ಸುದ್ದಿಮೂಲ ವಾರ್ತೆ ಕಾರಟಗಿ, ನ.18:
ಕಾರಟಗಿ ಪಟ್ಟಣ ಸೇರಿದಂತೆ ಗ್ರಾಾಮೀಣ ಪ್ರದೇಶದಲ್ಲಿ ವಿವಿಧ ಇಲಾಖೆ ಯೋನೆಯಡಿ ಮಂಜೂರಾದ 175 ಕೋಟಿರೂ. ವೆಚ್ಚದ ನಾನಾ ಅಭಿವೃದ್ಧಿಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಾಣ, ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಂಗಳವಾರ ಪಟ್ಟಣದ ಪುರಸಭೆ ವ್ಯಾಾಪ್ತಿಿಯ ವಿವಿಧ ವಾರ್ಡುಗಳಲ್ಲಿ ನಾನಾ ಅಭಿವೃದ್ಧಿಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಪಟ್ಟಣದಲ್ಲಿ ಒಟ್ಟು 3.93 ಕೋಟಿ ರೂಗಳ ನೂತನ ಕಟ್ಟಡಗಳು ಲೋಕಾರ್ಪಣೆಗೊಂಡವು. ಅದರಲ್ಲೂ, ಬ್ಯಾಾಡ್ಮಿಿಂಟನ್ ಕೋರ್ಟ್, ವಾಣಿಜ್ಯ ಮಳಿಗೆಗಳಿಗೆ ನಾನು ಅಧಿಕಾರಕ್ಕೆೆ ಬರುತ್ತಿಿದ್ದಂತೆ ಭೂಮಿಪೂಜೆ ಮಾಡಿ ಅಡಿಗಲ್ಲು ಹಾಕಿದ್ದೆೆ, ಆದರೆ, ಈಗ ನಾನೇ ಈ ಎಲ್ಲಾಾ ಕಾಮಗಾರಿಗಳ ಲೋಕಾರ್ಪಣೆ ಮಾಡುವುದಕ್ಕೆೆ ಸಂತಸವಾಗುತ್ತಿಿದೆ ಎಂದರು.
ಕಾರಟಗಿ ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಾಮ, ಕ್ಯಾಾಂಪ್ಗಳ ರಸ್ತೆೆಗಳ ದುರಸ್ಥಿಿ ಹಾಗೂ ವಿವಿಧ ಅಭಿವೃದ್ಧಿಿ ಕಾಮಗಾರಿಗಳಿಗೆ 175 ಕೋಟಿ ಮೊತ್ತದ ಟೆಂಡರ್ ಹಂತ ತಲುಪಿದ್ದು, ಆ ಎಲ್ಲಾಾ ಕಾಮಗಾರಿಗಳಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಕಾರಟಗಿ ಪಟ್ಟಣದಲ್ಲಿ ಕನಕದಾಸ ಸಮುದಾಯ ಭವನಕ್ಕೆೆ 2 ಕೋಟಿ ರೂ.ತಾಲೂಕಿನ ವಾಲ್ಮೀಕಿ ಭವನಕ್ಕೆೆ 2 ಕೋಟಿ ರೂ. ಮತ್ತು ಪಂಚಮಸಾಲಿ ಸಮಾಜದ ಸಮುದಾಯ ಭವನಕ್ಕೆೆ 1 ಕೋಟಿ ರೂ, ಶಾದಿ ಮಹಲ್ ನಿರ್ಮಾಣಕ್ಕೂ 1 ಕೋಟಿ ರೂ. ಅನುದಾನ ನೀಡಿದ್ದು, ಅದರ ಭೂಮಿ ಪೂಜೆ ಶೀಘ್ರದಲ್ಲಿ ನೆರವೇರಿಸಲಾಗುವುದು. ನನ್ನ ಸ್ವಂತ ಇಲಾಖೆಯಿಂದ ಪಟ್ಟಣದಲ್ಲಿ ಕನಕದಾಸ ವೃತ್ತದಲ್ಲಿ ಪ್ರತಿಮೆ ನಿರ್ಮಾಣಕ್ಕೆೆ 8 ಲಕ್ಷ ರೂ.ಗಳ ಅನುದಾನ ನೀಡಿದ್ದೇನೆ ಎಂದರು.
ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಚಲುವಾದಿ, ಸ್ಥಾಾಯಿ ಸಮಿತಿ ಅಧ್ಯಕ್ಷ ಎಚ್. ಈಶಪ್ಪ, ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಶರಣೇಗೌಡ ಮಾ. ಪಾ, ನಗರ ಘಟಕ ಅಧ್ಯಕ್ಷ ಅಯ್ಯಪ್ಪ ಉಪ್ಪಾಾರ, ಮುಖಂಡರಾದ ಶಿವರೆಡ್ಡಿಿ ನಾಯಕ,ಚನ್ನಬಸಪ್ಪ ಸುಂಕದ್, ಬೂದಿ ಗಿರಿಯಪ್ಪ ಇನ್ನಿಿತರರು ಇದ್ದರು.
ಕಾರಟಗಿಯಲ್ಲಿ 3.93 ಕೋ.ರೂ. ವಿವಿಧ ಕಾಮಗಾರಿಗಳ ಲೋಕಾರ್ಪಣೆ ಶೀಘ್ರದಲ್ಲಿ 175 ಕೋ.ರೂ. ಅಭಿವೃದ್ಧಿಿ ಕಾಮಗಾರಿಗಳಿಗೆ ಚಾಲನೆ-ಸಚಿವ ತಂಗಡಗಿ

