ಬಳ್ಳಾರಿ : ಸಚಿವ ಬಿ. ಶ್ರೀರಾಮುಲು ಹಾಗೂ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಆಪ್ತರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.
ಬಿ. ಶ್ರೀರಾಮುಲು ಮತ್ತು ಟಿ.ಎಚ್. ಸುರೇಶ್ ಬಾಬು ಮಾಲೀಕತ್ಚದ ಫ್ಯಾಕ್ಟರಿಯನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದ ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಮತ್ತು ಇವರ ಪಾಲುದಾರಿಕೆಯ ಕಂಪನಿಗಳ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಬೆಂಗಳೂರು, ಚೆನೈ ಮೂಲದ ಹದಿನೈದು ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿ ದಾಳಿ ಕಳೆದ ಎರಡು ದಿನಗಳಿಂದ ನಿಯೋಜಿತ ಸ್ಥಳಗಳಲ್ಲಿ ತಂಗಿ, ದಾಳಿಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಳ್ಳಾರಿಯ ವಿದ್ಯಾನಗರದ ರಾಗಾಸ್ ಅಪಾರ್ಟ್ಮೆಂಟ್ ನ ಫ್ಲಾಟ್ ನಂಬರ್ 310 ಮತ್ತು 510ಪ್ಲಾಟ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ದಾಖಲೆಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗಿದೆ.
ಹರಿ ಇಸ್ಪಾತ್ ಫ್ಯಾಕ್ಟರಿಯನ್ನು ಸಚಿವ ಬಿ. ಶ್ರೀರಾಮುಲು ಹಾಗೂ ಕೈಲಾಸ್ ವ್ಯಾಸ್ ಕರೀದಿಸಿದ್ದು, ಈ ಹಣದ ಮೂಲವನ್ನು ಅಧಿಕಾರಿಗಳು ಕೆದಕುತ್ತಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಬೆಳಗಲ್ಲು ಗ್ರಾಮದ ವ್ಯಾಪ್ತಿಯ ಮಹಾಮಾನವ ಅದಿರು ವಾಷಿಂಗ್ ಪ್ಲಾಂಟ್, ಕೊಪ್ಪಳದ ಸಿಮ್ಲಾ ಡಾಬ ಬಳಿಯ ಅದಿರು ವಾಷಿಂಗ್ ಪ್ಲಾಂಟ್, ಬಳ್ಳಾರಿಯ ವೆಂಕಟೇಶ್ವರ,
ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್ ಗೆ ಸೇರಿದ ದಾಖಲೆಗಳಿ ಅಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ ಸಿಕ್ಕಿವೆ ಎಂದು ಹೇಳಲಾಗುತ್ತದೆ.
ಸಚಿವ ಬಿ. ಶ್ರೀರಾಮುಲು, ನನ್ನದು ಯಾವುದೇ ಕೈಗಾರಿಕೆಗಳು ಇಲ್ಲ. ಕೈಗಾರಿಕೆಗಳಲ್ಲಿ ನನ್ನ ಪಾಲುದಾರಿಕೆಯೂ ಇಲ್ಲ. ಗಣಿಗಾರಿಕೆ ನಡೆಯುವಾಗಲೂ ನನ್ನಲ್ಲಿ ಗಣಿ ಅಥವಾ ಕೈಗಾರಿಕೆ ಇರಲಿಲ್ಲ. ಕಾನೂನಿನ ಪ್ರಕಾರ ಐಟಿ ದಾಳಿಗಳು ನಡೆದಿವೆ ಎಂದು ಸುದ್ದಿಗಾರರಿಗರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.