ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ಸಮಾಜದಲ್ಲಿನ ಸಂಘ, ಟ್ರಸ್ಟ್ ಗಳು ಹೆಸರಿಗೆ ಮಾತ್ರ ಆಗಿರದೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಯಣ್ಣ ಹೇಳಿದರು.
ಅವರು ನಗರದ ಲಲಿತಾ ವೃದ್ದಾಾಶ್ರಮದಲ್ಲಿ ಸಾಯಿ ರಾಧಾಕೃಷ್ಣ ಟ್ರಸ್ಟ್ ಉದ್ಘಾಾಟಿಸಿ ಮಾತನಾಡಿದರು. ಟ್ರಸ್ಟ್ ರಚಿಸಿಕೊಂಡು ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಳ್ಳಲು ಸಲಹೆ ನೀಡಿದರು.
ನಂತರ ವೃದ್ದಾಾಶ್ರಮದಲ್ಲಿದ್ದವರಿಗೆ ಅನ್ನದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಶರಣಪ್ಪಘಿ, ಕುಮಾರಸ್ವಾಾಮಿ ಇಟೇಕರ್, ಟ್ರಸ್ಟ್ ಅಧ್ಯಕ್ಷ ಕೃಷ್ಣ ಇಟೇಕರ್, ಕಾರ್ಯದರ್ಶಿ ಪ್ರೇಮಸಾಗರ ಇಟೇಕರ್, ಖಜಾಂಚಿ ಉದಯಸಾಗರ ಇಟೇಕರ್, ರೂಪಾ ಪ್ರೇಮಸಾಗರ ಇಟೇಕರ್ ಭಾಗವಹಿಸಿದ್ದರು.
ಸಾಯಿ ರಾಧಾಕೃಷ್ಣ ಟ್ರಸ್ಟ್ ಉದ್ಘಾಟನೆ ಸಮಾಜಮುಖಿ ಸೇವೆಗೆ ಜಯಣ್ಣ ಸಲಹೆ

