ಸುದ್ದಿಮೂಲ ವಾರ್ತೆ ಸಿಂಧನೂರು , ಜ.06:
ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ನಗರದ ವಿವಿಧ ಸರಕಾರಿ ಇಲಾಖೆಗಳಿಗೆ ಭೇಟಿ ನೀಡಿ, ಕಡತಗಳನ್ನು ಪರಿಶೀಲನೆ ಮಾಡಿತು.
ಬೆಳಿಗ್ಗೆೆಯಿಂದಲೂ ಮಧ್ಯಾಾಹ್ನದವರೆಗೂ ಮೂವರು ಒಳಗೊಂಡ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆೆ ಭೇಟಿ ಪರಿಶೀಲನೆಯಲ್ಲಿ ತೊಡಗಿದ್ದು ಕಂಡುಬಂತು. ತಹಶೀಲ್ ಕಾರ್ಯಾಲಯದ ಲೆಕ್ಕವಿಭಾಗ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ, ನೋಂದಣಿ ಇಲಾಖೆ, ಖಜಾನೆ ಇಲಾಖೆ, ಭೂ ದಾಖಲೆಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕಾರ್ಯಾಲಯಗಳಲ್ಲಿ ತಂಡದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಲೋಕಾಯುಕ್ತರ ಪರಿಶೀಲನೆಯ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ ಹಿನ್ನೆೆಲೆಯಲ್ಲಿ ತಹಶೀಲ್ ಕಚೇರಿಯ ಆವರಣದಲ್ಲಿ ಬೆಳಿಗ್ಗೆೆಯಿಂದಲೇ ಬಿಕೋ ವಾತಾವರಣ ಕಂಡುಬಂತು. ದಿನವೂ ಜನಜಂಗುಳಿಯಿಂದ ತುಂಬಿ ತುಳುಕುತ್ತಿಿದ್ದ ಕಚೇರಿ ಹಾಗೂ ಆವರಣದಲ್ಲಿ ಮಧ್ಯಾಾಹ್ನ 2 ಗಂಟೆಯ ವೇಳೆ ಖಾಲಿ ಖಾಲಿ ವಾತಾವರಣ ಕಂಡುಬಂತು. ಬೆರಳೆಣಿಕೆಯಷ್ಟು ಜನರು ಕಚೇರಿಯತ್ತ ಧಾವಿಸುತ್ತಿಿದ್ದುದು ಗಮನ ಸೆಳೆಯಿತು. ಇನ್ನೂ ತಹಸಿಲ್ ಕಾರ್ಯಾಲಯಕ್ಕೆೆ ಬಂದ ವಿರಳ ಜನರು ಕಚೇರಿಯ ಅಧಿಕಾರಿಗಳನ್ನು ಮಾಹಿತಿ ಕೇಳುತ್ತಿಿದ್ದಂತೆ ನಯ, ನಾಜೂಕಿನಿಂದ ಮಾಹಿತಿ ನೀಡಿದ್ದು, ಕೆಲವರಿಗೆ ಅಚ್ಚರಿಯೆನಿಸಿತು.
ನೋಂದಣಿ ಕಾರ್ಯಾಲಯ :
ಸದಾ ಜನಜಂಗುಳಿಯಿಂದ ತುಂಬಿರುತ್ತಿಿದ್ದ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಅಷ್ಟೊೊಂದು ಜನರು ಕಂಡುಬರಲಿಲ್ಲ. ಇನ್ನೂ ಮಧ್ಯಾಾಹ್ನದ ವೇಳೆ ನಾಲ್ಕಾಾರು ಜನರು ಮಾತ್ರ ಇದ್ದದ್ದು ಕಂಡುಬಂತು.
ಅಲರ್ಟಾದ ಅಧಿಕಾರಿಗಳು :
ತಹಶೀಲ್ ಕಚೇರಿಗೆ ಲೋಕಾಯುಕ್ತ ತಂಡ ಭೇಟಿ ನೀಡಿದೆ ಎಂಬ ಮಾಹಿತಿ ಗೊತ್ತಾಾಗುತ್ತಿಿದ್ದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅಲರ್ಟ್ ಆದ ಬಗ್ಗೆೆ ಮೂಲಗಳಿಂದ ತಿಳಿದುಬಂದಿದೆ. ಸಂಬಂಧಿಸಿದ ಕಡತಗಳ ಸಿದ್ದಪಡಿಸಿಕೊಳ್ಳಲು ಮುಂದಾಗಿದ್ದಾಾರೆ ಎನ್ನಲಾಗಿದೆ.
ವಿವಿಧ ಕಛೇರಿಗಳಿಗೆ ಲೋಕಾಯುಕ್ತ ತಂಡ ಭೇಟಿ, ಪರಿಶೀಲನೆ

