ಸುದ್ದಿಮೂಲ ವಾರ್ತೆ ಕುಕನೂರ, ಡಿ.25:
ತಾಲ್ಲೂಕಿನ ಇಟಗಿ ಗ್ರಾಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಾಥಮಿಕ ಶಾಲೆಯ 75ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮವು ಡಿ. 27 ಹಾಗೂ 28ರಂದು ಎರಡು ದಿನಗಳ ಕಾಲ ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ವಜ್ರ ಮಹೋತ್ಸವ ಆಚರಣಾ ಸಮಿತಿ ಹಾಗೂ ಶಾಲಾ ಅಭಿವೃದ್ಧಿಿ ಮತ್ತು ನಿರ್ವಹಣಾ ಸಮಿತಿ (ಎಸ್ಡಿಿಎಂಸಿ) ಪದಾಧಿಕಾರಿಗಳು ತಿಳಿಸಿದ್ದಾರೆ.
ಇಟಗಿ ಗ್ರಾಾಮದ ಶಾಲಾ ಆವರಣದಲ್ಲಿ ನಡೆದ ಪತ್ರಿಿಕಾಗೋಷ್ಠಿಿಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ನವೀನಕುಮಾರ ಗುಳಗಣ್ಣವರ, ಅವರು, 1950ರಲ್ಲಿ ಸ್ಥಾಾಪನೆಯಾದ ಈ ಶಾಲೆಯು ಕಳೆದ 75 ವರ್ಷಗಳಿಂದ ಗ್ರಾಾಮೀಣ ಭಾಗದ ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆೆ ಅನೇಕ ಸಾಧಕರನ್ನು ನೀಡಿದೆ ಎಂದು ತಿಳಿಸಿದರು. ವಜ್ರ ಮಹೋತ್ಸವವನ್ನು ಎಲ್ಲರೂ ಸೇರಿ ಯಶಸ್ವಿಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ್, ನಿವೃತ್ತ ಉಪನ್ಯಾಾಸಕ ಹಾಗೂ ಸಾಹಿತಿ ಬಿ.ಎಂ. ಹಳ್ಳಿಿ, ಸಿದ್ದಪ್ಪ ಸಜ್ಜನ್, ಎಸ್ಡಿಿಎಂಸಿ ಅಧ್ಯಕ್ಷ ಲಿಂಗರಾಜ್ ಹೊಸಭಾವಿ, ರತ್ನಮ್ಮ ಭಜಂತ್ರಿಿ, ಗ್ರಾಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭುರಾಜ್ ಹಳ್ಳಿಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ಮಹೇಶ್ ದೊಡ್ಮನಿ, ವಿರುಪಾಕ್ಷಪ್ಪ ಹುರುಳಿ, ಶರಣಪ್ಪ ಅರಿಕೇರಿ, ಮಹೇಶ್ ಹಿರೇಮನಿ, ಶಾಲೆಯ ಶಿಕ್ಷಕರಾದ ವೀರಣ್ಣ ಕೊನಾರಿ ಸೇರಿದಂತೆ ಇತರೆ ಶಿಕ್ಷಕರು ಹಾಗೂ ಗ್ರಾಾಮದ ಯುವಕರು ಉಪಸ್ಥಿಿತರಿದ್ದರು.
ಇಟಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 75ರ ಸಂಭ್ರಮ ಡಿ.27-28ರಂದು ವಜ್ರಮಹೋತ್ಸವ

