ಸುದ್ದಿಮೂಲ ವಾರ್ತೆ ಔರಾದ್, ನ.28:
ಕನ್ನಡ, ಇಂಗ್ಲಿಿಷ್ ಸರಳ ಪದಗಳನ್ನು ಕನ್ನರಾ, ಯಿಗಲಿಷ್ ಎಂದು ಬರೆದ ಔರಾದ್ ತಾಲೂಕಿನ ಕೌಠಾ ಬಿ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ವಿದ್ಯಾಾರ್ಥಿಗಳ ಕುರಿತು ಸುದ್ದಿಮೂಲದಲ್ಲಿ ಬಂದ ವರದಿಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಈ ಕುರಿತು ಸ್ವಯಂ ಪ್ರೇೇರಿತ ದೂರನ್ನು ದಾಖಲಿಸಿಕೊಂಡಿದೆ.
ದಿನಾಂಕ 27-11-2025ರಂದು ಸುದ್ದಿಮೂಲ ಪತ್ರಿಿಕೆಯಲ್ಲಿ ಕೌಠಾ ಬಿ ಗ್ರಾಾಮದ ಸರ್ಕಾರಿ ಶಾಲೆಯ ವಿದ್ಯಾಾರ್ಥಿಗಳು ಕಲಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿಿರುವ ಕುರಿತು ಸವಿಸ್ತಾಾರವಾಗಿ ಬರೆದ ವರದಿಯನ್ನು ಗಮನಿಸಿದ ಮಕ್ಕಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಈ ಕುರಿತು ಬೀದರ್ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಅವರಿಗೆ, ಈ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆೆ ಪರಿಶೀಲನೆ ನಡೆಸಬೇಕು ಹಾಗೂ ಕೈಗೊಂಡ ಕ್ರಮದ ಬಗ್ಗೆೆ ವರದಿಯಲ್ಲಿ ತಿಳಿಸುವಂತೆ ಸೂಚನೆ ನೀಡಿದ್ದಾರೆ. ನೋಟಿಸ್ ಪ್ರತಿಯನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೂ ರವಾನಿಸಲಾಗಿದೆ.
ಸುದ್ದಿಮೂಲದಲ್ಲಿ ಬಂದ ವರದಿ ಉಲ್ಲೇಖಿಸಿರುವ ಆಯೋಗವು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗಯೂ ತೀವ್ರ ಕಳವಳ ವ್ಯಕ್ತಪಡಿಸಿದೆ.
ರದಿ ನೀಡಲು ಡಿಸಿಗೆ ಸೂಚನೆ ಕನ್ನರಾ, ಯಿಗಲಿಷ್ : ಮಕ್ಕಳ ಆಯೋಗದಿಂದ ಸ್ವಯಂ ದೂರು ದಾಖಲು

