ಸುದ್ದಿಮೂಲ ವಾರ್ತೆ
ಹೊಸಕೋಟೆ.ಅ.1:ಸಮುದಾಯ ಮನಸ್ಸು ಮಾಡಿದರೆ ಈ ಪರಿಕಲ್ಪನೆ ಸಾಕಾರಗೊಳ್ಳುವುದು ಕಷ್ಟಸಾಧ್ಯವೇನಲ್ಲ. ಇದರಿಂದ ಗ್ರಾಮಗಳ ಚಿತ್ರವೇ ಬದಲಾಗಬಹುದು. ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ ತಿಳಿಸಿದರು.
ಹೊಸಕೋಟೆ ತಾಲೂಕಿನ ನಂದುಗುಡಿ ಸಮೀಪ ಇರುವ ಎಚ್ ಕ್ರಾಸಿನ ಶನಿಮಹಾತ್ಮ ದೇವಾಲಯ ಸಂತೆ ಆವರಣದಲ್ಲಿ ಸ್ವಚ್ಛತಾ ಸಮಾದಾನಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು ನಮ್ಮ ನಡೆ ಸ್ವತ್ಛತೆಯ ಕಡೆ. ಗ್ರಾಮ ಸ್ವತ್ಛತೆ ಗ್ರಾಮ ಎಂಬ ಅಭಿಯಾನದಡಿ ಯುವಕರ ಮತ್ತು ಸವರ್ವಜನಿಕರು. ತಮ್ಮ ಗ್ರಾಮಗಳಲ್ಲಿ ಸ್ವತ್ಛತೆಯ ಕ್ರಾಂತಿ ಮಾಡಬೇಕು ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಿ ಗ್ರಾಮಗಳ ಬಗ್ಗೆ ಜನರಲ್ಲಿರುವ ಅಸಡ್ಡೆಯನ್ನು ದೂರ ಮಾಡುವ ಮಹತ್ಕಾರ್ಯಕ್ಕೆ ಮುಂದಾಗಿಬೇಕು. ಅವರನ್ನು ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತದೆ. ನಂತರ ಉತ್ತಮ ಆರೋಗ್ಯಕ್ಕೆ ಉತ್ತಮ ಪರಿಸರ ಬೇಕು ಎಂಬ ಸಂದೇಶವನ್ನು ಗ್ರಾಮದ ಜನರಿಗೆ ಹಂಚುವುದಲ್ಲದೆ ಅವರ ಮನ ಪರಿವರ್ತನೆ ಮಾಡುವ ಪ್ರಯತ್ನ ಮಾಡುತ್ತದೆ.
ಗ್ರಾಮದ ಸ್ವತ್ಛತೆ ಮತ್ತು ಸುಂದರ ಪರಿಸರದ ಅರಿವು ಅವರಲ್ಲಿ ಸಹ ಮೂಡುತ್ತದೆ ಎಂಬುದು ಇದರ ಉದ್ದೇಶ. ಗ್ರಾಮದಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ದೇವಸ್ಥಾನದ ಆವರಣ, ಪ್ರಾಥಮಿಕ ಶಾಲೆ, ಪ್ರಾಥಮಿಕ ಅರೋಗ್ಯ ಕೇಂದ್ರ, ಮೊದಲಾದ ಸ್ಥಳಗಳಲ್ಲಿ ಈ ಸ್ವತ್ಛತಾ ಕಾರ್ಯ ನಡೆಯುತ್ತದೆ. ಶ್ರಮದಾನ ಕಾರ್ಯ ಪೂರ್ಣಗೊಂಡ . ಈ ಮೂಲಕ ಸ್ವತ್ಛತೆ ಮಾಡುವುದರ ಜತೆಗೆ ಪರಿಸರವನ್ನು ಬೆಳೆಸುವುದು ನಮ್ಮ ಮುಖ್ಯ ಗ್ರಾಮ ಪಂಚಾಯತಿ ಉದ್ದೇಶವಾಗಿದೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ್ ಪಂಚಾಯತಿ ಅಧ್ಯಕ್ಷ ಹೆಚ್ ಎನ್ ಮೂರ್ತಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗಲಕ್ಷ್ಮಿ ಸಿದ್ದಲಿಂಗ ಮೂರ್ತಿ ಚನ್ನಮ್ಮ ನಾಗರಾಜಪ್ಪ ಬೈರೇಗೌಡ ಪಿಡಿಒ ಪ್ರಶಾಂತ್ ಹಾಗೂ ಪಂಚಾಯತಿ ಸಿಬ್ಬಂದಿ ಪಾಲ್ಗೊಂಡಿದ್ದರು
01. ಹೊಸಕೋಟೆ 1. ನಂದಗುಡಿ ಸಮೀಪ ಇರುವ ಎಚ್ ಕ್ರಾಸಿನ ಶನಿಮಹಾತ್ಮ ದೇವಾಲಯ ಆವರಣದಲ್ಲಿ ಸ್ವಚ್ಛತಾ ಶಮದಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ ಪಿಡಿಒ ಪ್ರಶಾಂತ್ ಸದಸ್ಯರುಗಳು ಭಾಗವಹಿಸಲು ಭಾವಚಿತ್ರಗಳು