ಸುದ್ದಿಮೂಲ ವಾರ್ತೆ ಬೆಂಗಳೂರು, ಜ.22:
ರಾಜ್ಯ ಸರಕಾರವು ಸದನದ ಪಾವಿತ್ರ್ಯತೆಯನ್ನು ಹಾಳು ಮಾಡುವ ಕೆಲಸಕ್ಕೆೆ ಕೈ ಹಾಕಿರುವುದು ದುರ್ದೈವ ಎಂದು ಬಿಜೆಪಿ ರಾಜ್ಯಾಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದನವು ಈ ನಾಡಿನ ಏಳಿಗೆಗೆ, ನಾಡಿನ ಅಭಿವೃದ್ಧಿಿಗೆ ಸಂಬಂಧಿಸಿ ಚರ್ಚೆ ಆಗಲು ವೇದಿಕೆ ಆಗಬೇಕೇ ವಿನಾ ಇವರ ರಾಜಕೀಯ ದ್ವೇಷಕ್ಕಾಾಗಿ ರಾಜ್ಯವನ್ನು ಕೇಂದ್ರ ಸರಕಾರದ ವಿರುದ್ಧ ಎತ್ತಿಿ ಕಟ್ಟುವ ಷಡ್ಯಂತ್ರ-ಕುತಂತ್ರಕ್ಕೆೆ ಸದನವನ್ನು ಬಳಸುವುದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ತಿಳಿಸಿದರು.
ಗೌರವಾನ್ವಿಿತ ರಾಜ್ಯಪಾಲರು ಸಂವಿಧಾನಬದ್ಧವಾಗಿ ಇರುವ ಅವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಆದರೆ, ಗೌರವಾನ್ವಿಿತ ರಾಜ್ಯಪಾಲರಿಗೆ ಸದನದ ಹೊರಗಡೆಯೂ ನೀವು ಅಪಮಾನ ಮಾಡುತ್ತೀರಿ. ಜಂಟಿ ಸದನವನ್ನುದ್ದೇಶಿಸಿ ಮಾತನಾಡಿ ತೆರಳುವ ಸಂದರ್ಭದಲ್ಲಿ ಅವರಿಗೆ ಸದನದ ಒಳಗಡೆಯೂ ತಡೆ ಒಡ್ಡಲಾಗಿದೆ; ಅವರ ಮೇಲೆ ದಬ್ಬಾಾಳಿಕೆ ಮಾಡಲಾಗಿದೆ. ಇದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
ನಿನ್ನೆೆ ನಾನು ಮಾನ್ಯ ಕಾನೂನು ಸಚಿವ ಎಚ್.ಕೆ.ಪಾಟೀಲರ ಮಾತುಗಳನ್ನೂ ಗಮನಿಸಿದ್ದೇನೆ. ಮಾನ್ಯ ರಾಜ್ಯಪಾಲರ ಜೊತೆ ಆದ ಮಾತುಕತೆಯನ್ನು ಮುಖ್ಯಮಂತ್ರಿಿಗಳ ಬಳಿ ಹೇಳಿಕೊಳ್ಳಬೇಕಿತ್ತು. ಹೊರಗಡೆ ಬಂದು ರಾಜ್ಯಪಾಲರು ಸದನ ಬಹಿಷ್ಕರಿಸುತ್ತಾಾರೆಂಬ ಧಾಟಿಯಲ್ಲಿ ಕಾನೂನು ಸಚಿವರೇ ಮಾತನಾಡುವುದಾದರೆ, ಸಂವಿಧಾನಕ್ಕೆೆ ಇವತ್ತು ರಾಜ್ಯದ ಕಾಂಗ್ರೆೆಸ್ ಸರಕಾರ ಅಪಚಾರ ಮಾಡುತ್ತಿಿದೆ. ಸಿದ್ದರಾಮಯ್ಯನವರ ಸರಕಾರ ಈ ಕೆಲಸ ಮಾಡುತ್ತಿಿದೆ ಎಂದು ಆಕ್ಷೇಪಿಸಿದರು.
ರಾಜ್ಯಪಾಲರಿಗೆ ಅಪಮಾನ ಮಾಡಿದ್ದನ್ನು ಬಿಜೆಪಿ ಖಂಡಿಸುತ್ತದೆ. ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಿ ಎಂಬುದನ್ನು ಮತ್ತೆೆ ಮತ್ತೆೆ ನೆನಪಿಸಲು ಬಯಸುವುದಾಗಿ ಹೇಳಿದರು. ಇವರು ಕಾಂಗ್ರೆೆಸ್ ಪಕ್ಷದ ಮುಖ್ಯಮಂತ್ರಿಿ ಅಲ್ಲ; ರಾಜ್ಯದ ಮುಖ್ಯಮಂತ್ರಿಿಗಳು; ಅದಕ್ಕೆೆ ತಕ್ಕಂತೆ ಅವರ ನಡವಳಿಕೆಯೂ ಇರಬೇಕಿತ್ತು ಎಂದು ಹೇಳಿದರು.
ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ವಿಜಯೇಂದ್ರ

