ಸುದ್ದಿಮೂಲ ವಾರ್ತೆ ಮುದಗಲ್ , ಜ.19:
ಕಾಂಗ್ರೆೆಸ್ ಪಕ್ಷ ಮುಸ್ಲೀಮ್ರನ್ನು ರಾಜಕೀಯಕ್ಕೆೆ ಬಳಕೆ ಮಾಡಿಕೊಂಡಿದ್ದು ಬಿಟ್ಟರೇ, ಸಮಾಜದ ಅಭಿವೃದ್ಧಿಿಗೆ ಯಾವತ್ತೋೋ ಮುಂದಾಗದೇ ಅನ್ಯಾಾಯ ಮಾಡಿದೆ ಎಂದು ಎಐಎಂಐಎಂ ರಾಜ್ಯಾಾಧ್ಯಕ್ಷ ಲತ್ೀ ಖಾನ್ ಪಠಾಣ ಶನಿವಾರ ಕಾಂಗ್ರೆೆಸ್ ವಿರುದ್ಧ ವಾಗ್ದಾಾಳಿ ನಸಡೆಸಿದರು.
ಪಟ್ಟಣದ ಖದೀಜಾ ಕನ್ವೇನ್ಷನ್ ಹಾಲ್ ಹಮ್ಮಿಿಕೊಂಡಿದ್ದ ಎಐಎಂಐಎಂ ರಾಜ್ಯಾಾಧ್ಯಕ್ಷರ ಸ್ವಾಾಗತ ಸಮಾರಂಭ ಮತ್ತು ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಾಾತಂತ್ರ್ಯನಂತರ ಕಾಂಗ್ರೆೆಸ್ ಪಕ್ಷ ಮುಸ್ಲಿಿಂ ಸಮಾಜವನ್ನು ರಾಜಕೀಯಕ್ಕಾಾಗಿ ಬಳಕೆ ಮಾಡಿಕೊಂಡಿದೆ. ಸಮಾಜವನ್ನು ಅಭಿವೃದ್ಧಿಿಪಡಿಸದೇ ಅನ್ಯಾಾಯ ಮಾಡಿದೆ. ನಮ್ಮ ಸಮಾಜ ಗುಲಾಮಗಿರಿಯ ಸಂಸ್ಕೃತಿ ಬಿಡಬೇಕು. ನಾವು ಸ್ವತಂತ್ರರಾಗಿ ಯಾರ ಗುಲಾಮರಾಗದೇ ಬದುಕಬೇಕಾಗಿದೆ. ಸಮಾಜಕ್ಕೆೆ ಅನ್ಯಾಾಯವಾದಾಗ ಹೋರಾಡುವ ಏಕೈಕ ವ್ಯಕ್ತಿಿ ಸಂಸದ ಅಸಾದುದ್ದೀನ್ ಓವೈಸಿ ಮಾತ್ರ. ನ್ಯಾಾಯಕ್ಕಾಾಗಿ ಸಂಸತ್ತಿಿನಲ್ಲಿ ಪ್ರತಿಭಟಿಸಿ ಚರ್ಚೆಗೆ ಮುಂದಾಗುತ್ತಾಾರೆ. ಸಮಾಜಕ್ಕೆೆ ಟೀಕೆ-ಟಿಪ್ಪಣೆಗಳಾದ ರಾಜ್ಯ ಸರಕಾರದಲ್ಲಿ ಇಬ್ಬರು ಸಚಿವರು ಇದ್ದರೂ, ಬಾಯಿ ಮುಚ್ಚಿಿ ಕುಳಿತಿಕೊಳ್ಳುತ್ತಿಿರುವುದು ನಾಚಿಗೇಡಿತನವಾಗಿದೆ. ರಾಜ್ಯ ಸರಕಾರದ ಬಿಟ್ಟಿಿ ಭಾಗ್ಯಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿಿದೆ. ಅದರ ಬದಲು ಪ್ರತಿ ಮನೆಯ ಓರ್ವ ಯುವಕನಿಗೆ ಉದ್ಯೋೋಗ ಕೊಟ್ಟರೇ ಆ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತವೆ ಎಂದು ಗ್ಯಾಾರಂಟಿ ಯೋಜನೆಗಳ ಕುರಿತು ಲೇವಡಿ ಮಾಡಿದರು.
ಸಮಾಜದ ಅಭಿವೃದ್ಧಿಿಗೆ ನಮ್ಮ ರಾಜಕೀಯ ಭವಿಷ್ಯಕ್ಕಾಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಮುಂಬರುವ ಪುರಸಭೆ ಚುನಾವಣೆಯಲ್ಲಿ ಎಲ್ಲಾಾ ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ ರಾಜಕೀಯವಾಗಿ ಮುಂದೆ ಬರೋಣ. ದೇಶದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆೆಸ್ ಗೆ ಪರ್ಯಾಾಯವಾದ ಪಕ್ಷವೆಂದರೇ ಎಐಎಂಐಎಂ ಎಂದು ಹೇಳಿದರು.
ಜಿಲ್ಲಾಾ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಬೆಳಗಾವಿ ಜಿಲ್ಲಾಾ ಯೂತ್ಅಧ್ಯಕ್ಷ ಶಾರೂಕ್ ಪಟೇಲ್, ಡಾ. ಮಹ್ಮದ್ ರಫೀ ಖುರೇಶಿ, ಜಿಲ್ಲಾಾ ಯೂತ್ ಅಧ್ಯಕ್ಷ ಶಹಬಾಜ್ ಖಾನ್, ಮುದಗಲ್ ಘಟಕದ ನೂತನ ಅಧ್ಯಕ್ಷ ಅಬೀದ್ ಬೆಳ್ಳಿಿಕಟ್ ಮಾತನಾಡಿದರು.
ಮೌಲಾನಾ ಹಾಸೀಮ್, ಮೌಲಾನಾ ಅಜಮ್ತುಲ್ಲಾಾ ಖಾದ್ರಿಿ, ರೋಷನ್ ಜಹಾ, ನೂರುಶೇಖ್, ಚಾಂದ ಕಡ್ಡಿಿಪುಡಿ, ಮಹ್ಮದ್ ಎಂಟಬಂಡಿ, ಶಾರೂಕ್ ಹಾಗೂ ಇತರರು ಇದ್ದರು.
ಕಾಂಗ್ರೆಸ್ನಿಂದ ಮುಸ್ಲಿಿಂ ಸಮಾಜಕ್ಕೆ ಅನ್ಯಾಯ- ಲತ್ೀ ಖಾನ್ ವಾಗ್ದಾಳಿ

