ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ರಾಯಚೂರು ಜಿಲ್ಲೆಯಲ್ಲಿ ಹತ್ತಿಿ ಬೆಳೆಯು ಯೆಥೇಚ್ಛವಾಗಿದ್ದು, ಈ ಭಾಗದ ಹತ್ತಿಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಸಂಶೋಧನೆಗಳು ನಡೆಯಬೇಕಿದೆ ಎಂದು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆೆಯ ನಿರ್ದೇಶಕ ಡಾ. ಶ್ರೀನಿವಾಸ ರಾವ್ ಹೇಳಿದರು.
ಡಿಸೆಂಬರ್ 29ರ ಸೋಮವಾರ ನಗರದ ಕೃಷಿ ವಿವಿಯ ಜಗಜ್ಯೋೋತಿ ಬಸವೇಶ್ವರ ಸಭಾಂಗಣದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯ, ರಾಷ್ಟ್ರೀಯ ಕೃಷಿ ಅಭಿವೃದ್ಧಿಿ ಸಹಕಾರಿ ನಿಯಮಿತ, ಬಾರಾಮುಲ್ಲಾ, ಜಮ್ಮು ಮತ್ತು ಕಾಶ್ಮೀರ ಇವರ ಸಹಯೋಗದಲ್ಲಿ ಮೂರು ದಿನಗಳ ಅವಧಿಯ ಕೃಷಿ, ಪಶುವೈದ್ಯಕೀಯ ಮತ್ತು ಕೃಷಿಗೆ ಸಂಬಅಧಿತ ವಿಷಯಗಳಲ್ಲಿ ಸುಸ್ಥಿಿರ ನಾವಿನ್ಯತೆಗಳ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನಕ್ಕೆೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದೆಲ್ಲೆಡೆ 2002ರಲ್ಲಿ ಉತ್ತಮವಾಗಿ ಬೆಳೆದು ಭರವಸೆ ಮೂಡಿಸಿದ ಬಿಟಿ ಹತ್ತಿಿ ತಳಿಯು ಕ್ರಮೇಣ ಕೀಟಬಾಧೆಗೆ ತುತ್ತಾಾಗಿದ್ದು, ನಾವಿನ್ಯತೆಯ ಮೂಲಕ ಹೊಸ ತಳಿ ಕಂಡುಹಿಡಿಯಬೇಕಾಗಿದೆ. ಹತ್ತಿಿ ಬಿಡಿಸುವಿಕೆಯ ಸಣ್ಣ ಉಪಕರಣಗಳ ತಯಾರಿಕೆ ಹಾಗೂ ಉತ್ತಮ ರೀತಿಯ ಬ್ಯಾಾಗೇಜ್ನ ಅವಶ್ಯಕತೆಯಿದೆ. ಇವೆರಡನ್ನೂ ವಿಶ್ವವಿದ್ಯಾಾಲಯವು ಪರಿಗಣಿಸಿ ಕ್ರಮವಹಿಸಬೇಕಾಗಿದೆ ಎಂದರು.
ನಾವಿನ್ಯತೆ ಎಂದರೆ ಹೊಚ್ಚ-ಹೊಸದು, ಹೆಚ್ಚಿಿನ ಪ್ರಗತಿ ಹಾಗೂ ನಿರಂತರವಲ್ಲದ್ದನ್ನು ಬಿಟ್ಟು ಪ್ರಸ್ತುತಿಗೆ ಹೊಂದಿಕೊಳ್ಳುವ ಬಗ್ಗೆೆ ವಿಚಾರ ಮಾಡುವುದಾಗಿದೆ. ಕೃಷಿ ಮತ್ತು ಜಾನುವಾರು ಕೃಷಿ ಕ್ಷೇತ್ರಗಳ ಅಭಿವೃದ್ಧಿಿಗೆ ಕೃಷಿ ವಿಶ್ವವಿದ್ಯಾಾಲಯ ಮತ್ತು ಕೃಷಿಗೆ ಸಂಬಂಧಿಸಿದ ಸಂಸ್ಥೆೆಗಳು ಒತ್ತು ಕೊಡಬೇಕು. ಈ ಬಗ್ಗೆೆ ರಾಯಚೂರಿನ ಕೃ.ವಿ.ವಿಯು ತನ್ನ ಕೊಡುಗೆಯ ಬಗ್ಗೆೆ ಪರಾಮರ್ಶಿಸಬೇಕೆಂದು ಕಿವಿಮಾತು ಹೇಳಿದರು.
ಮಳೆಮಾರುತ ಮತ್ತು ಮಾರುಕಟ್ಟೆೆಗಳ ಸಮಸ್ಯೆೆಗಳತ್ತ ವಿಶ್ವವಿದ್ಯಾಾಲಯವು ಗಮನಹರಿಸಿ ರೈತರ ಏಳಿಗೆಗೆ ಸಹಕರಿಸಬೇಕು. ತುಂತುರು ನೀರಾವರಿ, ಲೀಕರಣ, ನಿವ್ವಳ ಶೂನ್ಯ ಹೊರಸೂಸುವಿಕೆ ಇತ್ಯಾಾದಿಗಳ ಬಗ್ಗೆೆ ಗಮನ ನೀಡಬೇಕು. ಕೊಯ್ಲೋತ್ತರ ನಷ್ಟವು ಕೃಷಿಯ ಅಭಿವೃದ್ಧಿಿಗೆ ಮಾರಕವಾಗಿದ್ದು, ಶೇ.30 ರಷ್ಟು ಆಹಾರವು ಪ್ರತಿ ವರ್ಷ ನಷ್ಟವಾಗುತ್ತಿಿದ್ದು, ಇದರ ಬೆಲೆ ವಾರ್ಷಿಕವಾಗಿ 1.3 ಲಕ್ಷ ಕೋಟಿಗಳಷ್ಟಾಾಗಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ರೈತರೇ ಜೀವಾಳ, ರೈತರಿಲ್ಲದಿದ್ದರೆ ಯಾವುದೇ ಕೃಷಿ ವಿಶ್ವವಿದ್ಯಾಾಲಯ ಇರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ರೈತರ ಅಭಿವೃದ್ಧಿಿಗೆ ಶ್ರಮಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಿಶ್ವವಿದ್ಯಾಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ವಹಿಸಿದರು.
ಈ ವೇಳೆ ಹೈದರಾಬಾದಿನ ಪಿ.ವಿ.ನರಸಿಂಹರಾವ್ ಕೃಷಿ ವಿಶ್ವವಿದ್ಯಾಾಲಯದ ವಿಸ್ತರಣಾ ನಿರ್ದೇಶಕ ಪ್ರೊೊ. ಎಂ. ಕಿಶನ್ಕುಮಾರ, ಓಡಿಸ್ಸಾಾದ ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆೆಯ ನಿರ್ದೇಶಕ ಡಾ. ಜಿ. ಎ. ಕೆ. ಕುಮಾರ, ಬೀದರ್ನ ಪಶುವೈದ್ಯಕೀಯ ವಿಶ್ವವಿದ್ಯಾಾಲಯದ ಸ್ನಾಾತಕೋತ್ತರ ವಿಭಾಗದ ಡೀನ್ರಾಾದ ಡಾ. ದಿಲೀಪ್ ಕುಮಾರ, ಬಾರಾಮುಲ್ಲಾದ ಡಾ. ಆರ್. ಎ. ಶಾಹ ಅವರು ಮಾತನಾಡಿದರು.
ಇದಕ್ಕೂ ಮುಂಚೆ ಅಂತರಾಷ್ಟ್ರೀಯ ಸಮ್ಮೇಳನದ ಆಯೋಜನೆಯ ಉದ್ದೇಶವನ್ನು ಸಮ್ಮೇಳನದ ಆಯೋಜನಾ ಸಂಘಟಕರಾದ ಡಾ.ಜಾಗೃತಿ ಬಿ. ದೇಶಮಾನ್ಯ ಅವರು ಮಂಡಿಸಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಾಲಯದ ವ್ಯವಸ್ಥಾಾಪನಾ ಮಂಡಳಿಯ ಸದಸ್ಯರುಗಳಾದ ಬಸನಗೌಡ ಬ್ಯಾಾಗವಾಟ್, ಮಲ್ಲೇಶ ಕೊಲಿಮಿ, ಮಲ್ಲಿಕಾರ್ಜುನ.ಡಿ ತಿಮ್ಮಪ್ಪ ಸೋಮಪ್ಪ ಚವಡಿ, ಡಾ.ಕೆ.ನಾರಾಯಣ ರಾವ್, ಡಾ. ಜಿ. ಬಿ. ಲೋಕೆಶ್ ಸೇರಿದಂತೆ ವಿಶ್ವವಿದ್ಯಾಾಲಯದ ಅಧಿಕಾರಿವೃಂದ, ಪ್ರಾಾಧ್ಯಾಾಪಕವೃಂದ, ಸ್ನಾಾತಕೋತ್ತರ ವಿದ್ಯಾಾರ್ಥಿಗಳು ಇದ್ದರು.
ಕೃಷಿ, ಪಶುವೈದ್ಯಕೀಯ ಮತ್ತು ಕೃಷಿಗೆ ಸಂಬಂಧಿತ ವಿಷಯಗಳ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಹತ್ತಿ ಬೆಳೆ ಕ್ಷೇತ್ರದಲ್ಲಿ ಹೊಸ ಸಂಶೋಧನೆ ನಡೆಯಲಿ : ಡಾ.ಶ್ರೀನಿವಾಸ ರಾವ್ ಸಲಹೆ

