ಸುದ್ದಿಮೂಲ ವಾರ್ತೆ ಕೊಪ್ಪಳ, ಜ.13
ಹಳ್ಳದಲ್ಲಿ ಹರಿಯುವ ನೀರು ನಿಲ್ಲಿಸುವ ಉದ್ದೇಶದಿಂದ ಹಳ್ಳಕ್ಕೆೆ ಬ್ಯಾಾರೇಜ್ ನಿರ್ಮಿಸಲಾಗಿದೆ. ಆದರೆ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಹಳ್ಳದಲ್ಲಿಯ 20 ಕ್ರಸ್ಟ್ ಗೇಟ್ ಗಳನ್ನು ಯಾರೋ ಕಳ್ಳರು ಕದ್ದಿದ್ದರು. ಕಳ್ಳರು ಸಿಕ್ರು. ಆದರೂ ಇಲ್ಲಿಯವರೆಗೆ ಮರಳಿ ಕ್ರಸ್ಟ್ ಗೇಟ್ ಅಳವಡಿಸದೆ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಕೊಪ್ಪಳ ಜಿಲ್ಲೆೆಯ ಕುಕನೂರು ತಾಲೂಕಿನ ಮಂಗಳೂರು ಬಳಿ ಹರಿಯುವ ಹಿರೇಹಳ್ಳದಲ್ಲಿ ಸರಣಿ ಬ್ರಿಿಡ್ಜ್ ಕಂ ಬ್ಯಾಾರೇಜ್ ಗಳನ್ನು ನಿರ್ಮಿಸಲಾಗಿದೆ. ಹರಿಯುವ ನೀರು ನಿಲ್ಲಿಸಿ ಹಳ್ಳದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳ. ದನ ಕರುಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದೆ. ಮಂಗಳೂರು ಬಳಿ ಆರು ವರ್ಷಗಳ ಹಿಂದೆ ಬ್ರಿಿಡ್ಜ್ ಕಂ ಬ್ಯಾಾರೇಜ್ ನಿರ್ಮಿಸಿದ್ದು. ಇಲ್ಲಿ ನೀರು ನಿಂತು ಮಂಗಳೂರು ಗ್ರಾಾಮಸ್ಥರಿಗೆ ನೀರು ಒದಗಿಸುತ್ತಿಿತ್ತು. ಆದರೆ ಈಗ ಹಳ್ಳ ಖಾಲಿ ಖಾಲಿಯಾಗಿದೆ.
ಮಂಗಳೂರು ಬ್ರಿಿಡ್ಜ್ ಕಂ ಬ್ಯಾಾರೇಜ್ ಗೆ 20 ಕ್ರಸ್ಟ್ ಗೇಟ್ ಗಳನ್ನು ಅಳವಡಿಸಲಾಗಿದೆ. ಒಂದೊಂದು ಕ್ರಸ್ಟ್ ಗೇಟ್ ಸರಿಸುಮಾರು ಒಂದು ಕ್ವಿಿಂಟಾಲ್ ತೂಕ ಇವೆ. ಈ 20 ಗೇಟ್ ಗಳನ್ನು ಖದೀಮರು ಕದ್ದಿದ್ದರು. 2023 ಅಕ್ಟೋೋಬರ್ ತಿಂಗಳಲ್ಲಿ ಬೇವೂರು ಪೊಲೀಸರು ಕಳ್ಳರನ್ನು ಬಂಧಿಸಿದ್ದರು. ಕಳ್ಳರು ಕ್ರಸ್ಟ್ ಗೇಟ್ ಕದ್ದಿದ್ದೆೆ ನೆಪ ಮಾಡಿಕೊಂಡು ಇಲ್ಲಿಯವರೆಗೂ ಹೊಸ ಕ್ರಸ್ಟ್ ಗೇಟ್ ಗಳನ್ನು ಅಳವಡಿಸಿಲ್ಲ.
ಈಗ ಕೃಷ್ಣಾಾ ನದಿಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ಮುರಡಿ ಕೆರೆ ತುಂಬಿ ಈ ನೀರು ಹಳ್ಳಕ್ಕೆೆ ಬರುತ್ತಿಿದೆ. ಈ ನೀರು ನಿಲ್ಲಿಸಬೇಕು ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರು ತಡೆಯುವ ಗೇಟ್ ಗಳು ಇಲ್ಲದೆ ನೀರು ಹರಿದು ಹೋಗುತ್ತಿಿದೆ. ಇದರಿಂದ ರೈತರು ನಿರಾಶೆಗೊಂಡಿದ್ದಾಾರೆ.
ಕೃಷ್ಣಾಾ ನದಿ ನೀರಿಗಾಗಿ ಈ ಭಾಗದ ರೈತರು ಹೋರಾಟ ಮಾಡಿದ್ದಾಾರೆ. ಈಗ ಕೃಷ್ಣಾಾ ನೀರು ಬಂದಿದೆ. ಆದರೆ ಅದನ್ನು ಬಳಕೆ ಮಾಡಲು ಆಗುತ್ತಿಿಲ್ಲ. ಇದು ನಮ್ಮ ದುರಂತ ನಾವು ಪಾದಯಾತ್ರೆೆ ಮಾಡಿದಾಗ ನೋವು ಆಗಿರಲಿಲ್ಲ ಆದರೆ ಈಗ ನೀರು ಹರಿದು ಹೋಗುತ್ತಿಿರುವುದರಿಂದ ನೋವಾಗಿದೆ ಎನ್ನುತ್ತಾಾರೆ ಗ್ರಾಾಮಸ್ಥರು
ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜೆನೀಯರ್ ಜಗನ್ನಾಾಥರನ್ನು ಕೇಳಿದರೆ ಈಗ 40 ಲಕ್ಷ ರೂಪಾಯಿ ಯೋಜನೆ ಸಿದ್ದವಾಗಿ ಸರ್ಕಾರದಿಂದ ಮಂಜೂರಾತಿ ಸಿಕ್ಕಿಿದೆ. ಇಷ್ಟರಲ್ಲಿ ಟೆಂಡರ್ ಕರೆದು ಇನ್ನೇರೆಡು ತಿಂಗಳಲ್ಲಿ ಕ್ರಸ್ಟ್ ಗೇಟ್ ಅಳವಡಿಸಲಾಗುವುದು ಎಂದು ತಿಳಿಸಿದ್ದಾಾರೆ.
ಮಂಗಳೂರು ಬ್ರಿಡ್ಜ್ ಕಂ ಬ್ಯಾಾರೇಜ್ಗೆ ಕ್ರಸ್ಟ್ ಗೇಟ್ ಕೂಡಿಸಲು 2 ವರ್ಷ ಬೇಕಾ? ಕಳ್ಳತನವಾಗಿದ್ದ ಕ್ರಸ್ಟ್ಗೇಟ್ ಅಳವಡಿಸಲು ಮೀನಾಮೇಷ

