\ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.22:
ಮುಖ್ಯಮಂತ್ರಿಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾಾರಂಟಿ ಯೋಜನೆಗಳಿಂದಾಗಿ ರಾಜ್ಯದ ತಲಾದಾಯ ಹೆಚ್ಚಳವಾಗಿದೆ ಎಂದು ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಪ್ರಾಾಧಿಕಾರದ ಜಿಲ್ಲಾಾಧ್ಯಕ್ಷ ಕೆ.ಇ ಚಿದಾನಂದಪ್ಪ ಅವರು ಹೇಳಿದ್ದಾಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಾಶ್ರಯದಲ್ಲಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಪಂಚ ಗ್ಯಾಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸುವ ಜಾನಪದ ಸಂಗೀತ, ಬೀದಿ ನಾಟಕ ಪ್ರದರ್ಶನಕ್ಕೆೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಕ್ತಿಿ ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಶಕ್ತಿಿ ತುಂಬಲಾಗಿದೆ. ಅನ್ನಭಾಗ್ಯದಿಂದ ಹಸಿವು ನೀಗಿಸಲಾಗುತ್ತಿಿದೆ. ಗೃಹಜ್ಯೋೋತಿ ಮೂಲಕ ಕತ್ತಲೆ ಮನೆಗಳಿಗೆ ಬೆಳಕು ನೀಡಲಾಗಿದೆ. ಗೃಹಲಕ್ಷ್ಮಿಿಯಿಂದ ಮನೆ ಯಜಮಾನಿಯರಿಗೆ ಅನುಕೂಲವಾಗುತ್ತಿಿದೆ. ಅದೇ ರೀತಿಯಾಗಿ ಯುವನಿಧಿಯಿಂದ ನಿರುದ್ಯೋೋಗ ಯುವಕ-ಯುವತಿಯರಿಗೆ ಸಹಾಯಧನ ಒದಗಿಸಲಾಗುತ್ತಿಿದೆ ಎಂದರು.
ಬಳ್ಳಾಾರಿ ಜಿಲ್ಲೆೆಯಲ್ಲೂ ಪಂಚ ಗ್ಯಾಾರಂಟಿ ಯೋಜನೆಗಳು ಶೇ.98 ರಷ್ಟು ಅನುಷ್ಠಾಾನಗೊಳಿಸಿದ್ದು, ಶೇ.100 ಕ್ಕೆೆ ನೂರರಷ್ಟು ಪ್ರಗತಿ ಸಾಧಿಸಲಾಗುವುದು. ಜಿಲ್ಲೆೆಯಲ್ಲಿ ಯಾವುದೇ ಲಾನುಭವಿಗಳು ಗ್ಯಾಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಲ್ಲಿ, ಆಯಾ ತಾಲ್ಲೂಕುಗಳ ಅಧ್ಯಕ್ಷರ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ಅಕ್ಷಯ ಕಲಾ ಟ್ರಸ್ಟ್ನ ಅಧ್ಯಕ್ಷ ಯರಗುಡಿ ಸುಂಕಪ್ಪ ಮತ್ತು ತಂಡದವರಿಂದ ಗ್ಯಾಾರಂಟಿ ಯೋಜನೆಗಳ ಕುರಿತ ಜಾನಪದ ಸಂಗೀತ ಪ್ರಸ್ತುತಪಡಿಸಿದರು. ಧಾತ್ರಿಿ ರಂಗ ಸಂಸ್ಥೆೆಯ ಅಧ್ಯಕ್ಷ ಸಿರಿಗೇರಿ ಮಂಜು ತಂಡದವರಿಂದ ಗ್ಯಾಾರಂಟಿ ಯೋಜನೆಗಳ ಕುರಿತ ಬೀದಿ ನಾಟಕ ಪ್ರದರ್ಶಿಸಿದರು.
ಬಳ್ಳಾಾರಿ ತಾಲ್ಲೂಕು ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಪ್ರಾಾಧಿಕಾರದ ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣ ಗೌಡ, ಕುರುಗೋಡು ತಾಲ್ಲೂಕು ಅಧ್ಯಕ್ಷ ಜಿ. ಬಸವನಗೌಡ, ಸಂಡೂರು ತಾಲ್ಲೂಕು ಅಧ್ಯಕ್ಷ ನೂರುದ್ಧೀನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ವಿ.ಸಿ.ಗುರುರಾಜ ಸೇರಿದಂತೆ ವಾರ್ತಾ ಇಲಾಖೆಯ ಸಿಬ್ಬಂದಿ, ಜಿಪಂ ಸಿಬ್ಬಂದಿ ಹಾಗೂ ಇತರರು ಇದ್ದರು.
ಪಂಚ ಗ್ಯಾರಂಟಿಗಳಿಂದ ರಾಜ್ಯದ ತಲಾದಾಯ ಹೆಚ್ಚಳ ಬಳ್ಳಾರಿ ಜಿಲ್ಲೆಯಲ್ಲಿ ಶೇ.98 ರಷ್ಟು ಗ್ಯಾರೆಂಟಿ

