ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಪೂರಕ ಸಾಮಾಗ್ರಿಿಗಳ ಪೂರೈಕೆಗೆ ಸರ್ಕಾರದ ಪ್ರಾಾಧಿಕಾರ ಬದ್ದವಾಗಿದೆ ಎಂದು ಕರ್ನಾಟಕ ಗಡಿ ಅಭಿವೃದ್ದಿ ಪ್ರಾಾಧಿಕಾರದ ಸದಸ್ಯ ಭಗತರಾಜ್ ನಿಜಾಮಕಾರಿ ಹೇಳಿದರು.
ಅವರಿಂದು ತಾಲೂಕಿನ ಯರಗೇರಾದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗೆ ಗಡಿ ಅಭಿವೃದ್ದಿ ಪ್ರಾಾಧಿಕಾರದಿಂದ ಮಂಜೂರಾದ ಸ್ಮಾಾರ್ಟ್ ತರಗತಿ ಕೋಣೆ ಉದ್ಘಾಾಟಿಸಿ ಮಾತನಾಡಿದರು. ಇಂದಿನ ವಿದ್ಯಾಾರ್ಥಿಗಳು ನಾಳೆ ನಾಡು ಕಟ್ಟುವ ನಾಯಕರಿದ್ದಂತೆ. ಗಡಿ ಭಾಗದ ಸರಕಾರಿ ಶಾಲೆಗಳಿಗೆ, ಇತರ ಖಾಸಗಿ ಶಾಲೆಗಳಿರುವ ವ್ಯವಸ್ಥೆೆ ಪೂರೈಸಲು ನಮ್ಮ ಸರಕಾರ ಕಂಕಣ ಬದ್ಧವಾಗಿದೆ. ಅದರ ಪರವಾಗಿ ಸ್ಮಾಾರ್ಟ್ ಕ್ಲಾಾಸ್ ಬೋರ್ಡ್ ಮತ್ತಿಿತರ ಎಲೆಕ್ಟ್ರಿಿಕಲ್ ಉಪಕರಣಗಳನ್ನು ಪೊರೈಸುತ್ತಿಿದೆ. ಗಡಿ ಭಾಗದ ಸರಕಾರಿ ಶಾಲೆಗೆ ಹೋಗಿ-ಬರಲು ಸಾರಿಗೆ ವ್ಯವಸ್ಥೆೆ, ವಿದ್ಯುತ್ ವ್ಯವಸ್ಥೆೆ. ಮತ್ತಿಿತರ ಆಧುನಿಕ ಸೌಕರ್ಯ ಇಲ್ಲದ ಶಾಲೆಗಳಿಗೆ ಸರಕಾರ ಸ್ಮಾಾರ್ಟ್ ಕ್ಲಾಾಸ್ನಂತಹ ವ್ಯವಸ್ಥೆೆ ಮಾಡುತ್ತಿಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಶಾರದಾ ಮಾತನಾಡಿ, ಗಡಿ ಭಾಗದ ಗ್ರಾಾಮಗಳ ಮಕ್ಕಳ ಕಲಿಕೆಗಾಗಿ ಸ್ಮಾಾರ್ಟ್ ಬೋರ್ಡ್ ಮತ್ತಿಿತರ ಸಾಮಾಗ್ರಿಿ ಪೂರೈಸುವ ಗಡಿ ಪ್ರಾಾಧಿಕಾರದ ಸದಸ್ಯರ ಆಸಕ್ತಿಿ ಸ್ಪೂರ್ತಿದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಾಘಿ.ಪಂ ಉಪಾಧ್ಯಕ್ಷ ನಾರಾಯಣರಾವ್ ಮದ್ರಿಿಕಾರಿ, ಸದಸ್ಯರಾದ ಹ್ಯಾಾರಿಕೇಶ, ಮಹಾದೇವ ನಾಯಕ, ವಿಜಯ ಕುಮಾರ, ಎಸ್ಡಿಎಂಸಿ ಅಧ್ಯಕ್ಷ ಜಿನ್ನಿಿಘಿ, ಸದಸ್ಯ ತಾಯಪ್ಪ ಸಿಆರ್ಪಿ ಎನ್. ಪೃಥ್ವಿಿರಾಜ, ಮುಖ್ಯಗುರುಗಳಾದ ಶಾರದಾ ಸೇರಿ ಶಿಕ್ಷಕರು, ಸಿಬ್ಬಂದಿ, ವಿದ್ಯಾಾರ್ಥಿಗಳಿದ್ದರು.
ಯರಗೇರಾ : ಸರ್ಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಕ್ಕಳ ಕಲಿಕೆ ಪೂರಕ ಸಾಮಾಗ್ರಿ ಪೂರೈಕೆಗೆ ಬದ್ದ – ಭಗತರಾಜ್

