ಸುದ್ದಿಮೂಲವಾರ್ತೆ
ಕೊಪ್ಪಳ ಜು 25: ಮಲೆನಾಡು, ಉತ್ತರ ಒಳನಾಡಿನಲ್ಲಿ ಮಳೆ ಅಬ್ಬರದಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದೆ.
ಕಳೆದ ವಾರ ತಳಮಟ್ಟ ಸೇರಿದ್ದ ತುಂಗಭದ್ರಾ ಜಲಾಶಯದಲ್ಲಿ ಈಗ 31.166 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ ಒಂದೇ ದಿನದಲ್ಲಿ 5.5 ಟಿಎಂಸಿ ನೀರು ಸಂಗ್ರಹವಾಗಿದೆ.
ಇಂದು ಮುಂಜಾನೆಯ ವೇಳೆಗೆ ಜಲಾಶಯಕ್ಕೆ 72826 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ಕಳೆದ ಒಂದು ವಾರದಲ್ಲಿ 26 ಟಿಎಂಸಿ ನೀರು ಸಂಗ್ರಹವಾಗಿದ್ದು
ರೈತರಲ್ಲಿ ಆಶಾಭಾವನೆ ಮೂಡಿದೆ.
ಕಳೆದ ವರ್ಷ ಜುಲೈ 12 ಕ್ಕೆ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಡಲಾಗಿತ್ತು. ಆದರೆ ಈಗ ಜುಲೈ ಅಂತ್ಯಕ್ಕೆ ಇನ್ನೂ ಶೇ 25 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಒಟ್ಟು 106.766 ಟಿಎಂಸಿ ಸಂಗ್ರಹವಾಗುತ್ತದೆ. ಜಲಾಶಯ
ಇಂದು ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮಧ್ಯೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿರುವ ಹಿನ್ನಲೆ ಜಲಾಶಯವು ಈಗ ಪ್ರವಾಸಿತಾಣವಾಗಿದೆ.
ಮುನಿರಾಬಾದ್ ಹಾಗು ಹೊಸಪೇಟೆ ಕಡೆಯಿಂದ ನಿತ್ಯ ಹಲವರು ಜೋಡಿಯಾಗಿ ಆಗಮಿಸಿ ಜಲಾಶಯದ ಜಲರಾಶಿಯನ್ನು ನೋಡಿ ಆನಂದಿಸುತ್ತಿದ್ದಾರೆ.ಜಲಾಶಯದ ನೀರಿನ ಹತ್ತಿರ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳುವ ಸಂಭ್ರಮಿಸುತ್ತಿದ್ದಾರೆ. ನೀರಿನ ತೆರೆಯಲ್ಲಿ ನಿಂತು ಖುಷಿ ಪಟ್ಟು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ತುಂಗಭದ್ರಾ ಜಲಾಶಯ
ಕೊಪ್ಪಳದ ಮುನಿರಾಬಾದ್ ಹಾಗು ಹೊಸಪೇಟೆ ಮಧ್ಯೆ ಇರುವ ತುಂಗಭದ್ರಾ ಜಲಾಶಯ
ಮಳೆಯ ಮಧ್ಯೆ ಜಲಾಶಯ ನೋಡಲು ಜನರು ಆಗಮಿಸಿ ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆ ಈ ಬಾರಿ ಮುಂಗಾರು ಹಂಗಾಮಿನ ಬೆಳೆಗೆ ನೀರು ಸಿಗುವುದು ಅನುಮಾನ ಎಂಬಂತೆ ಇತ್ತು. ಈಗ ಮಳೆಯಾಗುತ್ತಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆಶಾಭಾವನೆ ಮೂಡಿದೆ.
ಈ ಮಧ್ಯೆ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಈಗ ಬೇಗ ಐಸಿಸಿ ಸಭೆ ನಡೆಸಿ ರೈತರ ಭೂಮಿಗೆ ನೀರು ಹಾಯಿಸಬೇಕು. ತಡವಾದಷ್ಟು ಭತ್ತ ಸೇರಿ ವಿವಿಧ ಬೆಳೆಗೆ ಉತ್ತಮ ವಾತವರಣವಿರುವುದಿಲ್ಲ. ಈ ಹಿನ್ನಲೆಯಲ್ಲಿ ಐಸಿಸಿ ಸಭೆ ನಡೆಸಬೇಕೆಂದು ರೈತ ಹಾಗು ಕಾಂಗ್ರೆಸ್ ಮುಖಂಡ ಶ್ರೀರಾಮನಗರದ ರಡ್ಡಿ ಶ್ರೀನಿವಾಸ ಆಗ್ರಹಿಸಿದ್ದಾರೆ.