ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.28:
ನಾರಾಯಣಪುರ ಬದಲಂಡೆ ಕಾಲುವೆಗೆ ನೀರು ಹರಿಸಲು ಈಗಿರುವ ವಾರಬಂದಿಯನ್ನು ಕೂಡಲೇ ರದ್ದು ಪಡಿಸಿ ಎಂಟು ದಿನದ ವಾರಬಂದಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಾ ಅಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಒತ್ತಾಾಯಿಸಿದ್ದಾಾರೆ.
ಅವರು ಭಾನುವಾರದಂದು ಪತ್ರಿಿಕಾ ಹೇಳಿಕೆ ನೀಡಿ, ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸಲು ಮಾಡಿದ ವಾರಬಂಧಿ ಅವೈಜ್ಞಾಾನಿಕವಾಗಿದ್ದು, ಕೆಳ ಭಾಗದ ರೈತರಿಗೆ ನೀರು ಮುಟ್ಟದೇ ಇರುವುದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿಿದೆ. ಈ ಹಿಂದೆ ಕಾಲುವೆಗಳ ನೀರು ಹರಿಸಲು ಐ.ಸಿ.ಸಿ. ಸಭೆಯಲ್ಲಿ ಎಂಟು ದಿನಗಳು ಮಾತ್ರ ಕಾಲುವೆಗಳಿಗೆ ನೀರು ಹರಿಸಲು ಸ್ಥಗಿತ ಮಾಡಬೇಕೆಂದು ರೈತರು ಒತ್ತಾಾಯ ಮಾಡಿದ್ದು, ಆದರೆ ಈ ಅವಿವೇಕಿ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ರೈತರ ಸಲಹೆಗೆ ಮನ್ನಣೆ ಕೊಡದೇ ತೀರ್ಮಾನ ಮಾಡಿ 10ದಿನ ಕಾಲುವೆಗೆ ನೀರು ಸ್ಥಗಿತ ಮಾಡಿದ 14ದಿನಗಳ ಕಾಲ ನೀರು ಹರಿಸುತ್ತಿಿದ್ದಾಾರೆ.
ರೈತ ತಮ್ಮ ಕೃಷಿ ಭೂಮಿಗಳಲ್ಲಿರುವ ಮೆಣಸಿನಕಾಯಿ ಈಗಾಗಲೇ ಹೂ, ಕಾಯಿ ಕಟ್ಟುವ ಸಮಯ ಇಂತಹ ಸಮಯದಲ್ಲಿ ಕನಿಷ್ಟ 10 ದಿನಗಳಲ್ಲಿ ನೀರು ಕಟ್ಟಬೇಕು, ಇಲ್ಲದೇ ಹೋದರೆ ಲ ಹಿಡಿಯುವದಿಲ್ಲ ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿಿದ್ದು, ಇದರಿಂದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ರೈತರಿಗೆ ವಿಷ ನೀಡುದಂತೆ ಆಗುತ್ತದೆ.
ಈಗಾಗಲೇ ಕಾಲುವೆಗಳಿಗೆ ನೀರು ಬಿಟ್ಟಿಿದ್ದು, ಮೇಲ್ಬಾಾಗದಲ್ಲಿ ಕಾಲುವೆಗಳಿಗೆ ನೀರು ತಲುಪಿದರೆ, ಮೂರು ದಿನಗಳು ಕಳೆದರು ಕೆಳ ಭಾಗದ ರೈತರಿಗೆ ನೀರೇ ಮುಟ್ಟಿಿಲ್ಲಾಾ, ಕೂಡಲೇ ಈ ಅವೈಜ್ಞಾಾನಿಕ ವಾರಬಂಧಿಯನ್ನು ಕೂಡಲೇ ರದ್ದು ಪಡಿಸಿ ಕನಿಷ್ಟ 8 ದಿನಗಳಿಗೊಮ್ಮೆೆ ನೀರು ಹರಿಸಬೇಕೆಂದು ಒತ್ತಾಾಯಿಸಿದ್ದಾಾರೆ.
8ದಿನದ ವಾರಬಂದಿಗೆ ಒತ್ತಾಯ

