ಸುದ್ದಿಮೂಲ ವಾರ್ತೆ
ಜು,26:ಸುದ್ದಿ ತಿಪಟೂರು ನಗರದ ದೊಡ್ಡಯ್ಯನ ಪಾಳ್ಯದಲ್ಲಿರುವ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ನಿರ್ಮಿಸಿರುವ, ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜುಲೈ 30 ಭಾನುವಾರ ನಡೆಯಲಿದ್ದು, ಸಭಾ ಕಾರ್ಯಕ್ರಮ ಬಿ ಎಚ್ ರಸ್ತೆಯ ಈಡೇನಹಳ್ಳಿ ಗೇಟ್ ಸಮೀಪ ಇರುವ, ಎಸ್ ಎನ್ ಎಸ್ ಕನ್ವೆನ್ಷನ್ ಹಾಲ್ ನಲ್ಲಿ, ಬೆಳಗ್ಗೆ 11:30ಕ್ಕೆ ಏರ್ಪಡಿಸಲಾಗಿದೆ ಎಂದು ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ಸೋಮಶೇಖರ್ ಹೇಳಿದ್ದಾರೆ.
ಪತ್ತಿನ ಸಹಕಾರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 21 ವರ್ಷಗಳ ಹಿಂದೆ ಸಮಾನಮನ ಸ್ಕರ ಜೊತೆ ಕುಳಿತು, ಚಿಂತನೆ ಮಾಡಿ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಪತ್ತಿನ ಸಹಕಾರಿಯನ್ನು ಪ್ರಾರಂಭಿಸಲಾಯಿತು, ಇಂದಿರಾಗಾಂಧಿಯವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು, ನಮ್ಮ ಸಹಕಾರಿ ಪ್ರಾರಂಭಿಸುವಾಗ 300 ಜನ ಸದಸ್ಯರಿಂದ 3,18,000 ಶೇರು ಬಂಡವಾಳದೊಂದಿಗೆ ಪ್ರಾರಂಭವಾಗಿ, ಇಂದು 4800 ಸದಸ್ಯರನ್ನು ಹೊಂದಿ, 67 ಕೋಟಿ ದುಡಿಯುವ ಬಂಡವಾಳ, 59 ಕೋಟಿ ಸಾಲ ನೀಡಿದ್ದೇವೆ, ಅಂದಾಜು 3 ಕೋಟಿ ವೆಚ್ಚದ ಅತ್ಯಾಧುನಿಕ ಶೈಲಿಯ ಕಟ್ಟಡ ಜೊತೆಗೆ, ಮುಂಬರುವ ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ ಇನ್ನೆರಡು ಶಾಖೆಗಳನ್ನು ತೆರೆಯಲು ಯೋಚಿಸಲಾಗಿದೆ.
ಆನ್ಲೈನ್ ವ್ಯವಹಾರ ಸೇರಿದಂತೆ, ಗ್ರಾಹಕರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆಗಳನ್ನು ಹೊಂದಲಾಗಿದೆ, ಸಾಂಸ್ಕೃತಿಕ ಕ್ರೀಡೆ, ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡುವುದು ಸೇರಿದಂತೆ, ಸಾಮಾಜಿಕ ಚಿಂತನೆ, ಶಿಕ್ಷಣಕ್ಕೆ ಪ್ರಧಾನ ಆದ್ಯತೆ, ನಮ್ಮ ಸಹಕಾರಿ ಹೊಂದಿದೆ, ಜುಲೈ 30 ಭಾನುವಾರ ಬೆಳಿಗ್ಗೆ 9:30 ರಿಂದ 11:30 ರವರೆಗೆ ವಾರ್ಷಿಕ ಮಹಾಸಭೆ ನಂತರ, 11:30 ಕ್ಕೆ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಕೆರಗೋಡಿ ರಂಗಾಪುರದ ಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿಯವರು ವಹಿಸಲಿದ್ದಾರೆ, ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಜಿಎಸ್ ಬಸವರಾಜು ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಬಿಎಚ್ ಕೃಷ್ಣಾರೆಡ್ಡಿ, ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಿವಿ ಮಹಾಲಿಂಗಯ್ಯ, ತಿಪಟೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಆರ್ ಎಸ್ ದಿಲೀಪ್ ಕುಮಾರ್ ಭಾಗವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಎಂ ಸಿ ಮಂಜುನಾಥ್, ನಿರ್ದೇಶಕರಾದ ರಾಜಶೇಖರ್ ,ಎಚ್ ಎಸ್ ಶಂಕರ ಮೂರ್ತಿ, ಸೋಮಶೇಖರಪ್ಪ ಎಂ ಆರ್, ಶಶಿಕಿರಣ ಎಂ, ನಟರಾಜು, ಶ್ರೀಮತಿ ಲಕ್ಷ್ಮಮ್ಮ,ಶ್ರೀಮತಿ ಗಿರಿಜಾ, ಗಿರೀಶ್ ಕುಮಾರ್ ,ರೇಣುಕಾ ಮೂರ್ತಿ,ಕಾಂತರಾಜು, ಸಂಜೀವಯ್ಯ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸಿ ಮೃತ್ಯುಂಜಯ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸೋಮಶೇಖರ್ ತಿಳಿಸಿದ್ದಾರೆ, ಪತ್ರಿಕಾಗೋಷ್ಠಿಯಲ್ಲಿ ಸಹಕಾರಿಯ ಉಪಾಧ್ಯಕ್ಷ ಎಂ ಸಿ ಮಂಜುನಾಥ್, ನಿರ್ದೇಶಕರಾದ ರೇಣುಕಾ ಮೂರ್ತಿ, ಸೋಮಶೇಖರಪ್ಪ, ನಟರಾಜು, ಗಿರೀಶ್ ಕುಮಾರ್, ರೇಣುಕ ಮೂರ್ತಿ ಮತ್ತಿತರರು ಇದ್ದರು.