ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.15: ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕೆಆರ್ಇಡಿಎಲ್) ಪ್ರಧಾನ ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು.
ಕೆ.ಆರ್.ಇ.ಡಿ.ಎಲ್. ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರು-ಆಡಳಿತ ವಿ. ರಮೇಶ್, ಪ್ರಧಾನ ವ್ಯವಸ್ಥಾಪಕರು-ತಾಂತ್ರಿಕ ನಾಗರಾಜ್, ಉಪ ಪ್ರಧಾನ ವ್ಯವಸ್ಥಾಪಕರು – ಹಣಕಾಸು ಎ.ಎಮ್. ಶಿದ್ಲಿಂಗ್ ಉಪಸ್ಥಿತರಿದ್ದರು.
ಇವರೊಂದಿಗೆ ಕಾರ್ಯಕ್ರಮದಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಟಿ. ಮಾರುತಿ, ಮಂಜುನಾಥ್, ರವೀಂದ್ರ ಹೆಚ್ ಕೋರಿ, ಸಾಧನ ಟಿ ಎರುಮಾಳ್, ಲತಾ ಪಾಟೀಲ್ ಹಾಗೂ ತಾಂತ್ರಿಕ ಅಧಿಕಾರಿಗಳಾದ ಶಿವಶಂಕರ್, ಎಸ್.ಆರ್. ರವೀಂದ್ರ, ಪಲ್ಲವಿ, ರಾಧ ಕೊಂಡೂರ್ ಮತ್ತು ಲೆಕ್ಕಾಧಿಕಾರಿ ಹಾಗೂ ಆಡಳಿತಾಧಿಕಾರಿಗಳಾದ ರಾಜಣ್ಣ ಎಮ್.ಎಸ್. ಹಾಜರಿದ್ದರು.