ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.26:
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಕೆ.ಆರ್. ಪುರ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ನ್ಯಾಾ.ಬಿ. ಬಸವರಾಜ ಅವರಿದ್ದ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಒಂದು ವೇಳೆ ಬೈರತಿ ಬಸವರಾಜು ಬಂಧನವಾಗಿದ್ದರೆ ತಕ್ಷಣ ಬಿಡುಗಡೆಗೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಾಯಾಲಯ ಬೈರತಿ ಬಸವರಾಜು ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಹಿನ್ನೆೆಲೆಯಲ್ಲಿ ಶಾಸಕ ಬೈರತಿ ಬಸವರಾಜು ತಲೆಮರಿಸಿಕೊಂಡಿದ್ದರಲ್ಲದೆ, ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈಗ ಬಂಧನ ಭೀತಿಯಿಂದ ನಿಟ್ಟುಸಿರು ಬಿಟ್ಟಿಿದ್ದಾರೆ.
ಶಾಸಕ ಬೈರತಿ ಬಸವರಾಜು ಪರ ವಕೀಲ ಸಂದೇಶ್ ಚೌಟ ಅವರು ವಾದ ಮಂಡಿಸಿದ್ದರು. ಸಿಐಡಿ ತನಿಖೆ ಆರಂಭಿಸಿ 5 ತಿಂಗಳಾಗಿದೆ. 5 ತಿಂಗಳು ತನಿಖೆ ನಡೆಸಿದರೂ ಬೈರತಿ ಬಸವರಾಜ್ ವಿರುದ್ದ ಯಾವುದೇ ಸಾಕ್ಷಿ ಇಲ್ಲ. 5 ತಿಂಗಳಿಂದ ಸಿಐಡಿ ವಿಚಾರಣೆಗೆ ಕರೆದಿಲ್ಲಎಂದು ವಾದ ಮಂಡಿಸಿದ್ದರು. ಸಿಐಡಿ ಚಾರ್ಜ್ಶೀಟ್ ಸಲ್ಲಿಕೆ ವೇಳೆ ಬೈರತಿ ಬಸವರಾಜ್ ವಿರುದ್ದ ಕಾರಣಗಳನ್ನು ನೀಡಿಲ್ಲ ಎಂದು ಬಂಧನವಾದರೆ ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿದೆ. ಇದರ ಜೊತೆಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿ ಪೊಲೀಸರಿಗೆ ನೋಟಿಸ್ ನೀಡಿ ಜನವರಿ 6ಕ್ಕೆೆ ವಿಚಾರಣೆ ಮುಂದೂಡಿದೆ.

