ಸುದ್ದಿಮೂಲ ವಾರ್ತೆ ಅರಕೇರಾ, ಜ.17:
ತಾಲ್ಲೂಕಿನ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಯ ಸಮಸ್ಯೆೆಗ ಳನ್ನು ಬಗೆಹರಿಸುಂತೆ ಒತ್ತಾಾಯಿಸಿ ಕ್ರೈ ಸಂಸ್ಥೆೆಯ ತಾಲ್ಲೂಕು ಸಂಯೋಜಕ ರಾಮಣ್ಣ ಎನ್.ಗಣೇಕಲ್ ಇಲ್ಲಿನ ತಾಲ್ಲೂಕು ಪಂಚಾಯತಿ ಸಹಾಯಕ ಅಧಿಕಾರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ನಮ್ಮ ಮಕ್ಕಳಿಗೆ ಕುಡಿಯುವ ನೀರೇ ಇಲ್ಲ. ಕೊಠಡಿಗಳು ಸಾಕಾಗದ ಕಾರಣ ಇಕ್ಕಟ್ಟಿಿನಲ್ಲಿ ಕೂರುವಂಥ ಪರಿಸ್ಥಿಿತಿ ನಿರ್ಮಾಣವಾಗಿದೆ. ಕೊಠಡಿ ಸಮಸ್ಯೆೆ ತಲೆದೋರಿದೆ. ಇನ್ನು ಕೆಲವು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆೆ ಇಲ್ಲ. ಹೀಗಾದರೆ ವಿದ್ಯಾಾರ್ಥಿಗಳು ಮಾಡುವುದೇನು ? ಶೌಚಗೃಹ ಬಳಸುವುದು ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಸಹ ಇಂತಹದ್ದೇ ಸಮಸ್ಯೆೆ ಎದುರಾಗಿದೆ. ಕೆಲವು ಕಡೆ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ಕೇಂದ್ರ ನಡೆಸಲಾಗುತ್ತಿಿದೆ. ಅಪೌಷ್ಟಿಿಕತೆ ನಿವಾರಣೆ ಹೆಚ್ಚಿಿ ನ ಒತ್ತು ನೀಡುತ್ತಿಿಲ್ಲ, ಮಕ್ಕಳ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆಯುತ್ತಿಿಲ್ಲ. ಸರಿಯಾದ ಚಿಕಿತ್ಸೆೆ ಸಹ ದೊರಕುತ್ತಿಿಲ್ಲ ಎಂದು ಆರೋಪಿಸಿದರು.
ಜಿನ್ನಾಾಪುರ, ಕರಡಿಗುಡ್ಡ, ಜರದಬಂಡಿ, ಹಾಗೂ ಗೆಜ್ಜೆೆಭಾವಿ ಶಾಲೆಗಳನ್ನು 6ನೇ ತರಗತಿಗಳನ್ನಾಾಗಿ ಮೇಲ್ದರ್ಜೆಗೇರಿಬೇಕು. ಜಾಗಟಗಲ್, ಮಲ್ಲೆದೇವರಗುಡ್ಡಗ್ರಾಾಮದಲ್ಲಿ ಪ್ರೌೌಢ ಶಾಲೆಗಳನ್ನಾಾಗಿ ಪರಿವರ್ತಿಸಬೇಕು. ರಾಮದುರ್ಗ ಪ್ರೌೌಢ ಶಾಲೆಗೆ ಕಟ್ಟಡ ಮಂಜೂರು ಮಾಡಬೇಕು. ಶಿವಂಗಿ ಗ್ರಾಾಮಕ್ಕೆೆ ಪದವಿ ಪೂರ್ವ ಕಾಲೇಜು ಅಗತ್ಯವಿದೆ. ಹೊಸ ಶಾಖಾಪುರ, ಹೆಚ್.ಜಾಡಲದಿನ್ನಿಿ, ಜಿನ್ನಾಾಪುರ, ಕಾಕರಗಲ್, ಮಿನಿ ಅಂಗನವಾಡಿ ಕೇಂದ್ರ ಸ್ಥಾಾಪಿಸಿ ಮಕ್ಕಳು ಹಾಗೂ ಗರ್ಭಿಣಿ- ಬಾಣಂತಿಯರಿಗೆ ಅನುಕೂಲ ಮಾಡಿಕೊಡಬೇಕು. ಅರಕೇರಾ, ಪಿಲಿಗುಂಡ ಮುಖಾಂತರ ಜೇರಬಂಡಿ ಗ್ರಾಾಮಕ್ಕೆೆ ಹಾಗೂ ಮಧ್ಯಾಾಹ್ನದ ವೇಳೆಗೆ ಕ್ಯಾಾದಿಗ್ಗೇರಾ ಗ್ರಾಾಮಕ್ಕೆೆ ಬಸ್ ಸೌಲಭ್ಯ ಕಲ್ಪಿಿಸಿ ವೃದ್ಧರು, ಮಹಿಳೆಯರು, ಶಾಲಾ -ಕಾಲೇಜು ಮಕ್ಕಳಿಗೆ ಓಡಾಡುವ ಅವಕಾಶ ನೀಡಬೇಕು. ಮುಷ್ಟೂರು, ಶಿವಂಗಿ, ಕ್ಯಾಾದಿಗ್ಗೇರಾ ಗ್ರಾಾಮದಲ್ಲಿ ಮೆಟ್ರಿಿಕ್ ಪೂರ್ವ ಬಾಲಕ/ ಬಾಲಕಿಯರ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು. ರಾಮದುರ್ಗ ಗ್ರಾಾಮದ ಪ್ರಾಾಥಮಿಕ ಆರೋಗ್ಯ ಕೇಂದ್ರಕ್ಕೆೆ ಕುಡಿಯುವ ನೀರಿನ ವ್ಯವಸ್ಥೆೆ ಹಾಗೂ ಪ್ರತ್ಯೇಕ 108 ಆಂಬುಲೆನ್ಸ್ ವಾಹನ ನೀಡಬೇಕು. ಕ್ಯಾಾದಿಗ್ಗೇರಾ ಗ್ರಾಾಮದಲ್ಲಿ ನಿರ್ಮಿಸಿದ ಉಪ ಆರೋಗ್ಯ ಕೇಂದ್ರ ಪ್ರಾಾರಂಭಿಸಿ ಸಾರ್ವಜನಿಕರ ಉಪಯೋಗಕ್ಕೆೆ ಅನುವು ಮಾಡಿಕೊಡಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಾಯಿಸಿದರು.
ಈ ವೇಳೆ ಮುಷ್ಟೂರು ಗ್ರಾಾಪಂ ಅಧ್ಯಕ್ಷ ಧನಂಜಯ ಶಿವಂಗಿ, ಹನ್ಮಂತ್ರಾಾಯ ನಾಯಕ ಜರದಬಂಡಿ, ಮಲ್ಲಯ್ಯಖಾನಾಪುರ ಸೇರಿದಂತೆ ಇತರರು ಇದ್ದರು.
ಶಾಲೆಗಳಿಗೆ ಮೂಲ ಸೌಕರ್ಯ, ಅಂಗನವಾಡಿ ಅಪೌಷ್ಟಿಕ ಮಕ್ಕಳ ಆರೋಗ್ಯ ಪರೀಕ್ಷೆ ಮಾಡಿ

