ಇಡಿ ತನಿಖೆಗೆ ಹೂಡಿಕೆದಾರರ ಆಗ್ರಹ
ವಿಶೇಷ ವರದಿ ರಾಯಚೂರು, ಜು.21:
ಅಧಿಕ ಬಡ್ಡಿಿಯ ಆಸೆಗೆ ಬಿದ್ದು ರಾಯಚೂರು ಜಿಲ್ಲೆೆಯ ಸಾವಿರಾರು ಜನರು ಕೋಟ್ಯಾಾಂತರ ರೂಪಾಯಿ ಹೂಡಿ ವಂಚನೆಗೊಳಗಾದ ಪ್ರಕರಣ ಬೆಳಕಿಗೆ ಬಂದಿದೆ.
ದರ್ವೇಶ್ ಗ್ರೂಪ್ ಆ್ ಕಂಪನಿ ಎಂಬ ಸಂಸ್ಥೆೆ ಹೂಡಿಕೆದಾರರಿಗೆ ಅಧಿಕ ಬಡ್ಡಿಿ ನೀಡುವುದಾಗಿ ಹೇಳಿ ಅವರಿಂದ ಡಿಪಾಸಿಟ್ ರೂಪದಲ್ಲಿ ಹಣ ಪಡೆದು ಆರಂಭದಲ್ಲಿ ಅಧಿಕ ಬಡ್ಡಿಿ ಹಣ ನೀಡಿ ಈಗ ಬಡ್ಡಿಿ ಹಣ ನೀಡದೇ ಇರುವುದರಿಂದ ರಾಯಚೂರು ಜಿಲ್ಲೆೆಯ ಸಾವಿರಾರು ಜನ ಆತಂಕಕ್ಕೊೊಳಗಾಗಿದ್ದಾಾರೆ.
ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ ಪ್ರತಿ ತಿಂಗಳು 10 ಸಾವಿರ ರೂ. ನೀಡುವುದಾಗಿ ಹೇಳಿ ಠೇವಣಿ ಪಡೆದಿದ್ದ ದರ್ವೇಶ್ ಗ್ರೂಪ್ ಆ್ ಕಂಪನಿ ಮಾಲೀಕರು ಹಾಗೂ ಕಂಪನಿಯ ಏಜೆಂಟರು ಆರಂಭದ ಕೆಲ ತಿಂಗಳ ಕಾಲ ಪ್ರತಿ ತಿಂಗಳು 10 ಸಾವಿರ ರೂ. ಬಡ್ಡಿಿ ಹಣ ನೀಡಿದ ಕಾರಣ ಹೆಚ್ಚಿಿನ ಸಂಖ್ಯೆೆಯಲ್ಲಿ ಲಕ್ಷಾಾಂತರ ಜನ ಹಣ ಹೂಡಿದ ಬಳಿಕ ಈಗ ಹೆಚ್ಚಿಿನ ಬಡ್ಡಿಿ ಹಣ ನೀಡದ ಕಾರಣ ಹಣ ಹೂಡಿಕೆ ಮಾಡಿದವರು ಕಂಗಾಲಾಗಿದ್ದಾಾರೆ.
ಹೆಚ್ಚಿಿನ ಬಡ್ಡಿಿ ದರ ನೀಡಿ ಆರಂಭದ ದಿನಗಳಲ್ಲಿ ಆಸೆ ತೋರಿಸಿದ ಕಾರಣ ಕೆಲ ಬಡವರು, ಕಾರ್ಮಿಕರು ಮತ್ತು ಕೆಲ ಶ್ರೀಮಂತರು ಸಹ ಹಣ ಹೂಡಿಕೆ ಮಾಡಿದ್ದಾಾರೆ. ಕೆಲವರಂತೂ ಹಣದ ಆಸೆಗೆ ಮನೆ, ನಿವೇಶನ, ವಾಹನ ಮತ್ತು ಆಭರಣ ಗಳು ಮಾರಾಟ ಮಾಡಿ ಹೂಡಿಕೆ ಮಾಡಿದ್ದುಘಿ, ಈಗ ಹೆಚ್ಚಿಿನ ಬಡ್ಡಿಿ ದರ ಹಾಗೂ ಅಸಲು ಸಹ ಸಿಗದೇ ಕಂಗಾಲಾಗಿದ್ದಾಾರೆ.
ಒಂದು ಅಂದಾಜಿನ ಪ್ರಕಾರ ಒಂದು ಸಾವಿರ ಕೋ.ರೂ. ಹಣಕಾಸಿನ ವ್ಯವಹಾರ ನಡೆದಿದೆ ಎಂದು ಲೆಕ್ಕಾಾಚಾರವಿದ್ದುಘಿ, ಜಿಲ್ಲಾಾ ಜೆಡಿಎಸ್ ಅಧ್ಯಕ್ಷ ವಿರೂಪಾಕ್ಷಿಿ ಪತ್ರಿಿಕಾ ಗೋಷ್ಠಿಿ ನಡೆಸಿ ಸುಮಾರು 5 ಸಾವಿರ ಕೋ.ರೂ. ಹಣ ಹೂಡಿಕೆ ವಂಚನೆಯಾಗಿದೆ ಎಂದು ಆರೋಪ ಮಾಡಿದ ಮೇಲೆ ಹೂಡಿಕೆ ಮಾಡಿದವರ ಎದೆ ಬಡಿತ, ಮೋಸಕ್ಕೆೆ ಒಳಗಾದೆವೆಂಬ ಆತಂಕ ಹೆಚ್ಚಿಿದ್ದರಿಂದ ಹೈದ್ರಾಾಬಾದ್ ರಸ್ತೆೆಯಲ್ಲಿನ ದರ್ವೇಶ್ ಗ್ರೂಪ್ ಆ್ ಕಂಪನಿ ಕಚೇರಿಗೆ ನೀಡಿದ ಬಾಂಡ್ ಜೊತೆ ತೆರಳಿ ಹೂಡಿಕೆ ಮಾಡಿದ ಹಣದ ಬಡ್ಡಿಿಘಿ, ಅಸಲು ಮರಳಿಸುವಂತೆ ದುಂಬಾಲು ಬೀಳುವವರ ಸಂಖ್ಯೆೆ ಹೆಚ್ಚಿಿತು. ಅಲ್ಲದೆ, ಕಂಪನಿಯ ಮಾಲೀಕನೂ ಸಹ ಕಾಣೆಯಾಗಿದ್ದರಿಂದ ಅವರ ಪರ ಸಿಬ್ಬಂದಿ, ವಕೀಲರು ಬಂದವರಿಗೆ ಸಲಹೆ ನೀಡಿ ಜುಲೈ 12 ರ ನಂತರ ಹಣ ಮರಳಿಸುವ ಭರವಸೆ ನೀಡಿ ಸಾಗ ಹಾಕುವಲ್ಲಿ ಯಶಸ್ವಿಿಯಾಗಿದ್ದರು.
ಈ ರೀತಿ ಅಧಿಕ ಬಡ್ಡಿಿ ಆಸೆ ತೋರಿಸಿ ಠೇವಣಿ ಸಂಗ್ರಹಿಸಿರುವುದು ಆರ್ಬಿಐ ನಿಯಮಾವಳಿಗೆ ಪೂರ್ಣ ವಿರುದ್ದವಾಗಿದ್ದುಘಿ, ಈ ರೀತಿ ಅಕ್ರಮವಾಗಿ ಹೆಚ್ಚಿಿನ ಬಡ್ಡಿಿ ದರಕ್ಕೆೆ ಠೇವಣಿ ಸಂಗ್ರಹಿಸಿ ಜನರಿಗೆ ವಂಚನೆ ಮಾಡಿದ ದರ್ವೇಶ್ ಕಂಪನಿ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಾಯ ಮಾಡಲಾಗಿತ್ತುಘಿ.
ಆದರೆ, ಯಾರೊಬ್ಬರೂ ಪೊಲೀಸರಿಗೆ ಲಿಖಿತ ದೂರು ದಾಖಲಿಸದೆ ಇರುವುದು ಅಚ್ಚರಿಗೆ ಕಾರಣವಾಗಿತ್ತುಘಿ.
ಆರ್ಬಿಐಗೆ ಪತ್ರಘಿ:
ನಿಯಮ ಉಲ್ಲಂಘಿಸಿ ಅಧಿಕ ಬಡ್ಡಿಿ ದರಕ್ಕೆೆ ಠೇವಣಿ ಸಂಗ್ರಹಿಸಿ ಜನರಿಗೆ ನಿಗಧಿತ ಅವಧಿಯಲ್ಲಿ ಹಣ ವಾಪಸ್ಸು ಮಾಡದೇ ಇರುವ ಪ್ರಕರಣ ಬೆಳಕಿಗೆ ಬರುತ್ತಿಿದ್ದಂತೆಯೇ ಹಿಂದಿನ ಜಿಲ್ಲಾಾ ಪೊಲೀಸ್ ವರಿಷ್ಟಾಾಧಿಕಾರಿ ಈ ಬಗ್ಗೆೆ ಪರಿಶೀಲನೆ ಮಾಡುವಂತೆ ಆರ್ಬಿಐಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಆದರೆ ಆರ್ಬಿಐನಿಂದ ಇಲ್ಲಿಯವರೆಗೆ ಅಧಿಕೃತವಾಗಿ ಕ್ರಮ ಕೈಗೊಂಡ ಬಗ್ಗೆೆ ವರದಿ ಬಂದಿಲ್ಲಘಿ.
ಇಷ್ಟೊೊಂದು ಭಾರಿ ಪ್ರಮಾಣದ ಹಣಕಾಸಿನ ವಹಿವಾಟು ಅಕ್ರಮವಾಗಿ ನಡೆದಿದ್ದರೂ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲು ಮಾಡಿಕೊಳ್ಳದೆ ವಂಚನೆಗೊಳಗಾದವರಿಂದ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಲ್ಲದೆ ದೂರು ನೀಡಲು ಸಹ ವಂಚನೆಗೊಳಗಾದವರಿಗೆ ಹಾಲಿ ಜಿಲ್ಲಾಾ ಪೊಲೀಸ್ ವರಿಷ್ಟಾಾಧಿಕಾರಿ ಮನವಿ ಮಾಡಿದ್ದಾಾರೆ.
ಆದರೆ, ದೂರು ನೀಡಲು ಮುಂದಾಗುವ ಹೂಡಿಕೆದಾರರಿಗೆ ದೂರವಾಣಿ ಮೂಲಕ ಬೆದರಿಕೆ ಕರೆಗಳು ಬರುತ್ತಿಿದ್ದ ಕಾರಣ ಬಡವರು, ಕೂಲಿಕಾರ್ಮಿಕರು ದೂರು ನೀಡಲು ಹಿಂದೇಟು ಹಾಕುತ್ತಿಿದ್ದಾಾರೆ ಎನ್ನುವ ಮಾಹಿತಿ ಲಭ್ಯ ಆಗಿದೆ. ಅಲ್ಲದೆ, ದೂರು ನೀಡಿದರೆ ನಿಮಗೇನೂ ಸಿಗದು ಎಂಬ ಹೆದರಿಸುವುದಲ್ಲದೆ, ಕೆಲವರಿಗೆ ಹೂಡಿಕೆ ಮಾಡಿದ ಹಣ, ಇದುವರೆಗೆ ಪಡೆದ ಬಡ್ಡಿಿ ಬಗ್ಗೆೆ ಲೆಕ್ಕ ಕೇಳಿ ಇಂತಿಷ್ಟು ಹಣ ಪಡೆದು ಬಾಂಡ್ನಲ್ಲಿ ಹಣ ಮರಳಿ ಪಡೆದ ಬಗ್ಗೆೆ ಸಹಿ ಮಾಡಿ ಹೋಗಲು ಬೆದರಿಸುತ್ತಿಿದ್ದಾಾರೆಂಬ ಮಾತು ಕೇಳಿ ಬಂದಿದೆ.
ಈ ಅಕ್ರಮದ ಸಮಗ್ರ ತನಿಖೆ ಮಾಡಿ ತಪ್ಪಿಿತಸ್ಥರ ವಿರುದ್ದ ಕ್ರಮ ಕೈಗೊಂಡು ವಂಚನೆಗೊಳಗಾದ ಹೂಡಿಕೆದಾರರಿಗೆ ಹಣ ವಾಪಸು ಮಾಡುವಂತೆ ಹೂಡಿಕೆ ಮಾಡಿದವರು ರಾಯಚೂರಿನಲ್ಲಿರುವ ದರ್ವೇಶ್ ಗ್ರೂಪ್ ಆ್ ಕಂಪನಿ ಕಛೇರಿಗೆ ಅಲೆದಾಡುತ್ತಿಿದ್ದುಘಿ, ಕಛೇರಿ ಬೀಗ ಹಾಕಿದ ಕಾರಣ ಆತಂಕ ಮತ್ತಷ್ಟು ಹೆಚ್ಚಾಾಗಿದೆ.
ಕೆಲ ದಿನಗಳ ಹಿಂದೆ ಕಂಪನಿಯ ಕಾನೂನು ಸಲಹೆಗಾರರ ಮೂಲಕ ಸಂದೇಶ ರವಾನಿಸಿ ಜು.12 ರೊಳಗಾಗಿ ಹೂಡಿಕೆದಾರರ ಹಣ ಹಿಂತಿರುಗಿಸುವುದಾಗಿ ಸಂದೇಶ ರವಾನೆ ಮಾಡಲಾಗಿತ್ತುಘಿ. ಆದರೆ ಆವರು ಹೂಡಿಕೆ ಮಾಡಿದ ಹಣ ಇಲ್ಲಿಯವರೆಗೂ ಹಿಂತಿರುಗಿಸಿಲ್ಲಘಿ.
ಏತನ್ಮಧ್ಯೆೆ ಕಂಪನಿಯ ಮಾಲೀಕ ಮಹಮ್ಮದ್ ಹುಸೇನ್ ಸೂಜಾ ಕಛೇರಿಯಲ್ಲಿ ಸಿಗದೇ ನಾಪತ್ತೆೆಯಾದ ಕಾರಣ ಹೂಡಿಕೆದಾರರಲ್ಲಿ ಮತ್ತಷ್ಟು ಆತಂಕ ಹೆಚ್ಚಾಾಗಿದ್ದುಘಿ, ಸರ್ಕಾರ ಮತ್ತು ಪೊಲೀಸರು ತಮ್ಮ ನೆರವಿಗೆ ಬರುವಂತೆ ಹಣ ಹೂಡಿಕೆದಾರರು ತಮ್ಮ ಅಳಲು ತೋಡಿಕೊಂಡಿದ್ದಾಾರೆ.
ಈ ಎಲ್ಲಾಾ ಬೆಳವಣಿಗೆಯ ಮಧ್ಯೆೆ ಸಾವಿರಾರು ಕೋಟಿ ವಹಿವಾಟು ನಡೆದಿದ್ದು ಸಾವಿರಾರು ಜನ ತಮ್ಮ ಹಣ ಮರಳಿ ಸಿಗುವುದೆ ಎಂಬ ಆತಂಕದಲ್ಲಿ ಮುಳುಗಿದ್ದಾಾರೆ.