ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ಬ್ಯಾಾಂಕಿಂಗ್ ಕ್ಷೇತ್ರದ ವ್ಯವಹಾರಕ್ಕೆೆ ವಾರಕ್ಕೆೆ ಐದು ದಿನಗಳ ಕೆಲಸದ ಅವಧಿ ಪುನಃ ಜಾರಿಗೆ ತರಲು ಆಗ್ರಹಿಸಿ ಯುನೈಟೆಡ್ ೆರಂ ಆ್ ಬ್ಯಾಾಂಕ್ ಯೂನಿಯನ್ಸ್ ಮಂಗಳವಾರ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಲಾಯಿತು.
ಇಂದು ನಗರದ ಮಹಾತ್ಮಗಾಂಧಿ ವೃತ್ತದ ಯೂನಿಯನ್ ಬ್ಯಾಾಂಕ್ ಬಳಿ ವಿವಿಧ ರಾಷ್ಟ್ರೀಕೃತ ಬ್ಯಾಾಂಕ್ಗಳ ನೌಕರರು ಪ್ರತಿಭಟನೆ ನಡೆಸಿದರು. 2015ರಲ್ಲಿ ಸಹಿ ಮಾಡಿದ 10ನೇ ದ್ವಿಿಪಕ್ಷೀಯ ಒಪ್ಪಂದದ ಜಂಟಿ ಟಿಪ್ಪಣಿಯಲ್ಲಿ ವಾರಕ್ಕೆೆ ಐದು ದಿನ ಕೆಲಸದ ಬಗ್ಗೆೆ ಸರ್ಕಾರ ಮತ್ತು ಭಾರತೀಯ ಬ್ಯಾಾಂಕ್ಗಳ ಸಂಘಟನೆ ಒಪ್ಪಿಿಕೊಂಡಿದೆ ಇಂದಿಗೂ ಜಾರಿಯಾಗಿಲ್ಲ ಎಂದು ದೂರಿದರು. ಈಗ ಪ್ರತಿ ತಿಂಗಳು 2 ಹಾಗೂ 4ನೇ ಶನಿವಾರ ಮಾತ್ರ ರಜೆ ಎಂದು ಘೊಷಿಸಿ ಸರ್ಕಾರ ಮುಂದಿನ ದಿನಗಳಲ್ಲಿ ಉಳಿದ ಶನಿವಾರವೂ ರಜೆ ನೀಡುವುದಾಗಿ ಹೇಳಿ ಈಗ ನೌಕರರನ್ನು ಶೋಷಣೆಗೆ ದೂಡಿದೆ ಎಂದು ಆಪಾದಿಸಿದರು.
ಅಲ್ಲದೆ, ಪ್ರತಿ ದಿನದ ಕೆಲಸ 40 ನಿಮಿಷ ಹೆಚ್ಚಿಿಸಿ ಉಳಿದ ಶನಿವಾರ ರಜೆ ಎಂದು 2023ರಲ್ಲಿ ಒಪ್ಪಂದವೂ ಆಗಿ ಎರಡು ವರ್ಷ ಉರುಳಿದರೂ ಕೆಲಸ ಮಾತ್ರ ಮಾಡಿಸಿಕೊಳ್ಳುತ್ತಿಿದ್ದು ರಜೆ ಕೊಡುತ್ತಿಿಲ್ಲಘಿ. ಹಣಕಾಸು ಕ್ಷೇತ್ರದಲ್ಲಿ ಆರ್ಬಿಐ, ಎಲ್ಐಸಿ, ಜಿಐಸಿಗಳಲ್ಲಿ ವಾರಕ್ಕೆೆ ಐದು ದಿನ ಕೆಲಸ ಜಾರಿಯಲ್ಲಿದೆ ಕೇಂದ್ರದ ಕಚೇರಿಗಳಿಗೆ ಶನಿವಾರ ರಜೆ ಇದೆ. ಬ್ಯಾಾಂಕ್ ಸಿಬ್ಬಂದಿಗೆ ಮಾತ್ರ ಅದನ್ನು ಅನ್ವಯಯಿಸದೆ ಅನ್ಯಾಾಯ ಮಾಡಿದ್ದಾಾರೆ. ತಕ್ಷಣ ರಜೆ ಘೋಷಣೆ ಮಾಡುವವರೆಗೂ ಈ ಪ್ರತಿಭಟನೆ ನಡೆಯಲಿದೆ ಎಎಂದರು.
ಪ್ರತಿಭಟನೆಯಲ್ಲಿ ಕುಮಾರ, ಸಲಾವುದ್ದೀನ್, ರಾಜೇಶ, ಸೋಮಶೇಖರ, ಪವನಕುಮಾರ ಗಣೇಶ, ಸಂತೋಷ ಇತರ ನೌಕರರು ಭಾಗವಹಿಸಿದ್ದರು.
ವಾರಕ್ಕೆ ಐದು ದಿನ ಕೆಲಸ ನಿಗದಿಗೆ ಬ್ಯಾಾಂಕ್ ನೌಕರರ ಒತ್ತಾಯ

