ಶ್ರೀಕಾಂತ್ ಬಿರಾದಾರ್ ಚಿಮ್ಮಕೋಡ್ ಬೀದರ್, ಡಿ.13
ನಗರದ ಪ್ರತಿಷ್ಠಿಿತ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆೆ (ಬ್ರಿಿಮ್ಸ್) ಹಾಲಿ ನಿರ್ದೇಶಕ ಡಾ.ಶಿವಕುಮಾರ್ ಶೆಟಕಾರ್ ಅವಧಿಯಲ್ಲಿ ಕೈಗೊಂಡ ನಿರ್ಣಯಗಳು, ಹುದ್ದೆಗಳ ನೇಮಕಾತಿ, ಸಂಸ್ಥೆೆಗಳಿಗೆ ಹಣ ಪಾವತಿ, ಔಷಧಗಳ ಖರೀದಿಯಲ್ಲಿ ಭಾರೀ ಪ್ರಮಾಣದ ಲೋಪ ಎಸಗಿರುವುದನ್ನು ಇತ್ತೀಚೆಗೆ ಗದಗ ಮೂಲದ ನಿವೃತ್ತ ನ್ಯಾಾಯಾಧೀಶ ಎಸೆಜೆ ಪಲ್ಲೇದ್ ಅವರ ನೇತೃತ್ವದಲ್ಲಿ ರಚಿಸಿದ ತನಿಖಾ ತಂಡವು ಪತ್ತೆೆ ಹಚ್ಚಿಿದೆ.
ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಹೇರೋರಿ ನಡೆಸಿರುವ ಜೊತೆಗೆ ಶಿವಕುಮಾರ್ ಶೆಟಕಾರ್ ಅಧಿಕಾರಾವಧಿಯಲ್ಲಿ ಮಂಜಿರಾ ಸಂಸ್ಥೆೆಗೆ 1.54 ಕೋಟಿ ರೂ. ಪಾವತಿ ಮಾಡಲಾಗಿದೆ. ಬ್ರಿಿಮ್ಸ್ ಸಂಸ್ಥೆೆಗೆ ಸಂಬಂಧಿಸಿದಂತೆ ಸಿಎಜಿ ಅಡಿಟ್ 2019-20ರಿಂದ 2022-23ರ ಅವಧಿಯಲ್ಲಿ ಲೆಕ್ಕ ಪತ್ರ ತಪಾಸಣೆ ಮಾಡಿದ್ದು, ಸದರಿ ಪ್ರಕ್ರಿಿಯೆಯಲ್ಲಿ ಲೋಪದೋಷಗಳ ಅಡಿಟ್ ವರದಿ ತಯ್ಯಾಾರಿಸಿತ್ತು. ಮಂಜಿರಾ ಸಂಸ್ಥೆೆಗೆ 1.54 ಕೋಟಿ ರೂ. ಪಾವತಿ ಬಗ್ಗೆೆ ಆಕ್ಷೇಪಣೆ ವ್ಯಕ್ತಪಡಿಸಿರುವುದನ್ನು ತನಿಖಾ ತಂಡ ಪತ್ತೆೆ ಮಾಡಿದೆ. ಹಾಗೇ, ಈ ಬಗ್ಗೆೆ ಬ್ರಿಿಮ್ಸ್ ಸಂಸ್ಥೆೆಯಿಂದ ಸಲ್ಲಿಕೆಯಾದ ವಿವರಣೆಗೆ ಮಹಾಲೇಖಪಾಲರು ಈವರೆಗೂ ಒಪ್ಪಿಿಗೆ ಆಗಿರುವ ಬಗ್ಗೆೆ ಯಾವುದೇ ಮಾಹಿತಿ ಬಂದಿಲ್ಲ. ಈ ರೀತಿ ಸಂಸ್ಥೆೆ ಹಣ ನಿಯಮಬಾಹಿರವಾಗಿ ಪಾವತಿ ಮಾಡಿರುವುದು ಸಂಸ್ಥೆೆಗೆ ಹಾಗೂ ಸರ್ಕಾರಕ್ಕೆೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಕಂಡು ಬಂದಿದೆ ಎಂದು ವೈದ್ಯಕೀಯ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಾಕ್ಸ್
ಟೆಂಡರ್ ಬದಲಾಗಿ ಕೋಟೇಶನ್
2023ರಿಂದ 2025ನೇ ಸಾಲಿನಲ್ಲಿ ಆಯುಷ್ಮಾಾನ ಭಾರತ ಯೋಜನೆ ಅಡಿ ಪಾವತಿ ಮಾಡಿರುವ ವೋಚರ್ಸಗಳು ಮತ್ತು ಸಂಬಂಧಪಟ್ಟ ದಾಖಲೆಗಳಲ್ಲಿ ಹಾಗೂ ಲೆಕ್ಕ ಶಿರ್ಷಿಕೆ – 103ರಡಿಯಲ್ಲಿ ಸಂಸ್ಥೆೆಗೆ ಖರೀದಿಸಿರುವ ಔಷಧಿಗಳು ಮತ್ತು ರಾಸಾಯನಿಕ ಸಾಮಾಗ್ರಿಿಗಳನ್ನು ಟೆಂಡರ್ ಮೂಲಕ ಖರೀದಿಸದೆ ಕೋಟೇಶನ್ ಮೂಲಕ ಖರೀದಿ ಮಾಡಿ ಅನುದಾನ ಪಾವತಿ ಮಾಡಲಾಗಿದೆ. ಕೋಟೇಶನ್ ಮೂಲಕವೇ ಹೆಚ್ಚಿಿನ ಪ್ರಮಾಣದಲ್ಲಿ ಖರೀದಿ ಪ್ರಕ್ರೀೆಯೆ ನಡೆಸಲಾಗಿದೆ. ಆದರೆ, ಖರೀದಿ ಮತ್ತು ಸರಬರಾಜು ಮಾಡಿದ ಬಗ್ಗೆೆ ಸ್ಟಾಾಕ್ ರೆಜಿಸ್ಟರ್ ನಿರ್ವಹಿಸಿಲ್ಲ. ಇದು ಕೆಟಿಪಿಇ ಕಾಯ್ದೆೆ 1999ರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ಗಮನ ಸೆಳೆಯಲಾಗಿದೆ. ಟೆಂಡರ್ ಬದಲು ಕೋಟೇಶನ್ ಮೂಲಕ ಖರೀದಿ ಪ್ರಕ್ರಿಿಯೆ ನಡೆಸಿ ಸರ್ಕಾರಕ್ಕೆೆ ಹಾಗೂ ಸಂಸ್ಥೆೆಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ತನಿಖಾ ತಂಡ ಅಭಿಪ್ರಾಾಯಪಟ್ಟಿಿದೆ.
ಬಾಕ್ಸ್
ಶೆಟಕಾರ್ ಖೇಲ್ ಖತಂ !
ಹಲವು ಗುರುತರ ಆರೋಪಗಳ ನಡುವೆಯೂ ಸೇವೆಯಲ್ಲಿ ಮುಂದುವರೆದಿರುವ ಬ್ರಿಿಮ್ಸ್ ನಿರ್ದೇಶಕ ಶಿವಕುಮಾರ್ ಶೆಟಕಾರ್ಗೆ ಈಗಾಗಲೇ ಸೇವೆಯಿಂದ ಕೈಬಿಡಲಾಗಿತ್ತು. ಆದರೆ, ಕೆಎಟಿ ಮೊರೆ ಹೋಗಿ ಪುನಃ ಸೇವೆಯಲ್ಲಿ ಮುಂದುವರೆದಿದ್ದರು. ಆದರೆ, ಈಗ ತನಿಖಾ ತಂಡ ನೇಮಿಸಿ ಅಕ್ರಮ ನೇಮಕಾತಿ, ಸರ್ಕಾರಕ್ಕೆೆ ಆರ್ಥಿಕ ನಷ್ಟ ಮುಂತಾದ ಲೋಪದೋಷಗಳನ್ನು ಪತ್ತೆೆ ಹಚ್ಚಲಾಗಿದೆ. ವ್ಯಾಾಪಕ ಸಾರ್ವಜನಿಕ ದೂರುಗಳ ಮಧ್ಯೆೆ ತನಿಖಾ ತಂಡದ ವರದಿಯು ಶೆಟಕಾರ್ ಹಾದಿ ಮತ್ತಷ್ಟು ದುರ್ಗಮಗೊಳಿಸಿದೆ ಎಂದು ಹೇಳಬಹುದು. ವೈದ್ಯಕೀಯ ಇಲಾಖೆ ಈಗಾಗಲೇ ಶಿವಕುಮಾರ್ ಶೆಟಕಾರ್ಗೆ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ಗೆ ವಿವರಣೆ ನೀಡದಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವುದು ಕ್ರಮ ಶತಸಿದ್ಧ ಎನ್ನಲಾಗಿದೆ.
ಬ್ರಿಮ್ಸ್ನಲ್ಲಿ ಅವ್ಯವಹಾರ ತನಿಖೆಯಲ್ಲಿ ದೃಢ ಮಂಜಿರಾ ಸಂಸ್ಥೆಗೆ ನಿಯಮಬಾಹಿರವಾಗಿ 1.54 ಕೋಟಿ ರೂ. ಪಾವತಿ !

