ಸುದ್ದಿಮೂಲ ವಾರ್ತೆ ಬೀದರ, ಡಿ.25:
ಬಡವರಿಗೆ, ಕೂಲಿ ಕಾರ್ಮಿಕರಿಗೆ ಇಂದಿರಾ ಕ್ಯಾಾಂಟಿನ್ ಅನುಕೂಲವಾಗಲಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ತಿಳಿಸಿದರು.
ಗುರುವಾರ ಜಿಲ್ಲಾಡಳಿತ, ನಗರಾಭಿವೃದ್ಧಿಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಾಶ್ರಯದಲ್ಲಿ ನಗರದ ಓಲ್ಡ್ ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆೆ ಆವರಣದಲ್ಲಿ ನೂತನ ಇಂದಿರಾ ಕ್ಯಾಾಂಟಿನ್ ಉದ್ಘಾಾಟಿಸಿ, ಉಪಹಾರ ಸೇವಿಸಿ ಮಾತನಾಡಿದರು.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಆಶಯದಂತೆ ಹಾಗೂ ಯಾರೂ ಹಸುವಿನಿಂದ ಇರಬಾರದು ಎಂಬ ಕಾರಣಕ್ಕೆೆ ನಗರ ಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಾಂಟಿನ್ ಆರಂಭಿಸಲಾಗಿದೆ. ನಗರದ ಓಲ್ಡ್ ಸಿಟಿಯ ಜನರಿಗೆ ಮತ್ತು ಇಲ್ಲಿನ ಆಸ್ಪತ್ರೆೆಗೆ ಬರುವ ಜನರಿಗೆ ಈ ಕ್ಯಾಾಂಟಿನ್ ಉಪಯುಕ್ತವಾಗಲಿದೆ. ಬೀದರ ನಗರದಲ್ಲಿ 3 ಹೊಸ ಇಂದಿರಾ ಕ್ಯಾಾಂಟಿನ್ ಆರಂಭವಾಗಲಿವೆ ಎಂದರು.
ನಗರ ಸಮಸ್ಯೆೆಗಳನ್ನು ಗುರುತಿಸಿ, ಅದಕ್ಕೆೆ ಬಗ್ಗೆೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕೈಗೊಳ್ಳಲಾಗುವುದು. ರಸ್ತೆೆ ಮತ್ತು ಡ್ರೇನ್ 100 ಕೋಟಿ ಹಾಗೂ 50 ಕೋಟಿ ವಿಶೇಷ ಅನುದಾನ ಮುಖ್ಯಮಂತ್ರಿಿಗಳು ನೀಡಿದ್ದಾರೆ. ನಗರೋತ್ಥಾಾನ ಯೋಜನೆಯಡಿ 50 ಕೋಟಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬಿ-ಖಾತಾದ ಉಪಯೋಗ ಜನರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಜಿಲ್ಲಾ ನಗರಾಭಿವೃದ್ಧಿಿ ಕೋಶದ ಯೋಜನಾ ನಿರ್ದೇಶಕ ಶಿವರಾಜ್ ರಾಥೋಡ್ ಸೇರಿದಂತೆ ನಗರಸಭೆಯ ಸದಸ್ಯರು ಮತ್ತು ಗಣ್ಯ ಮಾನ್ಯರು ಉಪಸ್ಥಿಿತರಿದ್ದರು.
ಬಡವರಿಗೆ ಇಂದಿರಾ ಕ್ಯಾಾಂಟೀನ್ ಅನುಕೂಲ- ಸಚಿವ ರಹೀಂ ಖಾನ್

