಸಾಧಿಸಲು ಕ್ರೀೆಡಾ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ವಿದ್ಯಾಾರ್ಥಿಗಳು ಹೆಚ್ಚೆೆಚ್ಚು ಕ್ರೀೆಡೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಮಾತನಾಡಿ, ವಿದ್ಯಾಾರ್ಥಿಗಳು ಓದಿನ ಜತೆಗೆ ಕ್ರೀೆಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಬೇಕು ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯಾಾರ್ಥಿಗಳು ತಮ್ಮ ಶರೀರ, ಮನಸ್ಸು, ಆರೋಗ್ಯ ಶುದ್ಧವಾಗಿರಿಸಲು ಕ್ರೀೆಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಸಾನ್ನಿಿಧ್ಯ ವಹಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಚಾಕು ಬಳಸಿದಂತೆ ಚೂಪಾಗುತ್ತದೆ. ಅದರಂತೆ ವಿದ್ಯಾಾರ್ಥಿಗಳು ಹೆಚ್ಚೆೆಚ್ಚು ಕ್ರೀೆಡೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸು, ಶರೀರ ಉತ್ಸಾಾಹದಿಂದ ಕೂಡಿರುತ್ತದೆ. ವಿದ್ಯಾಾರ್ಥಿಗಳು ಬಾಲ್ಯದಿಂದಲೇ ಕ್ರೀೆಡೆಗಳಲ್ಲಿ ಭಾಗವಹಿಸುವ ಆಸಕ್ತಿಿ ಬೆಳೆಸಿ ಕೊಳ್ಳಬೇಕು ಎಂದು ತಿಳಿಸಿದರು.
ಉದ್ಯಮಿ ಸೋಮನಾಥಪ್ಪ ಅಷ್ಟೂರೆ ಧ್ವಜಾರೋಹಣ ನೆರವೇರಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರೋಹಿದಾಸ ರಾಠೋಡ ಬಸವ ಗುರುವಿನ ಪೂಜೆ ನೆರವೇರಿಸಿದರು. ಚನ್ನಬಸವೇಶ್ವರ ಗುರುಕುಲದ ಪ್ರಾಾಚಾರ್ಯ ಬಸವರಾಜ ಮೊಳಕೀರೆ ಪ್ರಾಾಸ್ತಾಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಾಳೆ, ಡಾ.ಚನ್ನಬಸವ ಪಟ್ಟದ್ದೇವರ ಬ್ಯಾಾಂಕ್ನ ಉಪಾಧ್ಯಕ್ಷ ಶರಣಪ್ಪ ಬಿರಾದಾರ್, ಯುವ ಮುಖಂಡ ಶಿವು ಲೋಖಂಡೆ, ಪ್ರಮುಖರಾದ ಶಿವರಾಜ ಮಲ್ಲೇಶಿ, ಶಿವಕುಮಾರ ಕಲ್ಯಾಾಣೆ, ವಿಲಾಸ ಬಕ್ಕಾಾ, ಶಿವಪುತ್ರ ಕಲ್ಯಾಾಣೆ, ನಾಮದೇವರಾವ ಪವಾರ, ಅಶೋಕ ರಾಜೋಳೆ, ಸಂತೋಷ ಬಿ.ಜಿ.ಪಾಟೀಲ್, ಸಂಗಮೇಶ ವಾಲೆ, ನಿರ್ಣಾಯಕರಾದ ಹಣಮಂತ ಕಾರಾಮುಂಗೆ, ಚನ್ನವೀರಪ್ಪ ಚಕ್ರಸಾಲಿ, ವಿಜಯಕುಮಾರ ಚವ್ಹಾಾಣ, ಮಾಣಿಕರಾವ ಬಿರಾದಾರ್, ಸಂಜು ಟಿ.ಮೇಲೆ, ಪ್ರತಾಪ ಕೋಣೆ, ಉಮಾಕಾಂತ ಕೊಣಜಿವಾಲೆ, ವಿನೋದ ಆಳ್ವಾಾ, ದೇವಿದಾಸ ಮೇತೆ, ರಂಗರಾವ ಜಾಧವ, ಸಂತೋಷ ಬಿರಾದಾರ್, ರಾಜಕುಮಾರ ಕೂಡಿಕರ, ಮಾರುತಿ ಗೊರನಾಳಕರ್, ನರಸಿಂಗ ಇಂಗಳೆ ಇದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿಿ ಸ್ವಾಾಗತಿಸಿದರು.
ಮಧುಕರ ಗಾಂವಕರ್ ನಿರೂಪಿಸಿದರು. ದೈಹಿಕ ನಿರ್ದೇಶಕ ಅನಿಲಕುಮಾರ ಪಾಟೀಲ್ ವಂದಿಸಿದರು.
ಪಟ್ಟದ್ದೇವರ ಅಮೃತ ಮಹೋತ್ಸವ ಅಂತರ್ ಶಾಲಾ- ಕಾಲೇಜು ಕ್ರೀಡಾಕೂಟ ಉದ್ಘಾಟನೆ

