ಸುದ್ದಿಮೂಲ ವಾರ್ತೆ ಕಲಬುರಗಿ, ಜ.01:
ಸಮಾಜ ಕಲ್ಯಾಾಣ ಇಲಾಖೆಯಿಂದ ನಗರದ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಕೆ.ಕೆ.ಆರ್.ಡಿ.ಬಿ. ಅನುದಾನದಡಿ ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪರೀಕ್ಷಾ ಪೂರ್ವ ಉಚಿತ ತರಬೇತಿ ಕೇಂದ್ರ ಪ್ರಬುದ್ಧ ಅಕಾಡೆಮಿಗೆ ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್ ಭೇಟಿ ನೀಡಿ ಪರಿಶೀಲಿಸಿದರು.
ಸುಮಾರು 10,449,35 ಚ.ಮೀ ವಿಸ್ತೀರ್ಣ ಹೊಂದಿರುವ ಪ್ರಬುದ್ಧ ಅಕಾಡೆಮಿ ತರಬೇತಿ ಕೇಂದ್ರವು ಕಲ್ಯಾಾಣ ಕರ್ನಾಟಕ ಭಾಗದ ವಿದ್ಯಾಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಿಿಸುವ ಗುರಿಯೊಂದಿಗೆ ಉಚಿತ ಮತ್ತು ಗುಣಮಟ್ಟದ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ಶೀಘ್ರವೆ ಕೇಂದ್ರ ಆರಂಭಕ್ಕೆೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ನಿರ್ದೇಶನ ನೀಡಿದರು.
ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿಿರುವ ವಿದ್ಯಾಾರ್ಥಿಗಳಿಗೆ ಉದ್ದೇಶದೊಂದಿಗೆ ಪ್ರಬುದ್ಧ ಅಕಾಡೆಮಿಯನ್ನು ಸ್ಥಾಾಪಿಸಲಾಗಿದೆ. ಪ್ರಸ್ತುತ ವಾರ್ಷಿಕ 500 ವಿದ್ಯಾಾರ್ಥಿಗಳಿಗೆ ತರಬೇತಿ ನೀಡಲು ಯೋಜಿಸಿದ್ದು, ಮುಂದಿನ ದಿನದಲ್ಲಿ ಈ ಸಂಖ್ಯೆೆ ಹೆಚ್ಚಿಿಸಿ ಪ್ರದೇಶದ ವಿದ್ಯಾಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಡಿ.ಸಿ. ಬಿ.ೌಜಿಯಾ ತರನ್ನುಮ್ ತಿಳಿಸಿದರು.
ಈ ಕೇಂದ್ರವು ಆಧುನಿಕ ತಂತ್ರಜ್ಞಾನದೊಂದಿಗೆ 125 ವಿದ್ಯಾಾರ್ಥಿಗಳ ಸಾಮರ್ಥ್ಯ ಹೊಂದಿರುವ ನಾಲ್ಕು ವಿಶಾಲವಾದ ತರಬೇತಿ ಕೊಠಡಿಗಳನ್ನು ಹೊಂದಿದೆ. ಅಂದಾಜು 100 ವಿದ್ಯಾಾರ್ಥಿ ಸಾಮರ್ಥ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯವಿರುವ ಎಲ್ಲಾ ಪುಸ್ತಕಗಳನ್ನು ಒಳಗೊಂಡ ಸುಸಜ್ಜಿಿತ ಗ್ರಂಥಾಲಯ, ಆಡಳಿತ ವಿಭಾಗ, ಡಿಜಿಟಲ್ ಲೈಬ್ರರಿ, ಮೆಂಟರಿಂಗ್ ಕೊಠಡಿಗಳು, ಸ್ವ-ಅಧ್ಯಯನಕ್ಕಾಾಗಿ ಕ್ಯುಬಿಕಲ್ಸ್ ಸೌಲಭ್ಯ ಇದೆ. ಇದಲ್ಲದೆ ವಿದ್ಯಾಾರ್ಥಿಗಳಿಗೆ ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಉಪಹಾರ ಕೇಂದ್ರ ಹಾಗೂ ಉತ್ತಮ ಪರಿಸರದ ವಾತಾವರಣ ಇಲ್ಲಿ ಕಲ್ಪಿಿಸಲಾಗಿದೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀೀತಿ ದೊಡ್ಡಮನಿ, ಹಿಂದುಳಿದ ವರ್ಗಗಳ ಕಲ್ಯಾಾಣಾಧಿಕಾರಿ ಸೋಮಶೇಖರ, ಅಲ್ಪಸಂಖ್ಯಾಾತರ ಕಲ್ಯಾಾಣಾಧಿಕಾರಿ ಸಂಗಮೇಶ, ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತರ ಸೌರಭ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿಗಳಿಂದ ಪ್ರಬುದ್ಧ ಅಕಾಡೆಮಿ ಕೇಂದ್ರ ಪರಿಶೀಲನೆ

