ಸುದ್ದಿಮೂಲ ವಾರ್ತೆ
ನೆಲಮಂಗಲ, ನ. 08 : ಬಂಜೆತನಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಈಗಿನ ತಂತ್ರಜ್ಞಾನ ಹಾಗೂ ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯಬಹುದೆಂದು ಬಂಜೆತನ ನಿವಾರಣೆ ಮಾಡಬಹುದು ಎಂದು ಬೆಂಗಳೂರಿನ ಗರ್ಭಗುಡಿಯ ಸಂತಾನೋತ್ಪತ್ತಿ ಡಾ. ಬಿ.ಎಸ್. ನಿಕಿತಾ ಮೂರ್ತಿ ತಿಳಿಸಿದರು.
ತಾಲೂಕಿನ ಸೋಂಪುರ ಪಟ್ಟಣದ ವಿಕೇರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಗುಡಿಯ ಐವಿಎಪ್ ಸೆಂಟರ್ ನಿಂದ ಬಂಜೆತನ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು. ಗ್ರಾಮಿಣ ಭಾಗದಲ್ಲಿ ಸೂಕ್ತ ತಿಳವಳಿಕೆಯ ಕೊರತೆಯಿಂದ ಮಕ್ಕಳಿಲ್ಲದ ಅನೇಕರು ಮಾನಸಿಕ ಖಿನ್ನತೆಯ ಜತೆಗೂ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹವರನ್ನು ಗುರಿತಿಸಿಕೊಂಡು ಉಚಿತ ಸಮಾಲೋಚನೆ ಮಾಡಲಾಗುತ್ತದೆ.
ಡಾ.ಅಜಯ್, ನಮ್ಮ ಸುತ್ತಮುತ್ತಲ ವಾತಾವರಣದಲ್ಲಿ ತಿಳವಳಿಕೆಯ ಕೊರತೆಯಿಂದ ಒತ್ತಡದ ಜೀವನನದ ಶೈಲಿ, ವಯಸ್ಸಾದ ನಂತರ ಮದುವೆಯಾಗುವುದು ಮುಂತಾದ ಸಮಸ್ಯೆಗಳಿಂದ ಅನೇಕರು ಸಂತಾನ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಹಾಗೂ ಚಿಕಿತ್ಸೆಯ ಸಹಾಯದಿಂದ ಸಂತಾನ ಭಾಗ್ಯ ಲಭಿಸಲು ಸಾಧ್ಯವಿದೆ ಎಂದರು.
ವಿಕೆಆರ್ ಅಸ್ಪತ್ರೆಯ ಎಂ.ಡಿ ಅಂಚೆಮನೆ ರಾಜಶೇಖರ್ ಮಾತನಾಡಿ, ನಮ್ಮ ಆಸ್ಪತ್ರೆಯಿಂದ ಸುತ್ತಮುತ್ತಲ ಶಾಲೆಗಳಲ್ಲಿ, ಸಂತೆ ಮೈದಾನ, ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಲಾಗುವುದು. ಕಾರ್ಮಿಕರ ಇ. ಎಸ್ ಐ ಹಾಗೂ ಆಯುಷ್ಮಾನ್ ಭಾರತ ಯೋಜನೆಯಡಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು.
ಸುಮಾರು 176 ಜನರು ಇಂದು ಬಂಜೆತನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು ತಪಾಸಣೆ ಪಡೆದರು.