ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ಕರ್ನಾಟಕ ಅನುಸೂಚಿತ ಜಾತಿಗಳ ವರ್ಗೀಕರಣ ನಿಯಮಾನುಸಾರ ಕ್ರಮ ವಹಿಸಿ ಮುಂಬರುವ ಚುನಾವಣೆಗಳಲ್ಲಿ ಒಳ ಮೀಸಲು ಅನ್ವಯಿಸಲು ಸಾಮಾಜಿಕ ನ್ಯಾಾಯಕ್ಕಾಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಒತ್ತಾಾಯಿ ಸಿದೆ.
ಸಿಂಧನೂರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕ 2025ರಲ್ಲಿ ಸಂವಿಧಾನ ಪರೀಚ್ಛೇದ 16 2(4ಎ) ಮತ್ತು ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮಕ್ಕೆೆ ರೋಸ್ಟರ್ ಬಿಂದುಗಳಂತೆ ಶೇ. 6 ಬಡ್ತಿಿ ಸೇರಿಸಿ ಕಾಯ್ದೆೆಗೆ ತಿದ್ದುಪಡಿ ಮಾಡುವಂತೆ ಸಾಮಾಜಿಕ ನ್ಯಾಾಯಕ್ಕಾಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ಆಗ್ರಹಿಸಿತು.
ಒಳ ಮೀಸಲಾತಿ ಅನುಷ್ಠಾಾನ ಸ್ವಾಾಗತಿಸಿದ ನಿಯೋಗ ಶೇ 6 ಬಡ್ತಿಿಯನ್ನು ಸೇರಿಸಿ ಕಾಯ್ದೆೆಗೆ ತಿದ್ದುಪಡಿ ತರಲು ಒತ್ತಾಾಯಿಸಲಾಯಿತು. ಪರಿಶಿಷ್ಟ ಜಾತಿ ಉಪ ಹಂಚಿಕೆ ಯೋಜನೆ ಅಡಿ ಶೇ 6:6:5 ಅನುಪಾತದಂತೆ ಅನುದಾನ ಹಂಚಿಕೆ ಮಾಡಲು ಮನವಿ ಮಾಡಲಾಯಿತು. ಸ್ಥಳೀಯ ಸಂಸ್ಥೆೆಗಳ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಗ್ರಾಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಒಳ ಮೀಸಲಾತಿ ಅನುಪಾತ ಸ್ಥಾಾನ ಹಂಚಿಕೆಗೆ ಕೋರಲಾಯಿತು.
ಪ್ರವರ್ಗ ಎ ಜಾತಿ ಪ್ರಮಾಣ ಪರಿಶೀಲನ ಮೇಲ್ವಿಿಚಾರಣ ಸಮಿತಿಯನ್ನು ರಚಿಸಬೇಕು. ಸಮಾಜ ಕಲ್ಯಾಾಣ ಸಚಿವ ಹೆಚ್. ಸಿ . ಮಹಾದೇವಪ್ಪ ಮತ್ತು ಇಲಾಖೆಯ ಮುಖ್ಯಸ್ಥ ರಾಕೇಶ್ ಕುಮಾರ ಹಾಗೂ ವೆಂಕಟಯ್ಯ ಅವರನ್ನು ಕೂಡಲೇ ವರ್ಗಾವಣೆ ಸೇರಿದಂತೆ ಇನ್ನಿಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿ ಸಲಾಯಿತು.
ಈ ಸಂದರ್ಭದಲ್ಲಿ ಸಂಚಾಲಕರಾದ ಎಸ್.ಮಾರೆಪ್ಪ ವಕೀಲ, ಹೇಮರಾಜ ಅಸ್ಕಿಿಹಾಳ, ಅಂಜಿನೇಯ್ಯ ಕುರುಬದೊಡ್ಡಿಿ, ಅಂಜನೇಯ್ಯ ಉಟ್ಕೂರು ಇತರರಿದ್ದರು.

