ಸುದ್ದಿಮೂಲ ವಾರ್ತೆ ರಾಯಚೂರು, ೆ.02:
ಮಕ್ಕಳ ಜೊತೆಗೆ ಪಾಲಕರೂ ಟೆನ್ನಿಿಸ್ ಆಡುವುದು ಆರೋಗ್ಯ ದೃಷ್ಠಿಿಯಿಂದ ಒಳ್ಳೆೆಯದು ಎಂದು ಹಿರಿಯ ಕ್ರೀಡಾಪಟು ಬಸವರಾಜ ಪಾಟೀಲ ಸಿರವಾರ ಹೇಳಿದರು.
ನಗರದಲ್ಲಿ ರಾಯಚೂರು ಟೇಬಲ್ ಟೆನ್ನಿಿಸ್ ಸಂಸ್ಥೆೆಯ ಟೇಬಲ್ ಟೆನ್ನಿಿಸ್ ಅಂಗಳ ಉದ್ಘಾಾಟಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಮಕ್ಕಳಷ್ಟೆೆ ಟೇಬಲ್ ಟೆನ್ನಿಿಸ್ ಆಡಬೇಕೆಂದಿಲ್ಲ ಪಾಲಕರು, ಹಿರಿಯರೂ ಸಹಿತ ಆಡಿ ಆರೋಗ್ಯಕರ ಬದುಕಿಗೆ ಮುಂದಾಗಿ ಎಂದು ಹೇಳಿದರು.
ಟೇಬಲ್ ಟೆನ್ನಿಿಸ್ ಕ್ರೀಡೆಯಲ್ಲಿ ಕ್ರೀಡಾಪಟುಗಳನ್ನು ಸಂಸ್ಥೆೆ ತಯಾರು ಮಾಡಬೇಕೆಂದು ಹೇಳಿದರು.
ಕೆ.ಮಹೇಶ್ ಗೌಡ್ ಮಾತನಾಡಿ, ಮೊಬೈಲ್ ಬಿಟ್ಟು ಟೇಬಲ್ ಟೆನ್ನಿಿಸ್ ಮತ್ತಿಿತರ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಾ ಟೇಬಲ್ ಟೆನ್ನಿಿಸ್ ಸಂಸ್ಥೆೆಯ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಮಾತನಾಡಿ, ನಗರದಲ್ಲಿ ನಾಲ್ಕು ದಿಕ್ಕುಗಳಲ್ಲಿ ಟೇಬಲ್ ಟೆನ್ನಿಿಸ್ ಹಾಲ್ ಗಳನ್ನು ಮಾಡಲಿದ್ದೇವೆ. ಕ್ರೀಡೆಯನ್ನು ಹಾಗೂ ಕ್ರೀೆಡಾಪಟುಗಳನ್ನು ಪ್ರೋೋತ್ಸಾಾಹಿಸಲು ಹಾಗೂ ಟೇಬಲ್ ಟೆನ್ನಿಿಸ್ಗಾಗಿ ನನ್ನ ಸಹಾಯ ಸಹಕಾರ ಯಾವತ್ತೂ ಇರುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಯು. ಲಕ್ಷ್ಮೀ ನಾರಾಯಣ ಕೇಕುಡ, ಜಂಟಿ ಕಾರ್ಯದರ್ಶಿ ವೀರಣ್ಣ ಸೇರಿ ಅನೇಕರಿದ್ದರು.
ಟೆನ್ನಿಸ್ ಕೋರ್ಟ್ ಉದ್ಘಾಟನೆ ಆರೋಗ್ಯಕ್ಕಾಗಿ ಟೆನ್ನಿಸ್ ಆಟ ಆಡಿ- ಬಸವರಾಜ ಪಾಟೀಲ

