ಸುದ್ದಿಮೂಲ ವಾರ್ತೆ ಮಸ್ಕಿ, ಜ.06:
ಇಲ್ಲಿನ ತಹಶೀಲ್ದಾಾರ್ ಕಚೇರಿಗೆ ಲೋಕಾ ಯುಕ್ತರ ತಂಡ ಮಿಂಚಿನ ಭೇಟಿ ನೀಡಿ ಕಚೇರಿ ಕಾರ್ಯ ಚಟುವಟಿ ಕೆಗಳನ್ನು ಖುದ್ದಾಗಿ ಪರಿಶೀಲಿಸಿದರು.
ಸಾಯಂಕಾಲ ಲೋಕಾಯುಕ್ತ ತಂಡ ಕಚೇರಿಗೆ ಭೇಟಿ ನೀಡಿ ವಿಭಾಗವಾರು ಸೇರಿದಂತೆ ಪ್ರತಿ ಸಿಬ್ಬಂದಿ ಬಳಿ ತೆರಳಿ ಲೋಕಾಯುಕ್ತರು ನಿತ್ಯ ಕಾರ್ಯ ಚಟುವಟಿಕೆ, ಬಾಕಿಯಿರುವ ಕಡತಗಳ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ನೂತನ ತಾಲೂಕು ಇರುವುದರಿಂದ ಸಾರ್ವಜನಿಕರ ದಾಖಲಾತಿ ಸರಿಯಾದ ಸಮಯಕ್ಕೆೆ ತಲುಪಿವೆಯೇ ಅಥವಾ ಇಲ್ಲ ಎಂಬುವುದರ ಬಗ್ಗೆೆ ಪರಿಶೀಲನೆ ಮಾಡುತ್ತೇವೆ. ಇನ್ನು ಲೋಕಾಯುಕ್ತಕ್ಕೆೆ ದೂರು ಅರ್ಜಿಗಳು ಬಂದಿವೆಯೋ ಇಲ್ಲವೋ ಎಂಬುವುದರ ಬಗ್ಗೆೆ ಪರಿಶೀಲನೆಯಲ್ಲಿ ತೊಡಗಿದ್ದೇವೆ ದಾಖಲಾತಿಗಳು ಸರಿಯಾಗಿ ನಿರ್ವಹಣೆ ಹಾಗೂ ವಿಲೇವಾರಿ ಬಗ್ಗೆೆ ಪರಿಶೀಲಿಸಿ ಮುಂದಿನ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿಿ ಭರತ ರೆಡ್ಡಿಿ, ಇನ್ಸ್ಪೆಕ್ಟರ್ ರಾಜಶೇಖರಯ್ಯ ಸೇರಿದಂತೆ ಲೋಕಾಯುಕ್ತ ತಂಡದ ಸಿಬ್ಬಂದಿಗಳು ಹಾಗೂ ತಹಸಿಲ್ದಾಾರ್ ಕಚೇರಿಯ ಸಿಬ್ಬಂದಿಗಳಿದ್ದರು.
ಮಸ್ಕಿ : ಲೋಕಾಯುಕ್ತ ಅಧಿಕಾರಿಗಳಿಂದ ತಹಶೀಲ್ದಾಾರ್ ಕಚೇರಿಗೆ ಭೇಟಿ, ಪರಿಶೀಲನೆ

