ಸುದ್ದಿಮೂಲ ವಾರ್ತೆ
ಮೈಸೂರು, ಜು.28 : ಮಳೆಯ ಅಬ್ಬರ ನಿಂತಿದೆ. ವಾರದಿಂದ ಮಳೆಯಿಂದ ನಲುಗಿದ್ದ ಜನರಿಗೆ ಕೊಂಚ ವಿರಾಮ ಎನಿಸಿದೆ. ಸೂರ್ಯನ ಪ್ರಖರತೆ ಬೆಳಗ್ಗೆಯಿಂದ ಹೆಚ್ಚು ಕಡಿಮೆ ಸಂಜೆ 4 ರವರೆಗೆ ಇತ್ತು. ಈಗ ಮಳೆ ನಿಂತ ಕಾರಣ ರೈತರು ಭೂಮಿ ಉಳುಮೆ ಮಾಡಿ ಬಿತ್ತನೆ ಮಾಡಲು ಸಿದ್ದ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ.
ಮಳೆ ಕಡಿಮೆ ಆಗಿರುವುದರಿಂದ ಹಾರಂಗಿ. ಕೆಆರ್ಎಸ್, ಹೇಮಾವತಿ ಮತ್ತು ಕಬಿನಿ ಜಲಾಶಯಗಳ ನೀರಿನ ಒಳ ಹರಿವಿನ ಪ್ರಮಾಣ ಕುಗ್ಗಿದೆ. ಹೆಚ್ಚು ನೀರು ಬಿಡುಗಡೆ ಮಾಡದ ಕಾರಣ ಹಿಂದೆ ಎದುರಾಗಿದ್ದ ಪ್ರವಾಹ ಭೀತಿ ತಗ್ಗಿದೆ.
ಜಲಾಶಯಗಳ ನೀರಿನ ಮಟ್ಟ
ಹೇಮಾವತಿ
ಗರಿಷ್ಠ ಮಟ್ಟ- 2922 ಅಡಿಗಳು.
ಇಂದಿನ ಮಟ್ಟ-2911.75
————-
ಕೆಆರ್ಎಸ್
ಗರಿಷ್ಠ ಮಟ್ಟ-124.80 ಅಡಿಗಳು.
ಇಂದಿನ ಮಟ್ಟ-110.85.
—————
ಕಬಿನಿ
ಗರಿಷ್ಠ ಮಟ್ಟ-2284 ಅಡಿಗಳು.
ಇಂದಿನ ಮಟ್ಟ-2286.38 ಅಡಿಗಳು.
——–
ಹಾರಂಗಿ
ಗರಿಷ್ಠ ಮಟ್ಟ- 2859
ಅಡಿಗಳು.
ಇಂದಿನ ಮಟ್ಟ-2254.77 ಅಡಿಗಳು.