ಶಾಂತಿಯನ್ನು ಕಾಪಾಡುವ ಧರ್ಮ ಇಸ್ಲಾಂ : ಮುಸ್ತಫಾ ಖಾದ್ರಿ
ಜೇವರ್ಗಿ : ಯಡ್ರಾಮಿ ಮುಸ್ಲಿಂ ಸೌಹಾರ್ದ ವೇದಿಕೆ ಸಂವಿಧಾನ ವಿರೋಧಿ ಮೀಸಲಾತಿ ಕುರಿತು ಬೃಹತ್ ಸಮಾವೇಶ ಕಾರ್ಯಕ್ರಮ ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಜೇವರ್ಗಿ ೦೩ : ಇಸ್ಲಾಂ ಧರ್ಮ ಶಾಂತಿಯನ್ನು ಹೆಳುತ್ತದೆ ಮತ್ತೆ ಶಾಂತಿಯನ್ನು ಕಾಪಾಡುತ್ತದೆ. ನಾವು ಯಾರ ತಂಟೆಗು ಹೊಗುವುದಿಲ್ಲ, ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಕುಡುವುದಿಲ್ಲ ಎಂದು ಮಳಖೇಡ ನಸೀನ್ ದರ್ಗಾದ ಶದರೀ ಹಜರತ ಸೈಯದ್ ಶಾಹ ಮುಸ್ತಫಾ ಖಾದ್ರಿ ಹೆಳಿದರು.
ಪಟ್ಟಣದ ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜೇವರ್ಗಿ – ಯಡ್ರಾಮಿ ಮುಸ್ಲಿಂ ಸೌಹಾರ್ದ ವೇದಿಕೆ ಸಂವಿಧಾನ ವಿರೋಧಿ ಮೀಸಲಾತಿ ಕುರಿತು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಮುಸ್ಲಿಂ ಸಮುದಾಯದ ಜನರು ಇನ್ನೂ ಮುಂದೆ ಜಾಗೃತರಾಗಬೇಕು. ನಮ್ಮಲ್ಲಿರುವ ಭಿನಮತವನ್ನು ಬಿಟ್ಟು ನಾವೆಲ್ಲರು ಒಂದಾಗಬೇಕು. ನಾವು ಒಂದಾಗದೆ ಇರುವುದಕ್ಕೆ ಈ ಘಟನೆಗಳು ನಡೆಯುತ್ತಿವೆ.
ಸಮಾನತೆಗೆ ತೊಂದರೆ ಬಂದಾಗ ನಾವು ಪ್ರಶ್ನಿಸಬೇಕು, ನಮ್ಮ ಇಸ್ಲಾಂ ಧರ್ಮ ಶಾಂತಿಯನ್ನು ಕಾಪಾಡುತ್ತದೆ. ಇವರು ಏನೆ ಮಾಡಿದರು ಕೂಡ ನಾವು ಸುಮ್ಮನಿದ್ದ ಕಾರಣಕ್ಕೆ ನಮ್ಮ ಮೇಲೆ ಈರೀತಿಯಾಗಿ ಅನ್ಯಾಯವನ್ನು ಮಾಡುತ್ತಿದ್ದರೆ. ಮುಸ್ಲಿಂ ಗೆ ಕೊಟ್ಟಿರುವ ೨ ಬಿ ಮೀಸಲಾತಿಯಿಂದ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎನ್ನುವ ದೃಷ್ಟಿಯಲ್ಲಿ ಈ ಮೀಸಲಾತಿಯನ್ನು ನೀಡಿತ್ತು ಆದರೆ ನಮ್ಮ ಸಮುದಾಯವನ್ನು ಕುಗ್ಗಿಸಲು ಮತ್ತು ಆರ್ಥಿಕವಾಗಿ ಮುಂದೆ ಬರಬಾರದು ಎನ್ನುವ ದೃಷ್ಟಿಕೋನದಲ್ಲಿ ಈ ಮೀಸಲಾತಿ ರದ್ದು ಮಾಡಿದರೆ ಎಂದು ಆರೋಪಿಸದರು.
ಈ ಸಂದರ್ಭದಲ್ಲಿ ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು, ಡಾ. ಅಜಯಸಿಂಗ್, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ರುಕುಂ ಪಟೇಲ್ ಪೊಲೀಸ್ ಪಾಟೀಲ್, ಶೌಕತ್ಅಲಿ ಆಲೂರ, ಖಾಸಿಂ ಪಟೇಲ್ ಪೊಲೀಸ್ ಪಾಟೀಲ್, ಅಬ್ದುಲ್ ರಹೇಮಾನ್ ಪಟೇಲ್, ರಿಯಾಜ್ ಪಟೇಲ್ ಮುಧೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.